WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಹಳ್ಳಿಗಾಡಿನ ಜನರಿಗೆ ಈ ಅಗ್ನಿಬಳ್ಳಿ ಗಿಡದ ಪರಿಚಯ ಇದ್ದೆ ಇರುತ್ತದೆ. ಯಾಕೆಂದರೆ ಚಿಕ್ಕ ವಯಸ್ಸಿನಲ್ಲಿ ಅವರು ಈ ಆಗ್ನಿಬಳ್ಳಿ ಗಿಡಗ ಬೀಜಗಳ ಜೊತೆಗೆ ಆಟ ಆಡಿಕೊಂಡು ಬೆಳೆದಿರುತ್ತಾರೆ. ಹೌದು ಸ್ನೇಹಿತರೆ ಈ ಗಿಡದ ಕಾಯಿಯು ಬಲೂನ್ ರೀತಿ ಇರುತ್ತದೆ. ಇದನ್ನು ಒಡೆದಾಗ ಪಟ್ ಪಟ್ ಎಂಬ ಶಬ್ದವು ಕೇಳಿ ಬರುವುದರಿಂದ ಖುಷಿ ಆಗುತ್ತದೆ. ನೀವು ಕೂಡ ಈ ಗಿಡದ ಕಾಯಿಯ ಜೊತೆಗೆ ಆಟ ಆಡಿಕೊಂಡು ಬಂದಿದ್ದರೆ ಈ ಮಾಹಿತಿಯನ್ನು ಲೈಕ್ ಮಾಡಿ ಶೇರ್ ಮಾಡಿ. ಈಗ ಈ ಬಳ್ಳಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ಬಳ್ಳಿಯನ್ನು ಅಗ್ನಿ ಬಳ್ಳಿ ಅಥವ ಮಿಂಚಿನ ಬಳ್ಳಿ ಅಂತಲೂ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಇದನ್ನು ಬಲೂನ್ ವೈನ್ ಅಥವಾ ಹಾರ್ಟ್ ಸೀಡ್ ಅಂತ ಕರೆಯುತ್ತಾರೆ. ಇನ್ನೂ ಈ ಗಿಡವು ಹೊಲ, ಗದ್ದೆ, ತೋಟಗಳಲ್ಲಿ, ಪಾಲು ಭೂಮಿ ಮುಂತಾದ ಕಡೆ ಬೆಳೆಯುವ ಒಂದು ಕಳೆ ಸಸ್ಯವಾಗಿದೆ. ಅಮೆರಿಕ, ಆಫ್ರಿಕಾ, ಪೂರ್ವ ಏಷ್ಯಾ, ಹಾಗೂ ಭಾರತ ಹೇಗೆ ಮುಂತಾದ ಕಡೆ ಈ ಗಿಡವು ಕಳೆ ಸಸ್ಯವಾಗಿ ಕಂಡು ಬರುತ್ತದೆ. ಇದರ ಎಲೆ, ಬೇರು ಹಾಗೂ ಕಾಯಿಗಳು ಔಷಧೀಯ ಗುಣಗಳನ್ನು ಹೊಂದಿವೆ.

ಇವತ್ತಿನ ಲೇಖನದಲ್ಲಿ ಈ ಸಸ್ಯದಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಉಪಯೋಗಗಳು ಇವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಈ ಲೇಖನವನ್ನು ಕೊನೆಯವರೆಗೂ ಪೂರ್ಣವಾಗಿ ಓದಿ. ಸ್ನೇಹಿತರೆ ಈ ಗಿಡದ ಸಸ್ಯವನ್ನು ಆಯುರ್ವೇದ ಸಿದ್ಧ ಪದ್ಧತಿ ಹಾಗೂ ಸಾಂಪ್ರಾದಾಯಿಕ ಔಷಧಿ ಪದ್ಧತಿಗಳಲ್ಲಿ ಈ ಸಸ್ಯದ ಬೇರು, ಎಲೆ, ಕಾಂಡ ಹಾಗೂ ಬೀಜಗಳನ್ನು ಔಷಧೀಯ ಉದ್ದೇಶಕ್ಕಾಗಿ ಬಳಕೆಯನ್ನು ಮಾಡಲಾಗುತ್ತದೆ. ಅಗ್ನಿ ಬಳ್ಳಿಯು ಕೀಟ ನಿರೋಧಕ ಗುಣಗಳಿಂದ ಕೂಡಿದ್ದು, ಸಂಧಿವಾತ, ನರಗಳಿಗೆ ಸಂಬಂಧಿಸಿದ ಕಾಯಿಲೆಗಳು ಹಾಗೂ ಮೂಲವ್ಯಾಧಿ, ಕಾಳುಗಳ ಬಿಗಿತ, ಚರ್ಮ ರೋಗಗಳು, ಕಣ್ಣು ಹಾಗೂ ಕಿವಿಯ ಸಮಸ್ಯೆಗಳಿಗೂ ಕೂಡ ಈ ಸಸ್ಯವನ್ನು ಬಳಸಲಾಗುತ್ತದೆ. ಇನ್ನೂ ಮಂಡಿ ನೋವು ಇತರ ಕೀಲು ನೋವುಗಳಿದ್ದರೆ ಇದರ ಎಲೆಯನ್ನು ಅರಿದು ಅದಕ್ಕೆ ಒಂದಿಷ್ಟು ಉಪ್ಪನ್ನು ಸೇರಿಸಿ ಅದನ್ನು ಪ್ಲಾಸ್ಟರ್ ನಂತೆ ಬಳಸಲಾಗುತ್ತದೆ. ಇನ್ನೂ ಇದರ ಎಲೆಗಳನ್ನು ಸಾಂಪ್ರದಾಯಿಕವಾಗಿ ಚಹಾ ತಯಾರಿಸಿಕೊಂಡು ಕುಡಿಯುತ್ತಾರೆ. ಹಾಗೂ ಈ ಅಗ್ನಿ ಬಳ್ಳಿಯು ತಾಜಾ ಎಲೆಗಳನ್ನು ತರಕಾರಿಯಂತೆ ಬಳಕೆ ಮಾಡುತ್ತಾರೆ.

ಇನ್ನೂ ಅಗ್ನಿ ಬಳ್ಳಿಯ ಎಲೆಗಳು ಕೇಶವಾರ್ಧಕವಾಗಿ ರುವುದರಿಂದ ಬುಡಕಟ್ಟು ಜನಾಂಗ ದವರು ಈ ಎಲೆಗಳನ್ನು ತಲೆಯನ್ನು ತೊಳೆಯಲು ಬಳಸುತ್ತಾ ಇದ್ದರು. ಇನ್ನೂ ಈ ಗಿಡದ ಬೀಜಗಳಿಂದ ತಾಯಾರು ಮಾಡಿರುವಂತಹ ಎಣ್ಣೆಯನ್ನು ನಮ್ಮ ದೇಹಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೆ ಕೀಲು ನೋವು, ಮಂಡಿ ನೋವು, ಶ್ರೀಘ್ರವಾಗಿ ಶಮನ ಆಗುತ್ತದೆ ಮತ್ತು ಆಯಾಸ ಕೂಡ ಮಾಯವಾಗುತ್ತದೆ. ಇನ್ನೂ ಈ ಗಿಡದ ಎಲೆಗಳನ್ನು ಚರ್ಮ ವ್ಯಾಧಿಗಳಿಗೆ ಹಾಗೂ ಕ್ಯಾನ್ಸರ್ ರೋಗಕ್ಕೂ ಕೂಡ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಈ ಅಗ್ನಿ ಬಳ್ಳಿಯ ಉಪಯೋಗಗಳು ಇನ್ನೂ ಅಪಾರವಾಗಿದ್ದು, ಆದರೆ ಇದನ್ನು ಉಪಯೋಗಿಸುವ ಮೊದಲು ಆಯುರ್ವೇದ ವೈದ್ಯರ ಸಲಹೆಯನ್ನೂ ಪಡೆದುಕೊಂಡು ನಂತರ ಉಪಯೋಗ ಮಾಡುವುದು ಒಳ್ಳೆಯದು. ಇಂದಿನ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ .

WhatsApp Group Join Now

Leave a Reply

Your email address will not be published. Required fields are marked *