ನಮಸ್ತೆ ನಮ್ಮ ಆತ್ಮೀಯ ಓದುಗರೇ, ಶುಂಠಿ ನಾವು ಆಹಾರದಲ್ಲಿ ದಿನನಿತ್ಯ ಬಳಸುವ ಒಂದು ಸಂಬಾರ ಪದಾರ್ಥ. ಶುಂಠಿಯನ್ನು ಔಷಧಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಶುಂಠಿಯ ನೆಲದೊಳಗಿನ ಕಾಂಡ ಮತ್ತು ಗೆಡ್ಡೆಯನ್ನು ಶುಂಠಿ ಎಂದು ಕರೆಯುತ್ತೇವೆ. ಶುಂಠಿ ಬೆಳೆಯು ಭಾರತದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಹಸಿ ಶಂಠಿ ಮತ್ತು ಒಣ ಶುಂಠಿ ಯನ್ನು ಅಡುಗೆಯಲ್ಲಿ ಸಾಂಬಾರು ಪದಾರ್ಥವಾಗಿ ಬಳಸುತ್ತೇವೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಶುಂಠಿಯು ವಿಟಮಿನ್ ಏ ವಿಟಮಿನ್ ಸಿ ,ವಿಟಮಿನ್ ಇ ಮತ್ತು ಬಿ ಕಾಂಪ್ಲೆಕ್ಸ್ ಗಳಿಂದ ಸಮೃದ್ಧವಾಗಿದೆ. 1. ಶುಂಠಿ ಅತ್ಯುತ್ತಮ ಪಚನಕಾರಿ. ಇದನ್ನು ಉಪಯೋಗಿಸುವುದರಿಂದ ಜಠರದಲ್ಲಿ ಹೆಚ್ಚು ರಸ ಉತ್ಪತ್ತಿಯಾಗುವುದು. ಜೀರ್ಣಶಕ್ತಿ ಹೆಚ್ಚುವುದು. ಒಣ ಶುಂಠಿ ಗಿಂತ ಹಸಿಶುಂಠಿ ಒಳ್ಳೆಯದು. ಇದನ್ನು ಉಪ್ಪಿನಕಾಯಿ, ಚಟ್ನಿ, ಕೋಸಂಬರಿ, ಮಜ್ಜಿಗೆ ಹುಳಿ ಮುಂತಾದ ತಿನಿಸುಗಳಲ್ಲಿ ಉಪಯೋಗಿಸುತ್ತಾರೆ.
2. ಊಟದ ನಂತರ ಒಂದು ಚೂರು ಶುಂಠಿ ಅಗೆದು ಚಪ್ಪರಿಸಿ ತಿಂದರೆ ಅಜೀರ್ಣ, ಹೊಟ್ಟೆ ಉಬ್ಬರ, ಹೊಟ್ಟೆ ಹುಣ್ಣು ಮುಂತಾದ ರೋಗಗಳು ಬರುವುದಿಲ್ಲ. ಶುಂಠಿಯನ್ನು ಉಪಯೋಗಿಸುತ್ತಿದ್ದರೆ ಪಿತ್ತ ಕಡಿಮೆಯಾಗುತ್ತದೆ. 3. ತಲೆನೋವು ಇದ್ದರೆ ಹಸಿ ಶುಂಠಿಯನ್ನು ನೀರಿನಲ್ಲಿ ತೇದು ಅದ ಗಂಧವನ್ನು ಹಣೆಗೆ ಹಚ್ಚಿಕೊಂಡು ಬೆಚ್ಚಗೆ ಹೊದ್ದುಕೊಂಡು ಮಲಗಿದರೆ ಬೆವರು ಸುರಿದು ತಲೆನೋವು ಕಡಿಮೆಯಾಗುತ್ತದೆ. 4. ಅರುಚಿ ಉಂಟಾದಾಗ ಒಂದು ಚೂರು ಹಸಿಶುಂಠಿ, 5-6 ಕಾಳು ಜೀರಿಗೆ, ಒಂದು ಚೂರು ಕಲ್ಲು ಸಕ್ಕರೆ ಚೆನ್ನಾಗಿ ಅಗೆದು ನಾಲಿಗೆಯಿಂದ ಚಪ್ಪರಿಸಿದೆ ನಾಲಿಗೆಯ ರುಚಿ ಮತ್ತು ಗ್ರಹಣಶಕ್ತಿ ಉತ್ತಮವಾಗಿ ಆಹಾರ ರುಚಿಸುತ್ತದೆ. 5. ಒಂದು ಬಟ್ಟಲು ಮೆಂತ್ಯ ಸೊಪ್ಪಿನ ಕಷಾಯಕ್ಕೆ ಒಂದು ಚಮಚ ಹಸಿಶುಂಠಿ ಕಷಾಯ ಬೆರೆಸಿ ಜೇನುತುಪ್ಪ ಸೇರಿಸಿ ಕುಡಿದರೆ ಕಫ ನಿವಾರಣೆಯಾಗುತ್ತದೆ. ಇದು ಕ್ಷಯ, ಕೆಮ್ಮು, ದಮ್ಮು, ನಾಯಿಕೆಮ್ಮು, ಈ ರೋಗಗಳಲ್ಲಿ ಕಫ ಕಟ್ಟಿಕೊಂಡು ಉಂಟಾಗುವ ಬಾಧೆಯನ್ನು ಹೋಗಲಾಡಿಸುತ್ತದೆ. 6. ಒಂದು ಟೀ ಚಮಚ ಹಸಿಶುಂಠಿ ರಸ, ಎರೆಡು ಟೀ ಚಮಚ ನಿಂಬೆರಸ, ಎರೆಡು ಟೀ ಚಮಚ ಜೇನುತುಪ್ಪ ಮಿಶ್ರ ಮಾಡಿ ಮೂಲವ್ಯಾಧಿ, ಕಾಮಾಲೆ, ಸಂಧಿವಾತ, ಹೊಟ್ಟೆ ತೊಳಸುವುದು, ಹೊಟ್ಟೆ ಉಬ್ಬರ, ಅಜೀರ್ಣ, ವಾಕರಿಕೆ, ಮಲಬದ್ಧತೆ, ಗಂಟಲು ಕೆರೆತ, ಗಂಟಲು ಓಡೆದಿರುವುದು, ಈ ರೋಗ ಲಕ್ಷಣಗಳು ಉಳ್ಳವರು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳುವುದರಿಂದ ಗುಣ ಕಂಡುಬರುತ್ತದೆ.
7. ಶುಂಠಿಯನ್ನು ಉಪಯೋಗಿಸುವುದರಿಂದ ಪರಾವಲಂಬಿ ಜೀವಿಗಳು ಕರುಳಿನಲ್ಲಿ ಅಥವಾ ಜಠರದಲ್ಲಿ ಸೇರಲು ಅವಕಾಶವಿರುವುದಿಲ್ಲ. 8. ಗಂಟಲು ಒಡೆದು ಮಾತನಾಡುವುದಕ್ಕೆ ತೊಂದರೆಯಾದಾಗ ಒಂದು ಹರಳು ಉಪ್ಪು ಅಗಿದು ಚಪ್ಪರಿಸಿದರೆ ಗುನವುಂತಾಗುತ್ತದೆ. 9. ಹಸಿಶುಂಠಿ ಕಷಾಯ ಮಾಡಿ ಅದಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಶೀತದಿಂದ ಮತ್ತು ನೆಗಡಿಯಿಂದ ಉಪಶಮನ ಹೊಂದಬಹುದು. 10. ಒಂದು ಟೀ ಚಮಚ ಒಣ ಶುಂಠಿ ಯ ಪುಡಿಯನ್ನು ಆಗ ತಾನೇ ಕರೆದ ಒಂದು ಬಟ್ಟಲು ಹಸುವಿನ ಹಾಲಿನಲ್ಲಿ ಕದಡಿ ಪ್ರತಿ ದಿನ ಬೆಳಿಗ್ಗೆ ಒಂದು ವಾರದವರೆಗೆ ಕುಡಿದರೆ ಅರಿಶಿನ ಕಾಮಾಲೆ ಗುಣವಾಗುತ್ತದೆ. 11. ಒಣ ಶುಂಠಿಯನ್ನು ಕೆಂಡದ ಮೇಲೆ ಸುತ್ತು ಪುಡಿ ಮಾಡಿ, ಇದಕ್ಕೆ ಉಪ್ಪು ಸೇರಿಸಿ ಹಲ್ಲು ಉಜ್ಜುವುದರಿಂದ ಹಲ್ಲು ನೋವು ಕಡಿಮೆ ಆಗುತ್ತದೆ. 12. 7-8 ತೊಟ್ಟು ಶುಂಠಿಯ ರಸವನ್ನು ಜೇನುತುಪ್ಪ ಅಥವಾ ಹಾಲಿನಲ್ಲಿ ಬೆರೆಸಿ ಮಕ್ಕಳಿಗೆ ಕೊಡುವುದರಿಂದ ಜಠರ ಮತ್ತು ಕರುಳಿ ಗೆ ಸಂಬಂದಿಸಿದ ರೋಗಗಳು ಗುಣವಾಗುತ್ತವೆ ಮತ್ತು ಕರುಳಿನಲ್ಲಿ ಅನಿಲವು ಸಂಗ್ರಹವಾಗುವುದಿಲ್ಲ. ಶುಭದಿನ.