WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಒಂದು ಗ್ಲಾಸ್ ಟೊಮೆಟೊ ಜ್ಯೂಸ್ ಕುಡಿದರೆ ಹೊಟ್ಟೆ ಕರಗುತ್ತದೆಯಂತ. ಹೊಸದೊಂದು ಅಧ್ಯಯನ ನಮ್ಮ ಅಡುಗೆ ಮನೆಯಲ್ಲಿರುವ ಟೊಮೆಟೊ ಬಗ್ಗೆ ಶುರುವಾಗಿದೆ. ಅದು ಯಾವ ವಿಷಯಕ್ಕೆ ಗೊತ್ತಾ? ನಿಯಮಿತವಾಗಿ ಆಗಾಗ ಟೊಮೆಟೊ ಜ್ಯೂಸ್ ಅನ್ನು ಅಥವಾ ಈ ಹಣ್ಣನ್ನು ದಿನನಿತ್ಯ ತಮ್ಮ ಆಹಾರ ಕ್ರಮದಲ್ಲಿ ಬಳಸಿದ್ದೇ ಆದರೆ ಹೊಟ್ಟೆ ನಿಜವಾಗಿಯೂ ಕರಗುತ್ತದಂತೆ. ಆದರೆ ಅಚ್ಚರಿಯ ವಿಷಯ ಏನಪ್ಪಾ ಅಂದ್ರೆ ಟೊಮೆಟೊ ಜ್ಯೂಸ್ ಇಂದ ದೇಹದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗಿದೆ ಅನ್ನುವುದು. ಆರೋಗ್ಯಕರವಾದ ಜೀವನ ಶೈಲಿಯನ್ನು ಹೊಂದಿರುವ ಪ್ರತಿಯೊಬ್ಬರೂ ಸಹ ತಮ್ಮ ಡಯೆಟ್ ನಲ್ಲಿ ಟೊಮೆಟೊ ಹಣ್ಣನ್ನು ಸೇರಿಸಿಕೊಂಡಿತುರುತ್ತಾರೆ. ತಮ್ಮ ದೇಹದ ಸೊಂಟದ ಭಾಗದ ಕೊಬ್ಬನ್ನು ಕರಗಿಸಲು ಅನುಕೂಲವಾಗುವ ಹಾಗೆ ತಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಣಕ್ಕೆ ಬರುವ ಹಾಗೆ ಟೊಮೆಟೊ ಹಣ್ಣನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡಬಹುದು.

ಸಂಶೋಧಕರು ಏನು ಹೇಳುತ್ತಾರೆ – ಸಂಶೋಧಕರು ಹೇಳುವಂತೆ ಆರೋಗ್ಯಕರವಾದ ಜೀವನಕ್ಕೆ, ಸುಮಾರು ೨೫ ಆರೋಗ್ಯಕರ ಮಹಿಳೆಯರ ಮೇಲೆ ಅಧ್ಯಯನ ನಡೆಸಲಾಯಿತು. ಪ್ರತಿಯೊಬ್ಬ ಮಹಿಳೆಯ ವಯಸ್ಸು ೨೦ ರಿಂದ ೩೦ ವರೆಗೆ ಇರುವಂತೆ ಆಯ್ಕೆ ಮಾಡಲಾಯಿತು. ಅಧ್ಯಯನ ಮಾಡುವ ಮೊದಲು ಅವರ ಸೊಂಟದ ಗಾತ್ರ ವನ್ನು ಅಳತೆ ಮಾಡಿ ಆನಂತರ ಟೊಮೆಟೊದ ಪಾನೀಯವನ್ನು ಅಥವಾ ಉತ್ಪನ್ನಗಳನ್ನು ಸೇವನೆ ಮಾಡಿ ಎರೆಡು ತಿಂಗಳ ನಂತರ ಸೊಂಟದ ಗಾತ್ರ ವನ್ನು ಅಳತೆ ಮಾಡಿದಾಗ ಸಾಕಷ್ಟು ಬದಲಾವಣೆ ಕಂಡು ಬಂದಿತು. ಇವರ ಸೊಂಟದ ಭಾಗದ ಕೊಬ್ಬು ಸಾಕಷ್ಟು ಕರಗಿದ ಬಗ್ಗೆ ಮಾಹಿತಿ ತಿಳಿಯಿತು. ಟೊಮೆಟೊ ಹಣ್ಣಿನಿಂದ ಸುಮಾರು ಉಪಯೋಗಗಳು ಇವೆ – ನಮಗೆಲ್ಲ ಟೊಮೆಟೊ ಬಗ್ಗೆ ಅಷ್ಟೊಂದು ಗೊತ್ತಿರುವುದಿಲ್ಲ. ಆದರೂ ಕೂಡ ನಮ್ಮ ದಿನದ ಆಹಾರದಲ್ಲಿ ಅದನ್ನು ಬಳಕೆ ಮಾಡುತ್ತೇವೆ. ಆದರೆ ನಿಜ ಹೇಳಬೇಕು ಅಂದ್ರೆ ಟೊಮೆಟೊದಲ್ಲಿ ನಮ್ಮ ದೃದಯದ ಆರೋಗ್ಯವನ್ನು ಅತ್ಯುತ್ತಮಪಡಿಸುವ ಜೊತೆಗೆ, ನಮ್ಮ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಿ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ನಮಗೆ ರಕ್ಷಣೆ ನೀಡುತ್ತದೆ. ಬಹಳಷ್ಟು ಜನರ ಮಾನಸಿಕ ಖಿನ್ನತೆಯನ್ನು ಸಹ ಇದು ಸರಿಪಡಿಸುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ಟೊಮೆಟೊ ವನ್ನ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಸಾಕಷ್ಟು ಆಯಾಮದಲ್ಲಿ ಉಪಯೋಗ ಆಗುತ್ತದೆ ಎಂದು ಹೇಳಬಹುದು. ಬನ್ನಿ ಟೊಮೆಟೊದ ಇನ್ನಷ್ಟು ಉಪಯೋಗಗಳನ್ನು ನೋಡೋಣ.

ನೋಡಲು ಕೆಂಪು ಬಣ್ಣದಲ್ಲಿ ಕಾಣುವ ಟೊಮೆಟೊ ತನ್ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲೈಕೋಪಿನ್ ಎಂಬ ಅಂಟಿಯಾಕ್ಸಿಡೇಟ್ ಅಂಶಗಳನ್ನು ಒಳಗೊಂಡಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟೊಮೆಟೊ ಹಣ್ಣಿನಿಂದ ಕಣ್ಣುಗಳ ದೃಷ್ಟಿ ಅಭಿವೃದ್ಧಿಯಾಗುತ್ತದೆ. ನಿಮ್ಮ ಕಣ್ಣುಗಳ ದೃಷ್ಟಿ ವಯಸ್ಸಾದ ನಂತರವೂ ಸಹ ಚೆನ್ನಾಗಿ ಇರಬೇಕು ಅಂದರೆ ಮತ್ತು ಕಣ್ಣುಗಳು ಮಂಜಾಗುವುದನ್ನು ತಡೆಯಬೇಕು ಎಂದರೆ ಟೊಮೆಟೊ ಹಣ್ಣನ್ನು ಪ್ರತಿದಿನ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಮೈ ಕೈ ನೋವು ದೂರ ಆಗುತ್ತದೆ – ಟೊಮೆಟೊ ಹಣ್ಣು ನಮ್ಮ ದೇಹದ ಮೇಲೆ ಫ್ರೀ ರಾಡಿಕಲ್ಸ್ ಉಂಟು ಮಾಡುವ ಹಾನಿಯನ್ನು ತಡೆಗಟ್ಟಲು ಸಹಾಯಕಾರಿ. ಇದರಿಂದ ನಮ್ಮ ನರಮಂಡಲ ಧೃಢಗೊಳ್ಳುತ್ತದೆ. ಹಾಗೂ ಮಾಂಸ ಖಂಡಗಳು, ಮೈ, ಕೈ ನೋವು, ನರಗಳು ಹಿಡಿದಂತೆ ಆಗುವುದು ಎಲ್ಲಾ ತಪ್ಪುತ್ತದೆ. ನಾವು ಇಂದಿನ ಲೇಖನದಲ್ಲಿ ತಿಳಿಸುವ ಈ ಅದ್ಭುತವಾದ ಡ್ರಿಂಕ್ ನೀವು ಮನೆಯಲ್ಲಿ ಮಾಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
ಶುಭದಿನ.

WhatsApp Group Join Now

Leave a Reply

Your email address will not be published. Required fields are marked *