ನಮಸ್ತೆ ನಮ್ಮ ಆತ್ಮೀಯ ಓದುಗರೇ, ಓಂ ಕಾಳು ಅಥವಾ ಅಜ್ವಾನ ನಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಪ್ರತಿನಿತ್ಯ ಬಳಸುತ್ತಿರುತ್ತೇವೆ. ಇದನ್ನು ಬಳಸುವುದರಿಂದ ಅಡುಗೆಯ ರುಚಿ ಹೆಚ್ಚಾಗುತ್ತದೆ. ಇದರ ವಾಸನೆ ಕೂಡ ತುಂಬಾ ಚೆನ್ನಾಗಿರುತ್ತದೆ. ಅಜ್ವಾನವನ್ನು ಅಡುಗೆಯಲ್ಲಿ ಬಳಸುವುದರಿಂದ ಅಡುಗೆಯ ರುಚಿ ಹೆಚ್ಚುವುದರ ಜೊತೆಗೆ ಔಷಧಿಯ ಕೆಲಸವನ್ನು ಮಾಡುತ್ತದೆ. ಹಾಗಾದರೆ ಇವತ್ತಿನ ಈ ಲೇಖನದಲ್ಲಿ ಓಂ ಕಾಳಿನ ಉಪಯೋಗದಿಂದ ಏನೆಲ್ಲಾ ಪ್ರಯೋಜನ ಮತ್ತು ಯಾವ ರೋಗಗಳಿಗೆ ಒಳ್ಳೆಯದು ಎಂದು ತಿಳಿಯೋಣ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಅಜೀರ್ಣದಂತ ಸಮಸ್ಯೆಗಳು ಕಾಡುತ್ತಿವೆ, ಕಾರಣ ನಾವು ಸೇವಿಸುವ ಆಹಾರ ಕ್ರಮದಿಂದ ಹೌದು, ನಾವು ಸೇವಿಸುವ ಆಹಾರ ಕ್ರಮ ಸರಿಯಾಗಿ ಇಲ್ಲದಿದ್ದರೆ ಅಜೀರ್ಣದಂತಹ ತೊಂದರೆಗಳು ಬರುವುದು ತುಂಬಾ ಸಹಜ. ಇಂತಹ ಸಮಸ್ಯೆಗಳು ನಿಮಗೇನಾದರೂ ಕಾಡುತ್ತಿದ್ದರೆ ಓಂ ಕಾಳಿನಿಂದ ಅಜೀರ್ಣವನ್ನು ಹೋಗಲಾಡಿಸಬಹುದು. ನಿಮಗೆ ಅಜೀರ್ಣ ಆಗಿದ್ದರೆ ಅರ್ಧ ಚಮಚ ಓಂ ಕಾಳನ್ನು ಊಟದ ನಂತರ ತಿನ್ನಿ ಅಥವಾ ಅರ್ಧ ಚಮಚ ಓಂ ಕಾಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ತಿನ್ನಿ.
ಇನ್ನು ನಿಮಗೆ ಶೀತ, ನೆಗಡಿ, ಕೆಮ್ಮು, ಕಫ ಇದ್ದರೆ ಆಜ್ವಾನ ಒಂದು ಉತ್ತಮ ಮನೆಮದ್ದು ಆಗಿ ಕೆಲಸ ಮಾಡುತ್ತದೆ. ಒಂದು ಚಮಚ ಓಂ ಕಾಳನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಿ ಅದನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಕಟ್ಟಿಡಿ. ಇದರ ವಾಸನೆ ಕುಡಿಯುವುದರಿಂದ ಶೀತ, ನೆಗಡಿ ನಿವಾರಣೆಯಾಗುತ್ತದೆ. ಇನ್ನು ಕಫ ಮತ್ತು ಕೆಮ್ಮು ನಿವಾರಣೆ ಆಗಲು ಅರ್ಧ ಚಮಚ ಓಂ ಕಾಳು ಜೊತೆಗೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವನೆ ಮಾಡುವುದರಿಂದ ಕಫ, ಕೆಮ್ಮು ಬೇಗನೆ ಶಮನವಾಗುವುದು. ಇನ್ನೂ ಜ್ವರದಿಂದ ಬಳಲುತ್ತಿದ್ದರೆ ಒಂದು ಚಮಚ ಓಂ ಕಾಳು, ಒಂದು ಚಮಚ ಕೊತ್ತಂಬರಿ ಬೀಜ ಮತ್ತು ಒಂದು ಚಮಚ ಜೀರಿಗೆ ಈ ಮೂರನ್ನು ಸಣ್ಣ ಉರಿಯಲ್ಲಿ ಹುರಿದು ಪುಡಿ ಮಾಡಿ ಒಂದು ಲೋಟ ಕಷಾಯ ತಯಾರಿಸಿ, ಈ ಕಷಾಯ ಕುಡಿಯುವುದರಿಂದ ಜ್ವರ ಬೇಗ ಗುಣವಾಗುತ್ತದೆ. ನಿಮಗೆ ಗಂಟಲು ನೋವಿನ ಸಮಸ್ಯೆ ಇದ್ದರೆ ಅರ್ಧ ಚಮಚ ಓಂ ಕಾಳನ್ನು ಬಾಯಲ್ಲಿ ಜಗಿದು ತಿನ್ನುತ್ತಾ ನಿಧಾನವಾಗಿ ಅಗಿದು ರಸವನ್ನು ನುಂಗುತ್ತಾ ಇದ್ದರೆ ಗಂಟಲು ನೋವು ಕಡಿಮೆ ಆಗುತ್ತದೆ. ಓಂ ಕಾಳು ತಲೆನೋವು ಮತ್ತು ಎದೆ ಊರಿಗೆ ಉತ್ತಮ ಔಷಧವಾಗಿದೆ. ಬಿಸಿ ನೀರಿನ ಜೊತೆ ಈ ಕಾಳನ್ನು ಅಗಿದು ತಿನ್ನುತ್ತಿದ್ದರೆ ತಲೆನೋವು, ಎದೆ ಉರಿ ಕಡಿಮೆ ಮಾಡುತ್ತದೆ. ಓಂ ಕಾಳು ಹೊಟ್ಟೆನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಮೊದಲನೆಯದಾಗಿ ಹೊಟ್ಟೆಯಲ್ಲಿರುವ ಹುಳವನ್ನು ನಾಶ ಪಡಿಸುವ ಶಕ್ತಿಯಿದೆ.
ಒಂದು ವೇಳೆ ನಿಮ್ಮ ಹೊಟ್ಟೆಯಲ್ಲಿ ಹುಳು ಇದ್ದರೆ, ಅರ್ಧ ಚಮಚ ಓಂ ಕಾಳು ಪುಡಿಯನ್ನು ಮಜ್ಜಿಗೆಯಲ್ಲಿ ಹಾಕಿ ಕುಡಿಯುವುದರಿಂದ ವಾಸಿಯಾಗುತ್ತದೆ. ನಿಮಗೇನಾದರೂ ಹೊಟ್ಟೆಯಲ್ಲಿ ಗುಡು ಗುಡು ಶಬ್ಧ ಬಂದರೆ ಮತ್ತು ಹುಳಿತೇಗು ಸಮಸ್ಯೆ ಇದ್ದರೆ ಬಿಸಿನೀರಿನ ಜೊತೆಗೆ ಸೇವನೆ ಮಾಡಿದರೆ ಅದೂ ವಾಸಿ ಆಗುತ್ತದೆ. ಅತಿಯಾಗಿ ಬೇಧಿ ಆಗುತ್ತಿದ್ದರೆ ಓಂ ಕಾಳನ್ನು ಉಪ್ಪಿನ ಜೊತೆ ನುಂಗಿ ನೀರನ್ನು ಕುಡಿಯುವುದರಿಂದ ತಕ್ಷಣವೇ ಬೇಧಿ ನಿಲ್ಲುತ್ತದೆ. ಇನ್ನೂ ಮುಟ್ಟಿನ ಸಮಸ್ಯೆ ಇದ್ದರೆ ಈ ಓಂ ಕಾಳನ್ನು ಹುರಿದು ಪುಡಿ ಮಾಡಿ ಹಾಲಿನ ಜೊತೆ ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆನೋವು ಕಡಿಮೆ ಆಗುತ್ತದೆ. ಇನ್ನೂ ಬಹಳಷ್ಟು ಜನರಿಗೆ ಹಸಿವೆ ಆಗುತ್ತಿರುವುದಿಲ್ಲ ಮತ್ತು ತಿಂದ ಆಹಾರ ಜೀರ್ಣ ಆಗುತ್ತಿರುವುದಿಲ್ಲ ಅಂಥವರು ಒಂದು ಲೋಟ ನೀರಿನಲ್ಲಿ ಒಂದು ಚಮಚ ಓಂ ಕಾಳು ಹಾಕಿ ಕುದಿಸಿ ಕುಡಿಯುವುದರಿಂದ ಅವೆಲ್ಲ ಸಮಸ್ಯೆ ಇರುವುದಿಲ್ಲ ಜೊತೆಗೆ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ನೊಡಿದ್ರಲ್ಲಾ ಅಜ್ವಾನಾ ಅಥವಾ ಓಂ ಕಾಳುಗಳ ಉಪಯೋಗಗಳನ್ನು. ಈ ಮಾಹಿತಿ ಇಷ್ಟ ಆದರೆ ನೀವು ಫಾಲೋ ಮಾಡಿ ನಿಮ್ಮವರಿಗೂ ತಿಳಿಸಿ. ಶುಭದಿನ.