ನಾವು ಬದುಕಬೇಕು ಅಂದ್ರೆ ಜೀವನದಲ್ಲಿ ಛಲ ಅನ್ನೋದು ತುಂಬಾಮುಖ್ಯ ಛಲ ಇದ್ರೆ ಏನು ಬೇಕಾದರೂ ಸಾದಿಸಬಹುದು, ಪೋಲಿಯೋದಿಂದ ಎರಡು ಕಾಲು ಕಳೆದುಕೊಂಡರೂ ರಹಮತ್ ಬದುಕುವ ಛಲ ಬಿಟ್ಟಿಲ್ಲ.
ಬಾಲ್ಯದಲ್ಲೇ ಪೊಲೀಯೋ ರೋಗಕ್ಕೆ ತುತ್ತಾಗಿ ಎರಡೂ ಕಾಲನ್ನು ಕಳೆದುಕೊಂಡಿರೋ ರಹಮತ್ ಇವರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಹೈದರಾಲಿ ನಗರ ನಿವಾಸಿಯಾಗಿದ್ದು, ಕೈಗಳನ್ನೇ ಕಾಲುಗಳಂತೆ ನೆಲಕ್ಕೂರಿ ನಡೆಯೋ ಇವರಿಗೆ ಈ ಅಂಗವೈಕಲ್ಯವನ್ನೇ ಮೆಟ್ಟಿ ನಿಂತ ಖುಷಿ ಇದೆ.
ರಹಮತ್ ಕೈಲಾಗದವಳು ಅಂತ ಯಾರೂ ನನ್ನತ್ತ ಬೊಟ್ಟು ತೋರಬಾರದು ಎಂದು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಅಗರ್‍ಬತ್ತಿ ತಯಾರಿಕೆ, ಮನೆ ಕೆಲಸದ ಮಾಡುತ್ತಲೇ ಆಟೋ ಖರೀದಿಸಿ, ಈಗ ಆಟೋದಲ್ಲಿ ಅಂದದ ಬದಕು ಕಟ್ಟಿಕೊಂಡಿದ್ದಾರೆ.
ರಹಮತ್ ಭಿಕ್ಷೆ ಬೇಡೋದಕ್ಕಿಂತ ದುಡಿದು ತಿನ್ನೋದರಲ್ಲಿ ಸಂಭ್ರಮ ಪಡುತ್ತಿದ್ದಾರೆ. ಅಂಗವಿಕಲರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವಲ್ಲಿ ತಾವೇ ಮುಂದೆ ನಿಂತು ಸಹಾಯ ಮಾಡ್ತಾರೆ. ಈ ಮೂಲಕ ಸಮಾಜಮುಖಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಂಗವಿಕಲೆಯಾದರೂ ಅಬಲೆಯಲ್ಲ ಎಂದು ಬದುಕ್ತಿರೋ ರಹಮತ್ ನಿಜವಾಗಿಯೂ ಮಾದರಿಯೇ ಸರಿ.