ಕಲ್ಮಶಗಳನ್ನು ತೊಡೆದು ಹಾಕುತ್ತದೆ: ಅಳುವುದು ಕೇವಲ ಮನಸ್ಸನ್ನಷ್ಟೇ ಅಲ್ಲ ದೇಹವನ್ನು ಶುಚಿಗೊಳಿಸುತ್ತದೆ.ಒತ್ತಡದಿಂದ ಉತ್ಪತ್ತಿಯಾಗುವ ಕಣ್ಣೀರು ದೇಹದ ಕಾರ್ಟಿಸೋಲ್ (ಓತ್ತಡ ಹಾರ್ಮೋನ್) ಅನ್ನು ಹೆಚ್ಚಿಸುವ ರಾಸಾಯನಿಕಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಭಾವನಾತ್ಮಕ ಮೂಲದಿಂದ ಅತ್ತಾಗ ಹಲವಾರು ರಾಸಾಯನಿಕಗಳು ಉತ್ಪತ್ತಿಯಾಗಿ ನೋವನ್ನು ಕಡಿಮೆ ಮಾಡುತ್ತದೆ.
ಬ್ಯಾಕ್ಟೀರಿಯಾ ವನ್ನು ಕೊಲ್ಲುತ್ತದೆ: ಅಳುವುದು ಬ್ಯಾಕ್ಟೀರಿಯಾ ಗಳನ್ನೂ ಕೊಲ್ಲುವ ಉತ್ತಮ ಮಾರ್ಗವಾಗಿದೆ. ಎದೆ ಹಾಲು, ವೀರ್ಯ, ಎಂಜಲಿನಲ್ಲಿ ಇರುವ ಲೈಸೋಜೋಮ್ ಗಳು ಕಣ್ಣೀರಿನಲ್ಲೂ ಇದ್ದು ಅವುಗಳು ಕೇವಲ ೫ರಿಂದ ೧೦ ನಿಮಿಷಗಳ ಒಳಗೆ ಶೇ ೯೦ ರಷ್ಟು ಬ್ಯಾಕ್ಟೀರಿಯಾ ಗಳನ್ನೂ ಕೊಲ್ಲುವ ಶಕ್ತಿ ಹೊಂದಿದೆ. ಜರ್ನಲ್ ಫುಡ್ ಮೈಕ್ರೋಬಯಾಲಜಿಯಲ್ಲಿ ಪ್ರಕಟವಾದ 2011 ರ ಅಧ್ಯಯನದ ಪ್ರಕಾರ ಕಣ್ಣೀರು ಬಲವಾದ ಆಂಟಿಮೈಕ್ರೊಬಿಯಲ್ ಶಕ್ತಿಯನ್ನು ಹೊಂದಿದ್ದು ಆಂಥ್ರಾಕ್ಸ್ನ ನಂತಹ ವೈರಸ್ ವಿರುದ್ಧವೂ ಸಹ ರಕ್ಷಿಸಿಕೊಳ್ಳಬಹುದು.
ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ: ಲಕ್ರಿಮಲ್ ಗ್ರಂಥಿಗಳಿಂದ ಉತ್ಪಾದನೆಯಾದ ಕಣ್ಣೀರು ಕಣ್ಣುಗುಡ್ಡೆಗಳು ಮತ್ತು ಕಣ್ಣುರೆಪ್ಪೆಗಳನ್ನು ನಯಗೊಳಿಸುವ ಮೂಲಕ ನಮ್ಮ ದೃಷ್ಟಿಗೋಚರವನ್ನು ತೆರವುಗೊಳಿಸುತ್ತದೆ. ಕಣ್ಣಿನ ಪೊರೆಗಳು ನಿರ್ಜಲೀಕರಣಗೊಂಡಾಗ, ನಮ್ಮ ದೃಷ್ಟಿ ಸ್ವಲ್ಪ ಮಬ್ಬಾಗಬಹುದು. ಕಣ್ಣೀರು ಕಣ್ಣಿನ ತೇವಾಂಶವನ್ನು ಅಧಿಕಗೊಳಿಸಿ ಧೂಳು, ಕಸ, ಕಲ್ಮಶಗಳನ್ನು ತೊಳೆದು ಹಾಕುವುದು.
ಒತ್ತಡವನ್ನು ಶಮನಗೊಳಿಸುತ್ತದೆ: ಅಳು ಪರಿಹಾರದ ಭಾವವನ್ನು ನೀಡುತ್ತದೆ. ಅತ್ತಾಗ ಒತ್ತಡ ಉಂಟುಮಾಡುವ ಹಾರ್ಮೋನ್ ಮತ್ತು ಕೆಮಿಕಲ್ಸ್ ಗಳು ಕಡಿಮೆಯಾಗುವುದರಿಂದ ಚಿಂತೆ ದೂರವಾಗುತ್ತದೆ. ಅಳುವುದು ಭಾವನೆಗಳನ್ನು ಹೊರ ಹಾಕುವ ಆರೋಗ್ಯಕರ ಪರ್ಯಾಯವಾಗಿದ್ದು, ಚಿಂತೆಯಿಂದ ಉಂಟಾಗುವ ದೈಹಿಕ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಕಣ್ಣೀರು ನಕಾರಾತ್ಮಕ ಭಾವನೆ, ಒತ್ತು, ಮತ್ತು ಹತಾಶೆಗಳಿಗೆ ಒಂದು ಭಾವನಾತ್ಮಕ ಬಿಡುಗಡೆ ನೀಡುತ್ತದೆ.
ಮೂಡ್ ಸುಧಾರಿಸುತ್ತದೆ: ಯಾವುದೇ ಖಿನ್ನತೆ-ಶಮನಕಾರಿಗಳಿಗಿಂತ ಕಣ್ಣೀರು ನಮ್ಮ ಚಿತ್ತವನ್ನು ಉತ್ತಮಗೊಳಿಸಬಹುದು. ಅಳುವುದು ಸ್ವ-ಶಮನಕಾರಿಯಾಗಿದೆ. ಒತ್ತಡದಿಂದ ಅತ್ತಾಗ ಶೇ ೯೦ ರಷ್ಟು ಜನರಲ್ಲಿ ಚಿತ್ತ ಸ್ವಾಸ್ತ್ಯ ಸುಧಾರಿಸುತ್ತದೆ ಎಂಬ ವರದಿಯು ಇದೆ.
ಸಂವಹನವನ್ನು ಹೆಚ್ಚಿಸುತ್ತದೆ: ಪದಗಳನ್ನು ವ್ಯಕ್ತಪಡಿಸಲಾಗದಿದ್ದನ್ನು ಕಣ್ಣೀರು ವ್ಯಕ್ತ ಪಡಿಸುತ್ತದೆ. ಸಂಬಂಧಗಳಲ್ಲಿ ಮುಂದಿರುವ ವ್ಯಕ್ತಿಗೆ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ಕಣ್ಣೀರು ಉತ್ತಮ ಸಾಧನವಾಗಿದೆ.