ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಅಣಬೆ ದೇಹಕ್ಕೆ ಬೇಕಾದ ಅನೇಕ ಬಗೆಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅಣಬೆಯ ವಿಶೇಷ ರುಚಿಯು ಆಹಾರ ಪದಾರ್ಥಗಳ ಶ್ರೀಮಂತಿಕೆ ಹಾಗೂ ರುಚಿಯನ್ನು ಹೆಚ್ಚಿಸುವುದು. ನೀವು ನಿಮ್ಮ ಆಹಾರದಲ್ಲಿ ಅಣಬೆಯನ್ನು ಸೇರಿಸಿಕೊಂಡರೆ ಸಾಕಷ್ಟು ಅನಾರೋಗ್ಯಗಳಿಂದ ದೂರ ಉಳಿಯಬಹುದು. ಇದರಲ್ಲಿ ಇರುವ ಆಂಟಿ ಬಯೋಟಿಕ್ ಅಂಶಗಳು ಪೂರಕವಾಗಿದೆ.
ಇದನ್ನು ಮಶ್ರೂಮ್ ಅಂತ ಕೂಡ ಕರೆಯುತ್ತಾರೆ. ಹಾಗೆಯೇ ದೇಹಕ್ಕೆ ಅಗತ್ಯವಾದ ಹಲವಾರು ಬಗೆಯ ಅಂಶಗಳು ಅಡಗಿವೆ. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಅಣಬೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ.
ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದೇ. ಅಣಬೆ ಇಂದ ದೊರೆಯುವ ಆರೋಗ್ಯಕರ ಲಾಭಗಳನ್ನು ನಾವು ಲೆಕ್ಕ ಹಾಕಲು ಸಾಧ್ಯವಿಲ್ಲ. ಇವು ಆರೋಗ್ಯಕರ ಲಕ್ಷಣವನ್ನು ಹೊಂದಿದೆ. ಅಣಬೆಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ದೇಹಕ್ಕೆ ಅನಾರೋಗ್ಯವನ್ನು ತರುವ ಅಂಶಗಳ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಇದರ ಸೇವನೆ ಇಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿ ಇದನ್ನು ಸೇವನೆ ಮಾಡುವುದರಿಂದ ಚಿಕ್ಕ ಪುಟ್ಟ ಸಮಸ್ಯೆಗಳಿಂದ ದೂರ ಇರಬಹುದು. ಮಧುಮೇಹಿ ಗಳಿಗೆ ಇದೊಂದು ದಿವ್ಯ ಔಷಧವಾಗಿದೆ. ಇವಿವಿಧ ಸಂಶೊಧನೆ ಹಾಗೂ ಅಧ್ಯಯನಗಳ ಪ್ರಕಾರ ಅಣಬೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಇತರ ಆರೋಗ್ಯಕರ ಪ್ರೋಟೀನ್‍ಗಳ ಜೊತೆಗೆ ಜೀವಕೋಶಗಳನ್ನು ವೃದ್ಧಿಸುವುದು.
ದೇಹದ ಅಂಗಾಂಗಗಳನ್ನು ಸಹ ಪುನಃಸ್ಥಾಪಿಸುವುದು. ಎಲುಬುಗಳ ಮಜ್ಜೆಯಲ್ಲಿ ಡೆಂಡ್ರೈಟಿಕ್ ಕೋಶಗಳನ್ನು ವೃದ್ಧಿಸುವುದು. ಸೂಕ್ಷ್ಮ ಜೀವಿಗಳು ಹಾಗೂ ವೈರಸ್‍ಗಳಂತಹ ರೋಗಾಣುಗಳಿಂದ ಆರೋಗ್ಯಕ್ಕೆ ಯಾವುದೇ ಹಾನಿಯುಂಟಾಗದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇರುವುದಿಲ್ಲ. ಆಹಾರದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ.ಹಾಗೆಯೇ ಕಾರ್ಬೋಹೈಡ್ರೇಟ್ ಅಂಶವು ಕಡಿಮೆ ಇರುತ್ತದೆ.
ಆಹಾರ ಪದಾರ್ಥಗಳಲ್ಲಿ ಅಣಬೆಯನ್ನು ಸೇರಿಸಿಕೊಳ್ಳುವುದರಿಂದ ಆಹಾರದ ಗುಣಮಟ್ಟ ಹೆಚ್ಚುವುದು. ಇದು ದೇಹಕ್ಕೆ ವರ್ಧಿತ ಪೋಷಣೆಯನ್ನು ನೀಡುವುದು. ಅಲ್ಲದೆ ದೇಹದಲ್ಲಿ ಇರುವ ನ್ಯೂಟ್ರೀಷನ್ ಕೊರತೆಯನ್ನು ನೀಗಿಸುವುದು. ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಪೋಷಣೆ ಹಾಗೂ ನ್ಯೂಟ್ರೀಷನ್‍ಗಳನ್ನು ಒದಗಿಸುವುದು. ಕೆಲವು ಅಧ್ಯಯನದ ಪ್ರಕಾರ ಅಣಬೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
ಇದರಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ ಕೊಬ್ಬು ಕಡಿಮೆ ಇರುತ್ತದೆ ಆದ್ದರಿಂದ ಇದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ2, ಬಿ3 ಹೆಚ್ಚಾಗಿ ಇರುವುದರಿಂದ ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.
ನಮ್ಮ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಣಬೆಯು ಪರಿಣಾಮಕಾರಿಯಾದ ಪಾಲಿಸ್ಯಾಕರೈಡ್‍ಗಳು ಇವೆ. ಅವು ಆಂಟಿಟ್ಯೂಮರ್ ಏಜೆಂಟ್‍ಗಳಾಗಿವೆ.
ದೇಹದೊಳಗೆ ಅವು ಬೆಳೆಯಲು ಹಾಗೂ ಕ್ಯಾನ್ಸರ್ ಕೋಶಗಳನ್ನು ನಿಯಂತ್ರಿಸಲು ಸಹಾಯ ಮಾಡುವುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿಳಿ ರಕ್ತಕಣಗಳನ್ನು ಹೆಚ್ಚಿಸುವುದು. ಅವು ಕ್ಯಾನ್ಸರ್ ಕೋಶಗಳ ರಚನೆಯನ್ನು ನಿಯಂತ್ರಿಸಲು ಸಹಾಯ ಮಾಡುವುದು. ಪ್ರಾಸ್ಟೇಟ್, ಸ್ತನ, ರಕ್ತ ಸೇರಿದಂತೆ ಇನ್ನಿತರ ಕ್ಯಾನ್ಸರ್ ಸಮಸ್ಯೆಗಳ ವಿರುದ್ಧ ಹೋರಾಡುವುದು.
ಅಣಬೆಯು ಸಮೃದ್ಧವಾದ ಸತುವನ್ನು ಒಳಗೊಂಡಿದೆ. ದಣಿದ ಜೀವಕ್ಕೆ ಪುನಃಶ್ಚೇತನ ನೀಡುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಉತ್ತಮ ಫಲವತ್ತತೆ ಹಾಗೂ ಲೈಂಗಿಕ ಆರೋಗ್ಯವನ್ನು ವೃದ್ಧಿಸುವುದು. ಪುರುಷರಿಗೆ ಜನನಾಂಗದ ಅಂಗಗಳ ಪುನಃಸ್ಥಾಪನೆಗೆ ಸಹಾಯ ಮಾಡುವುದು. ಜೊತೆಗೆ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು.