WhatsApp Group Join Now

ಸಾಮಾನ್ಯವಾಗಿ ಎಲ್ಲರಲ್ಲೂ ಈ ಸಮಸ್ಯೆ ಇಲ್ಲದಿದ್ದರೂ ಕೆಲವರಿಗಂತೂ ಈ ಸಮಸ್ಯೆ ಹೆಚ್ಚು ಕಾಡುತ್ತೆ ಹಲ್ಲಿನಲ್ಲಿ ಹುಳಗಳಾಗಿ ತಮ್ಮ ಹಲ್ಲುಗಳನ್ನು ಎಷ್ಟೋ ಮಂದಿ ಕಳೆದುಕೊಂಡಿದ್ದಾರೆ ಹಾಗಾಗಿ ಇಂತಹ ಹಲ್ಲಿನ ಹುಳು ಹೋಗಲಾಡಿಸಲು ಸುಲಭ ಮನೆಮದ್ದು ಇಲ್ಲಿವೆ.

2 ರಿಂದ 3 ಲವಂಗದ ಪುಡಿಯನ್ನು ಹಲ್ಲುಗಳಿಗೆ ತುಂಬಿದರೆ ಹುಳುಗಳು ನಿವಾರಣೆಯಾಗುತ್ತವೆ. ಜಾಯಿಕಾಯಿ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಹಲ್ಲುಗಳ ನಡುವೆ ಇಟ್ಟುಕೊಂಡರೆ ಹುಳುಗಳು ನಾಶವಾಗುತ್ತವೆ.

ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪು ಸೇರಿಸಿ ಜಗಿದರೆ ಹಲ್ಲು ನೋವು ಕಡಿಮೆಯಾಗಿ ಹುಳುಗಳು ನಿವಾರಣೆಯಾಗುತ್ತದೆ. ಈರುಳ್ಳಿ ಬೀಜಗಳನ್ನು ಸುಟ್ಟು ಆ ಹೊಗೆಯನ್ನು ಹುಳು ಆಗಿರುವ ಹಲ್ಲುಗಳಿಗೆ ಕೊಟ್ಟರೆ ಹುಳಗಳು ಸತ್ತು ಹಲ್ಲು ಸ್ವಚ್ಛವಾಗುತ್ತವೆ.

ಹಲ್ಲು ತೂತಾಗಿ ಹುಳು ಆಗಿದ್ದರೆ ಇಂಗನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಪ್ರಯೋಜನವಿದೆ. ಸಾಸಿವೆ ಎಣ್ಣೆ ಮತ್ತು ಸೈಂಧವ ಉಪ್ಪು ಸೇರಿಸಿ ಪೇಸ್ಟ್‌ ಮಾಡಿ ಹಲ್ಲಿನ ನಡುವೆ ಇಟ್ಟರೆ ಹುಳುಗಳು ಕಡಿಮೆಯಾಗುತ್ತವೆ.

ಬೇವಿನ ಎಲೆಗಳ ಕಷಾಯಕ್ಕೆ ಅರಿಶಿನ ಸೇರಿಸಿ ಬಾಯಿ ಮುಕ್ಕಳಿಸಿದರೆ ಹುಳುಕು ಹಲ್ಲು ಕಡಿಮೆಯಾಗುತ್ತದೆ. ವೀಟ್‌ಗ್ರಾಸ್‌ ಎಲೆಗಳನ್ನು ಅಗಿಯುತ್ತಿದ್ದರೆ ಹಲ್ಲಿನ ಹುಳುಗಳು ನಿವಾರಣೆಯಾಗುತ್ತದೆ.

ಪ್ರತಿ ದಿನ ಬೆಳಗ್ಗೆ ಸ್ವಲ್ಪ ಬಿಸಿ ನೀರಿಗೆ ಎಳ್ಳೆಣ್ಣೆ ಸೇರಿಸಿ ಬಾಯಿ ಮುಕ್ಕಳಿಸಿದರೆ ಎಲ್ಲಾ ತರಹದ ಹಲ್ಲು ಮತ್ತು ಒಸಡಿನ ಸಮಸ್ಯೆಯಿಂದ ದೂರವಿರಬಹುದು.

WhatsApp Group Join Now

Leave a Reply

Your email address will not be published. Required fields are marked *