WhatsApp Group Join Now

ಕಾಳುಮೆಣಸು ಬರಿ ಅಡುಗೆಗೆ ಮಾತ್ರವಲ್ಲ ಹಲವು ಬೇನೆಗಳ ನಿವಾರಣೆಗೆ ಸಹಾಯಕವಾಗಿದೆ. ಅತಿಯಾದ ಕೆಮ್ಮು ನಿವಾರಣೆಗೆ ಒಂದು ಚಿಟಿಕೆ ಅಷ್ಟು ಕಾಳುಮೆಣಸಿನ ಪುಡಿಯನ್ನು ಒಂದು ಚಮಚ ಜೇನು ತುಪ್ಪ ಬೆರಸಿ ದಿನಕ್ಕೆ ಮೂರೂ ಬಾರಿಯಂತೆ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

ಈ ಸರಳವಾದ ವಿಧಾನವನ್ನು ಬಳಸಿ ಕೆಮ್ಮು ನಿವಾರಣೆ ಮಾಡಿಕೊಳ್ಳಿ. ಕೆಮ್ಮು ಇದ್ದಾಗ ಹಲವು ಮಾತ್ರೆ ಔಷಧಿಗಳನ್ನು ಪಡೆಯುವ ಬದಲು ನೈಸರ್ಗಿಕವಾದ ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಿ.

ಕಫ ಮತ್ತು ಶೀತಜ್ವರದಲ್ಲಿ : ಅನೇಕರಿಗೆ ಮಳೆಯಲ್ಲಿ ನೆನೆಯುವುದರಿಂದ ಶೀತ, ನೆಗಡಿ, ಕೆಮ್ಮು, ತಲೆನೋವು, ಜ್ವರ ಉಂಟಾಗುತ್ತದೆ. ಆಗ ಮೆಣಸು, ಶುಂಠಿ, ಜೀರಿಗೆಗಳನ್ನು 1:2:3ರ ಪ್ರಮಾಣದಲ್ಲಿ ಸೇರಿಸಿ ಕಷಾಯವನ್ನು ತಯಾರಿಸಿ ಅದಕ್ಕೆ ಬೆಲ್ಲ ಸೇರಿಸಿ ತೆಗೆದುಕೊಂಡರೆ, ಕಫ ಮತ್ತು ಶೀತದಿಂದ ಉಂಟಾದ ಜ್ವರ ಕಡಿಮೆಯಾಗುತ್ತದೆ. ಕೆಲವು ವೇಳೆ ಅಸಾಕ್ಮ್ಯ(ಅಲರ್ಜಿ) ಯಿಂದ ಗಂಟಲು ಕೆರತ, ಕೆಮ್ಮುಗಳು ಉಂಟಾಗುತ್ತದೆ. ಶೀತದಿಂದ ಹೆಚ್ಚಾಗುವ ಈ ಕೆಮ್ಮು ರಾತ್ರಿಯಲ್ಲಿ ಉಲ್ಬಣಗೊಂಡು ನಿದ್ದೆಗೆ ತೊಂದರೆಯನ್ನುಂಟುಮಾಡುತ್ತದೆ. ಆಗ ಎರಡು ಮೆಣಸಿನಕಾಳನ್ನು ಒಂದೆರಡು ಹರಳು ಉಪ್ಪನ್ನು ಸೇರಿಸಿ ದವಡೆಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿದ್ದರೆ ಗಂಟಲು ಕಡಿಮೆಯಾಗಿ ಕೆಮ್ಮು ನಿಲ್ಲುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.

ಪೀನಸ ರೋಗದಲ್ಲಿ: ನೆಗಡಿ ಮತ್ತ ಶೀತ ಉಂಟಾಗಿ ಬಹಳ ದಿನಗಳವರೆಗೆ ವಾಸಿಯಾಗದಿದ್ದರೆ ಹಾಗೂ ಮೂಗಿನಿಂದ ಗಟ್ಟಿಯಾದ ಸಿಂಬಳ ಸೋರುವುದು, ಮೂಗು ಕಟ್ಟಿ ಉಸಿರಾಟಕ್ಕೆ ತೊಂದರೆ ಮತ್ತು ಕಣ್ಣಿನ ಉಬ್ಬಿನ ಜಾಗ್ರದಲ್ಲಿ ನೋವು, ಭಾರ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದನ್ನು ದುಷ್ಟಪೀನಸ ಎಂದು ಕರೆಯುತ್ತಾರೆ. ಈ ರೋಗ ಹಳೆಯದಾದಾಗ ಮೂಗಿಗೆ ವಾಸನೆ ಸಹ ಗೊತ್ತಾಗುವುದಿಲ್ಲ. ಇಂತಹ ಸಮಯದಲ್ಲಿ ಕಾಲು ಮೆಣಸಿನ ಚೂರ್ಣವನ್ನು ಬೆಲ್ಲ ಮತ್ತು ಹಸುವಿನ ಮೊಸರಿನಲ್ಲಿ ಸೇವಿಸುವುದರಿಂದ ಉತ್ತಮ ಲಾಭ ಸಿಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *