ಜೀರಿಗೆ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿರುವ ವಿಷಯವೇ. ಭಾರತದ ಪ್ರತಿ ಅಡುಗೆ ಮನೆಯಲ್ಲಿ ಈ ಜೀರಿಗೆಯನ್ನು ನೋಡಬಹುದು. ಈ ಜೀರಿಗೆ ಅಡುಗೆಯ ಒಗ್ಗರಣೆಗೆ ಅಷ್ಟೇ ಸೀಮಿತವಾಗಿರದೆ ಆರೋಗ್ಯದ ದೃಷ್ಟಿಯಿಂದ ಅನೇಕಾನೇಕ ರೋಗಗಳಿಗೆ ಉತ್ತಮ ಮನೆ ಮದ್ದಾಗಿದೆ. ನಮಗೆ ಒಂಚೂರು ಅಜೀರ್ಣ ಆದರೆ ಜೀರಿಗೆ ಸೋಡಾ ತಯಾರಿಸಿ ಕುಡಿದರೆ ಅಜೀರ್ಣ ಮಂಗ ಮಾಯವಾಗುತ್ತದೆ. 1. ಜೀರಿಗೆ, ಸಕ್ಕರೆ, ಒಣಶುಂಠಿ, ಉಪ್ಪು ಇವುಗಳನ್ನು ತಲಾ ಒದೊಂದು ಟೀ ಚಮಚದಷ್ಟು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ, ಅದನ್ನು ಅರ್ಧ ಬಟ್ಟಲು ಬಿಸಿನೀರಿ ಗೆ ಹಾಕಿ ಅದಕ್ಕೆ ಒಂದು ಹೋಳು ನಿಂಬೆ ಹಣ್ಣನ್ನು ಹಿಂಡಿ ಕುಡಿದರೆ ಹೊಟ್ಟೆನೋವು ಉಪಶಮನ ಆಗುತ್ತದೆ ಮತ್ತು ಚೆನ್ನಾಗಿ ಹಣ್ಣಾದ ಹೇರಳೆ ಹಣ್ಣನ್ನು ಎರೆಡು ಹೋಳು ಮಾಡಿ ಆ ಹೊಳುಗಳಿಗೆ ಜೀರಿಗೆ ಪುಡಿಯನ್ನು ತುಂಬಿ ಈ ಹೋಳುಗಳಿಗೆ ಒಂದು ರಾತ್ರಿ ಮಂಜು ಬೀಳುವ ಕಡೆ ಇಡಿ. ಮೂರನೆಯ ದಿನ ಬೆಳಿಗ್ಗೆ ಬಾರಿಯ ಹೊಟ್ಟೆಯಲ್ಲಿ ಈ ರಸವನ್ನು ಕುಡಿದರೆ ಹೊಟ್ಟೆನೋವು ಗುಣವಾಗುತ್ತದೆ. ಈ ಹಣ್ಣಿನ ರಸವನ್ನು ಎರೆಡು ವಾರಗಳ ವರೆಗೆ ಪ್ರತಿ ದಿನವೂ ಕುಡಿಯುತ್ತಿದ್ದರೆ ಅರಿಶಿನ ಕಾಮಾಲೆ ಗುಣವಾಗುತ್ತದೆ ಹಾಗೂ ಒಂದು ಟೀ ಚಮಚ ಹುಣಸೆ ಗೊಜ್ಜಿನಲ್ಲಿ ಅರ್ಧ ಟೀ ಚಮಚ ಜೀರಿಗೆ ಪುಡಿಯನ್ನು ಜೇುತುಪ್ಪದೊಂದಿಗೆ ಕಲಸಿ ತೆಗೆದುಕೊಂಡರೆ ಅರಿಶಿನ ಕಾಮಾಲೆ ಗುಣವಾಗುತ್ತದೆ. 2. ಅರ್ಧ ಬಟ್ಟಲು ತಣ್ಣಿರಿಗೆ ಒಂದು ಹೋಳು ನಿಂಬೆ ಹಣ್ಣನ್ನು ಹಿಂಡಿ, ಒಂದು ಟೀ ಚಮಚ ಜೀರಿಗೆ ಮತ್ತು ನಾಲ್ಕೈದು ಏಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿ ನಿಂಬೆ ರಸದ ಜೊತೆ ಬೆರೆಸಿ ಚೆನ್ನಾಗಿ ಕಲಸಿ, ಇದನ್ನು ದಿನಕ್ಕೆ ಐದಾರು ಸಲ ಕುಡಿದರೆ ಹೊಟ್ಟೆ ನೋವು, ಹೊಟ್ಟೆ ತೊಳಸುವುದೂ ಮತ್ತು ವಾಂತಿ ಕಡಿಮೆಯಾಗುತ್ತದೆ.

3. ಒಂದು ಚೂರೂ ಒಣ ಶುಂಠಿ ಮತ್ತು ಒಂದು ಟೀ ಚಮಚ ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿ ಎರಡು ಲೋಟ ನೀರಿಗೆ ಈ ಪುಡಿಯನ್ನು ಹಾಕಿ, ಐದು ನಿಮಿಷ ಕುದಿಸಿ, ಈ ಕಷಾಯವನ್ನು ಬೆಚ್ಚಗಿರುವ ಕುಡಿದರೆ ಅಜೀರ್ಣ ನಿವಾರಣೆಯಾಗುತ್ತದೆ. ಜೀರಿಗೆಯನ್ನು ಹಲ್ಲುಗಳಿಂದ ಚೆನ್ನಾಗಿ ಅಗಿದು ತಿನ್ನುವುದರಿಂದ ದಂತಕ್ಷಯ ನಿವಾರಣೆಯಾಗುತ್ತದೆ ಮತ್ತು ಜೀರ್ಣ ಶಕ್ತಿ ಹೆಚ್ಚುತ್ತದೆ. 4. ಒಂದು ಚೂರು ಹಸಿ ಶುಂಠಿ, ಸ್ವಲ್ಪ ಜೀರಿಗೆ, ಒಂದು ಚೂರು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ಚಪ್ಪರಿಸಿದೆ ನಾಲಗೆಯ ರುಚಿ ಹೆಚ್ಚುವುದು ಮತ್ತು ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. 5. ಜೀರಿಗೆ ಮತ್ತು ಕೊತ್ತಂಬರಿ ಬೀಜವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ. ಇದನ್ನು ನಾಲ್ಕೈದು ಗಂಟೆ ನೀರಿನಲ್ಲಿ, ನಂತರ ಚೆನ್ನಾಗಿ ಕಿವುಚಿ ಶೋಧಿಸಿ, ಈ ಕಷಾಯಕ್ಕೆ ಸಕ್ಕರೆ ಬೆರೆಸಿ ಕುಡಿಯುವುದರಿಂದ ನೀರಿನಂತೆ ಬೇಧಿಯಾಗಿ ಕೆಟ್ಟ ವಾಸನೆಯಿಂದಿದ್ದರೆ ಗುಣ ಕಂಡುಬರುತ್ತದೆ. 6. ಜೀರಿಗೆಯನ್ನು ನುಣ್ಣಗೆ ಅರೆದು ಹಾಲಿನಲ್ಲಿ ಕದಡಿ ತಲೆಗೆ ಚೆನ್ನಾಗಿ ತಿಕ್ಕಿಕೊಂಡು ಸ್ನಾನ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಸುಲಿಯುವುದಿಲ್ಲ ಕಡಿಮೆ ಆಗುತ್ತದೆ.

7. ಮಜ್ಜಿಗೆಯಲ್ಲಿ ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಕುಡಿಯುತ್ತಿದ್ದರೆ ಪಿತ್ತ ಕಡಿಮೆಯಾಗುತ್ತದೆ ಮತ್ತು ಜೀರಿಗೆ ಕಷಾಯಕ್ಕೆ ಹಾಲು, ಜೇನುತುಪ್ಪ ಬೆರೆಸಿ ಗರ್ಭಧಾರಣೆಯ ಅವಧಿಯಲ್ಲಿ ಪ್ರತಿ ದಿನವೂ ಕುಡಿಯುತ್ತಿದ್ದರೆ ಎದೆ ಹಾಲು ಹೆಚ್ಚಾಗಿರುತ್ತದೆ. 8. ಜೀರಿಗೆಯನ್ನು ನುಣ್ಣಗೆ ಕುಟ್ಟಿ ಪುಡಿ ಮಾಡಿ ತೆಂಗಿನ ಹಾಲಿನಲ್ಲಿ ಕಲಸಿ ಮೈಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ನಾನ ಮಾಡಿ, ಹೀಗೆ ನಾಲ್ಕೈದು ದಿನಗಳವರೆಗೆ ಮಾಡಿದರೆ ಬಿಸಿಲಿನಿಂದ ಮೈಯಲ್ಲಿ ಸೆಕೆ ಗುಳ್ಳೆಗಳು ಆಗಿದ್ದರೆ ಕಡಿಮೆ ಆಗುತ್ತದೆ. 9. ಜೀರಿಗೆ, ಬೆಲ್ಲ, ಹುಣಸೆಹಣ್ಣು ಸಮತೂಕ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಉಂಡೆ ಮಾಡಿ ಇದನ್ನು ಬಾಯಿಯಲ್ಲಿ ಇಟ್ಟುಕೊಂಡು ಚಪ್ಪರಿಸಿ ರಸ ನುಂಗುತ್ತಿದ್ದರೆ ಪಿತ್ತ ದೋಷಗಳು ನಿವಾರಣೆ ಆಗುತ್ತದೆ. ನೋಡಿದ್ರಲ್ಲ ಇಷ್ಟೊಂದು ಉಪಯೋಗಗಳು ಇರುವ ಜೀರಿಗೆಯನ್ನು ಹೊಟ್ಟೆಗೆ ಸಂಭಂದಿಸಿದ ಅನಾರೋಗ್ಯಗಳಿಗೆ ಬಳಸಿ ಎಲ್ಲಾ ನೋವುಗಳಿಂದ ಉಪಶಮನ ಪಡೆಯಿರಿ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ. ಶುಭ ದಿನ.

Leave a Reply

Your email address will not be published. Required fields are marked *