ಪ್ರತಿ ವರ್ಷ ರಕ್ಷಾಬಂಧನ ಹಬ್ಬವನ್ನು ಸಾವನ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಹಬ್ಬ ಅಣ್ಣ-ತಂಗಿ ಪ್ರೀತಿಯ ಪ್ರತೀಕ. ಈ ಬಾರಿ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 11 ರಂದು ಆಚರಿಸಲಾಗುವುದು. ರಕ್ಷಾಬಂಧನದ ದಿನದಂದು, ಸಹೋದರಿಯರು ಸಹೋದರರ ಮೇಲೆ ಪ್ರೀತಿಯ ದಾರವನ್ನು ಕಟ್ಟುತ್ತಾರೆ, ಇದನ್ನು ರಕ್ಷಾಬಂಧನ ಎಂದು ಕರೆಯಲಾಗುತ್ತದೆ. ಅಕ್ಕ ತಂಗೀರ ಅಚ್ಚುಮೆಚ್ಚಿನ ಹಬ್ಬ ರಾಖಿ ರಕ್ಷಾ ಬಂಧನ ದಿನ ಹೊಸ ಬಟ್ಟೆ ತೊಟ್ಟುಕೊಂಡು ಅಲಂಕಾರ ಮಾಡಿಕೊಂಡು ಆರತಿಯನ್ನು ಮಾಡಿ ಸಹೋದರರ ಹಣೆಗೆ ತಿಲಕವನ್ನು ಇಟ್ಟು ರಾಖಿ ಕಟ್ಟಿ ಹುಡುಗರ ಹತ್ತಿರ ಹಣವನ್ನು ಕೇಳುತ್ತಾರೆ ಅವರದ್ದು ಪ್ರತಿ ವರ್ಷ ಅದೇ. ಅವರ ಹಣ ಕೊಡುವುದಿಲ್ಲ ಅವರು ಕೊಡುವ ವರೆಗೆ ನಾವು ಬಿಡುವುದಿಲ್ಲ.
ಇದು ಪ್ರತಿ ವರ್ಷ ಇದ್ದೇ ಇದೆ ಶ್ರಾವಣ ಹುಣ್ಣಿಮೆ ಆಚರಿಸುತ್ತಾರೆ ಉಪಕರ್ಮದಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ ಕರ್ನಾಟಕ ಸೇರಿದಂತೆ ಬೇರೆ ಕಡೆಗೆ ರಕ್ಷಾ ಬಂಧನ ಆಚರಿಸುವ ಹಬ್ಬ ರಕ್ಷಾ ಬಂಧನ ಎಂಬ ಅಸ್ತ್ರ ಪ್ರೇರೇಪಿಸುವುದು ಈ ಸಮಯದಲ್ಲಿ ಅಣ್ಣ ತಂಗಿ ಅಣ್ಣ ಅಕ್ಕ ತಮ್ಮನಿಗೆ ಹುಡುಗರೆ ನೀಡುವ ಒಂದು ಬೇರೆ ಕಥೆ ಕೂಡ ಇದೆ ಇಂದ್ರನ ಯುದ್ಧದಲ್ಲಿ ರಾಕ್ಷಸನು ಸೋಲುವಂತೆ ಅಂತ್ಯಕ್ಕೆ ಬರುತ್ತಾನೆ ಆಗ ಸಲಹೆ ಮೇರೆಗೆ ರೇಷ್ಮೆ ದಾರವನ್ನು ಇಂದ್ರನ ಕೈಗೆ ಕಟ್ಟುತ್ತಾಳೆ ಇದರ ಪರಿಣಾಮ ಗೆಲ್ಲುತ್ತಾನೆ ಇದಕ್ಕೆ ರಕ್ಷಾಬಂಧನ ಎಂಬ ಹಬ್ಬ ಆಚರಿಸಲಾಯಿತು ಎಂದು ಹೇಳುತ್ತಾರೆ. ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ.
ಮೊದಲು ರಾಖಿಯನ್ನು ಬಲವಾದ ರೇಷ್ಮೆ ದಾರದಿಂದ ತಯಾರಿಸಲಾಗುತ್ತಿತ್ತು, ಇದು ಸಹೋದರ-ಸಹೋದರಿ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಆದರೆ ಇಂದಿನ ಕಾಲದಲ್ಲಿ ಬಣ್ಣಬಣ್ಣದ ಮತ್ತು ಹೊಸ ವಿನ್ಯಾಸದ ರಾಖಿಗಳು ಲಭ್ಯವಿವೆ. ಸಹೋದರಿಯರು ತಮ್ಮ ಸಹೋದರರಿಗಾಗಿ ದುಬಾರಿ ಮತ್ತು ಸುಂದರವಾಗಿ ಕಾಣುವ ರಾಖಿಯನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ರಾಖಿಗಳು ಮಾರುಕಟ್ಟೆಯಲ್ಲಿ ಬರಲು ಪ್ರಾರಂಭಿಸಿವೆ, ಅದು ತುಂಬಾ ಚೆನ್ನಾಗಿ ಕಾಣುತ್ತದೆ. ರಾಖಿ ಹಬ್ಬವು ಬಗೆ ಬಗೆ ರಾಕಿಗಳು ಒಂದು ರೂಪಾಯಿ ಹಿಡಿದು ಸಾವಿರ ರೂಪಾಯಿ ರಾಶಿಗಳು ಕೂಡ ನಮಗೆ ಸಿಗುತ್ತವೆ ರಕ್ಷಾಬಂಧನಕ್ಕೆ ಜಾತಿ ಧರ್ಮ ಗೋಡೆ ಇಲ್ಲ ಮುಸ್ಲಿಂ ಹುಡುಗಿಯು ಹಿಂದೂ ಸಹೋದರರಿಗೆ ರಾಕಿ ಕಟ್ಟುತ್ತಾರೆ.
ಮುಸ್ಲಿಂ ಹುಡುಗನಿಗೆ ರಾಖಿ ಕಟ್ಟುತ್ತಾರೆ ಕಾಲೇಜುಗಳಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮಗಳು ಎಲ್ಲರೂ ಸೇರಿ ಹಬ್ಬವನ್ನು ಸಂತೋಷದಿಂದ ಕಟ್ಟಿ ಕಟ್ಟಿಸಿಕೊಂಡು ಸಂಭ್ರಮಿಸುತ್ತಾರೆ ಮನುಷ್ಯರ ನಡುವಿನ ಬಾಂಧವ್ಯ ಉತ್ತಮವಾದಲ್ಲಿ ಜಗತ್ತಿನ ಎಲ್ಲಾ ಕಡೆ ಸೌಭಾಗ್ಯ ಉತ್ತಮಗೊಳ್ಳಲಿ ಎನ್ನುವ ವಿಶಾಲ ಅರ್ಥದಲ್ಲಿ ಈ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ದೇವತೆಗಳ ಚಿತ್ರಗಳು ಅಥವಾ ಚಿಹ್ನೆಗಳನ್ನು ಹೊಂದಿರುವ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅನೇಕ ಸಹೋದರಿಯರು ಇದನ್ನು ಮಂಗಳಕರವೆಂದು ಪರಿಗಣಿಸಿ ಖರೀದಿಸುತ್ತಾರೆ. ಇದನ್ನು ಮಾಡಬಾರದು.