ಈ ಅಕ್ಕಿ ಹಿಟ್ಟಿನಲ್ಲಿ ಚರ್ಮದ ಮೆಲನಿನ್ ಅಂಶವನ್ನು ಕಡಿಮೆ ಮಾಡುವ ತೈರೊಸೈನೇಸ ಅಂಶವಿದೆ. ಇದರಲ್ಲಿರುವ ವಿಟಮಿನ್ ಬಿ ಹೊಸ ಕೋಶಗಳ ಉತ್ಪತ್ತಿ ಮಾಡುತ್ತದೆ ಹಾಗೂ ಸುಕ್ಕಾಗುವುದನ್ನ ತಡೆಯುತ್ತದೆ. ಇದ್ದು ಹೆಚ್ಚಿನ ಎಣ್ಣೆ ಅಂಶವನ್ನು ತೆಗುದು ಹಾಕಿ ಮುಖವು ಕಾಂತಿಯುತವಾಗಿ ಕಾಣಲು ಸಹಕರಿಸುತ್ತದೆ. ಆಗಾಗಿ ನಿಮ್ಮ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಅದು ಹೇಗೆ ಅನ್ನೋದನ್ನ ಮುಂದೆ ಓದಿ ತಿಳಿದುಕೊಳ್ಳಿ.
ಅಕ್ಕಿ ಹಿಟ್ಟು ಮತ್ತು ಹಾಲು: ಮೊದಲು ಒಂದು ಚಮಚ ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲು ಬೆರೆಸಿ ಪೇಸ್ಟ್ ತಯಾರಿಸಿ ಕೊಳ್ಳಿ ನಂತರ ಇದನ್ನ ಮುಖಕ್ಕೆ ಹಚ್ಚಿ ಒಣಗಿದ ನಂತರ ತಣ್ಣೀರಿನ ಸಹಾಯದಿಂದ ನಿದಾನವಾಗಿ ಮಸಾಜ್ ಮಾಡಿ ಸ್ವಚ್ಛಗೊಳಿಸಿ.
ಅಕ್ಕಿ ಹಿಟ್ಟು ಮತ್ತು ನಿಂಬೆ ರಸ: ನಾಲ್ಕು ಚಮಚ ಅಕ್ಕಿ ಹಿಟ್ಟಿಗೆ ಚಿಟಿಕೆ ಅರಿಶಿನ ಹಾಗೂ 3 ಚಮಚ ನಿಂಬೆರಸ ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿ ಕೊಳ್ಳಿ, 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಅಕ್ಕಿ ಹಿಟ್ಟು ಮತ್ತು ಲೋಳೆರಸ: ಲೋಳೆರಸ ಹಾಗೂ ಅಕ್ಕಿ ಹಿಟ್ಟನ್ನ ಮಿಶ್ರಣಮಾಡಿ ಸ್ವಲ್ಪ ಹೊತ್ತು ಬಿಟ್ಟು ಮುಖಕ್ಕೆ ಹಚ್ಚಿ ಕೊಳ್ಳಿ ಅದು ಒಣಗಿದ ನಂತರ ತಣ್ಣೀರಿನಿಂದ ಮುಖತೊಳೆಯಿರಿ. ಹೀಗೆ ಮಾಡಿದರೆ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.