ಸರ್ಪ ಸುತ್ತು ಅನೋದು ಒಂದು ದೊಡ್ಡ ರೋಗವಲ್ಲ ಆದರೂ ಅದರ ತೀವ್ರತೆ ಹೆಚ್ಚಾಗಿರುತ್ತದೆ ಮತ್ತು ಇದು ಒಂದು ಜಾಗದಿಂದ ಪ್ರಾಂಭವಾಗಿ ಮತ್ತೆ ಅದೇ ಜಾಗಕ್ಕೆ ಬಂದು ಕೂಡಿಕೊಳ್ಳುತ್ತದೆ ಹೇಗೆ ಅಂದರೆ ನಿಮ್ಮ ಬೆನ್ನಿನ ಬಲ ಭಾಗದಲ್ಲಿ ಈ ಸರ್ಪ ಸುತ್ತು ಆದರೆ ಅದು ಅಲ್ಲಿನ ಬಲ ಭಾಗದಿಂದ ಒಂದು ಸುತ್ತು ಹಾಕಿಕೊಂಡು ಎಡ ಭಾಗಕ್ಕೆ ಬಂದು ಅಲ್ಲಿಂದ ಮತ್ತೆ ಅದು ಶುರುವಾದ ಬಲ ಭಾಗಕೆ ಬಂದು ತಲುಪುತ್ತದೆ ಹಾಗೆ ಇದರ ನೋವು ಕೂಡ ಅಷ್ಟೇ ಹೆಚ್ಚಾಗಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗು ಬರುವಂತ ರೋಗವಲ್ಲ ಕೆಲವರಿಗೆ ಮಾತ್ರ ಈ ರೋಗ ಬರುತ್ತದೆ. ಇನ್ನು ಇದಕ್ಕೆ ಹಲವಾರು ರೀತಿಯಾದ ಮನೆಮದ್ದು ಇವೆ ಈ ರೋಗವನ್ನು ಹೋಗಲಾಡಿಸಲು, ಯಾವ ಯಾವ ರೀತಿಯಾದ ಮನೆಮದ್ದು ಅನ್ನೋದು ಇಲ್ಲಿದೆ ನೋಡಿ.

ಮೊದಲನೇದಾಗಿ ನಿಮ್ಮ ದೇಹದ ಯಾವ ಭಾಗದಲ್ಲಿ ಈ ಸರ್ಪ ಸುತ್ತು ಆಗಿರುತ್ತದೋ ಆ ಜಾಗಕ್ಕೆ ನಿಮ್ಮ ಮನೆಯಲ್ಲಿ ಸಿಗುವ ಶುದ್ಧವಾಗಿರುವ ಜೇನುತುಪ್ಪವನ್ನು ತೆಳ್ಳಗೆ ಲೇಪ ಮಾಡಿದರೆ ನೋವು, ತುರಿಕೆ ಕಡಿಮೆಯಾಗುತ್ತದೆ. ಹಾಗೆ ನಿಮ್ಮ ಮನೆಯ ಹತ್ತಿರ ಸಿಗುವ ದಾಸವಾಳದಿಂದ ಇದಕ್ಕೆ ಮದ್ದು ಇದೆ ದಾಸವಾಳದ ದಳಗಳನ್ನು ನೀರಲ್ಲಿ ಪೇಸ್ಟ್‌ ಮಾಡಿ ಗುಳ್ಳೆಗಳ ಮೇಲೆ ಲೇಪಿಸಿದರೆ ಉರಿ, ನೋವು ಮತ್ತು ಗುಳ್ಳೆಗಳು ಶಮನವಾಗುತ್ತವೆ.

ಇನ್ನು ಈ ರೀತಿಯಾಗಿ ಮಾಡಿದರು ನೀವು ಈ ಸರ್ಪ ಸುತ್ತು ಹೋಗಲಾಡಿಸಬಹುದು ಇನ್ನು ಯಾವೆಲ್ಲ ಮನೆಮದ್ದು ಅನೋದು ಇಲ್ಲಿವೆ ನೋಡಿ ಜೇಷ್ಠಮಧುಗೆ ನೀರನ್ನು ಬೆರೆಸಿ ಕಷಾಯ ಮಾಡಿ ಸೇವಿಸಿದರೆ ಪಿತ್ತ ಶಮನವಾಗಿ ರಕ್ತ ಶುದ್ಧಿಯಾಗುತ್ತದೆ ಸರ್ಪಸುತ್ತು ಕಡಿಮೆಯಾಗುತ್ತದೆ.ಸರ್ಪಸುತ್ತು ಆದ ಜಾಗಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ದಿನಕ್ಕೆ 2ರಿಂದ 3 ಬಾರಿ ಹಚ್ಚಿದರೆ ಉರಿ, ಕಡಿತ ಕಡಿಮೆಯಾಗಿ ಚರ್ಮ ಮೃದುವಾಗುತ್ತದೆ. ಇದನ್ನು ಸಹ ಒಮ್ಮೆ ಬಳಸಿ ನೋಡಿ ಇದರಿಂದ ಕಡಿಮೆಯಾಗುತ್ತದೆ.

ಇನ್ನು ನಿಮ್ಮ ಮನೆಯಲ್ಲೇ ಸಿಗುವ ಹಸುವಿನ ಹಾಲಿಗೆ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಶುದ್ಧಿಯಾಗಿ ಸರ್ಪಸುತ್ತು ಕಡಿಮೆಯಾಗುತ್ತದೆ. ಸರ್ಪಸುತ್ತು ಇರುವ ಜಾಗಕ್ಕೆ ಅಲೋವೆರಾ ಜೆಲ್‌ ಜತೆ ಜೇನುತುಪ್ಪ ಸೇರಿಸಿ ಲೇಪ ಮಾಡಿದರೆ ಬೇಗ ಗಾಯಗಳು ಮಾಯುತ್ತದೆ ಮತ್ತು ಕಲೆಗಳೂ ಇರುವುದಿಲ್ಲ.

ಹಾಗೆ ಇದು ಸಹ ಒಂದು ಉತ್ತಮ ಮನೆಮದ್ದು ಆಗಿದೆ ಬಾಳೆ ಎಲೆಯನ್ನು ನೀರಲ್ಲಿ ಪೇಸ್ಟ್‌ ಮಾಡಿ ಸರ್ಪಸುತ್ತು ಆದ ಜಾಗಕ್ಕೆ ಹಚ್ಚಿದರೆ ಉರಿ, ನೋವು ಎಲ್ಲಾ ಕಡಿಮೆಯಾಗಿ ಬೇಗ ಗುಣವಾಗುತ್ತದೆ. ಅಮೃತಬಳ್ಳಿ ಕಷಾಯವನ್ನು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತ ಶುದ್ಧಿಯಾಗಿ ಸರ್ಪಸುತ್ತು ಗುಣವಾಗುತ್ತದೆ. ಈ ರೀತಿಯಾಗಿ ಮಾಡಿ ನೋಡಿ ಸಾಧ್ಯವಾದಷ್ಟು ನಿಮ್ಮ ಈ ರೋಗ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *