WhatsApp Group Join Now

ಹೌದು ಅದೃಷ್ಟ ಬಂದಾಗ ಅಹಂಕಾರ ಮಾಡಿದರೆ ಹೀಗೆ ಆಗೋದು ಅನ್ನೋದಕ್ಕೆ ತಾಜಾ ಉದಾಹರಣೆ ಈ ರಾನು ಮಂಡಲ್, ಯಾವುದೇ ಕಾರಣಕ್ಕೂ ಅದೃಷ್ಟ ಹಾಗು ಅವಕಾಶಗಳು ಸಿಕ್ಕಾಗ ಅಹಂಕಾರ ಮತ್ತು ಸ್ಟಾರ್ ಎಂಬ ಧಿಮಾಕು ಬೆಳಸಿಕೊಂಡರೆ ಹೀಗೆ ಆಗೋದು, ಭಿಕ್ಷೆ ಬೇಡುತಿದ್ದವಳು ಒಂದೇ ದಿನದಲ್ಲಿ ಸ್ಟಾರ್ ಆದಾಗ ಅದನ್ನು ಉಳಿಸ್ಕೊಳ್ಳುವ ತಾಳ್ಮೆ ಇರಬೇಕು ಮತ್ತು ಅಹಂಕಾರ ಇರಬಾರದು, ಈ ರಾನು ಮಂಡಲ್ ಗೆ ಏನಾಗಿದೆ ಅನ್ನೋದು ಇಲ್ಲಿದೆ ನೋಡಿ.

ಒಬ್ಬ ವ್ಯಕ್ತಿಯನ್ನ ಒಂದೇ ದಿನದಲ್ಲಿ ಹೀರೊ ಮಾಡೋದು ನಮ್ಮ ಜನರೇ ಮತ್ತು ಮನಸ್ಸು ಮಾಡಿದ್ರೆ ಅದೇ ಜನ ಒಂದೇ ದಿನದಲ್ಲಿ ಜೀರೋ ಮಾಡುತ್ತಾರೆ, ಇದೆ ಈ ರಾನು ಮಂಡಲ್ ಜೀವನದಲ್ಲಿ ಆಗಿದ್ದು, ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತ ಹಾಡು ಹೇಳುತಿದ್ದ ರಾನು ಮಂಡಲ್ ಒಂದು ದಿನ ಒಬ್ಬ ಪ್ರಯಾಣಿಕನ ಕಣ್ಣಿಗೆ ಬೀಳುತ್ತಲೇ ಆಗ ಅವನು ರಾನು ಹಾಡುವುದನ್ನ ರೆಕಾರ್ಡ್ ಮಾಡಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾನೆ.

ಅಪ್ಲೋಡ್ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ರಾನು ಮಂಡಲ್ ಒಂದೇ ದಿನದಲ್ಲಿ ಸ್ಟಾರ್ ಆಗುತ್ತಲೇ ಅತ್ತ ಬಾಲಿವುಡ್ ರಾನು ಮಂಡಲ್ ಅವರನ್ನು ಕರೆಸಿ ಅವಕಾಶ ಕೊಟ್ಟು ಬೆನ್ನಲೇ ರಾನು ಮಂಡಲ್ ಒಂದೇ ಸಾಕಷ್ಟು ಸುದ್ದಿ ಮಾಡುತ್ತಾರೆ, ಹಾಗೆ ವಿವಾದಗಳು ಹೆಚ್ಚು ಸುದ್ದಿ ಮಾಡುತ್ತವೆ.

ಒಂದು ದಿನ ಸಿಕ್ಕಾಪಟ್ಟೆ ಮೇಕಪ್ ಮಾಡಿಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾಗಿ ಹೆಚ್ಚು ಟ್ರಾಲ್ ಆಗುತ್ತಾರೆ ಹಾಗೆ ಒಂದು ದಿನ ಒಂದು ಮಾಲ್ ನಲ್ಲಿ ಶಾಪಿಂಗ್ ಮಾಡುವಾಗ ಅಭಿಮಾನಿಯೊಬ್ಬರು ಮುಟ್ಟಿ ಮಾತಾಡಿಸಿ ಸೆಲ್ಫಿ ಕೇಳಿದರು ಅನ್ನೋ ವಿಚಾರಕ್ಕೆ ಸಿಕ್ಕಾಪಟ್ಟೆ ಕೋಪಗೊಂಡ ರಾನು ಮಂಡಲ್ ವಿಚಿತ್ರವಾಗಿ ವರ್ತನೆ ಮಾಡುತ್ತಾರೆ ಇದು ಸಿಕ್ಕಾಪಟ್ಟೆ ವೈರಲ್ ಆಗಿ ಒಂದೇ ದಿನದಲ್ಲಿ ಹೀರೊ ಮಾಡಿದ್ದ ಅಭಿಮಾನಿಗಳು ಅವರನ್ನು ಒಂದೇ ದಿನದಲ್ಲಿ ಜೀರೋ ಮಾಡುತ್ತಾರೆ, ಇತ್ತ ಕರೋನ ಸಹ ಹೆಚ್ಚಾಗುತ್ತೆ ಯಾರಿಗೂ ಕೆಲಸ ಇರಲ್ಲ ಅದರಲ್ಲೂ ರಾನು ಮಂಡಲ್ ಅವರಿಗೆ ಯಾವುದೇ ಅವಕಾಶಗಳು ಸಿಗದೇ ಪುನಃ ಮತ್ತೆ ಅದೇ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತ ಹಾಡು ಹೇಳುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *