WhatsApp Group Join Now

ಶೀತ ಕೆಮ್ಮು ಕಫ ಗಳಿಗೆ ಮುಂತಾದ ಸಮಸ್ಯೆಗಳಿಗೆ ಅದ್ಭುತವಾದ ಮನೆ ಮದ್ದು ಯಾವುದು ಎಂದ ರೆ ಶುಂಠಿ ಎಂದರೆ ತಪ್ಪಾಗುವುದಿಲ್ಲ. ಇಂತಹ ಅದ್ಭುತವಾದ ಶುಂಠಿ ಕೆಲವರ ಆರೋಗ್ಯಕ್ಕೆ ಹಾನಿಕಾರಕವಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಶುಂಠಿ ಎಲ್ಲರಿಗೂ ಆಗಿಬರುವುದಿಲ್ಲ. ಅವರ ಅವರ ದೇಹಕ್ಕೆ ಅನುಗುಣವಾಗಿ ಅವರು ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ. ಹಾಗಾದರೆ ಶುಂಠಿಯು ಯಾವ ಆರೋಗ್ಯಕ್ಕೆ ಒಳ್ಳೆಯದಲ್ಲ ಅದರ ಅನುಗುಣವಾಗಿ ಮಾಹಿತಿಯನ್ನು ಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಮಿಸ್ ಮಾಡದೇ ಓದಿ. ಮೊದಲನೆಯದಾಗಿ ನಿಮ್ಮ ಬಾಡಿ ಹೀಟ್ ಇದ್ದರೆ ನೀವು ಅತಿಯಾಗಿ ಬೆವರುತ್ತ ಇದ್ದರೆ

ಶುಂಠಿಯನ್ನು ಅವಾಯ್ಡ್ ಮಾಡಿದರೆ ಒಳ್ಳೆಯದು. ಅದರಲ್ಲೂ ಬೇಸಿಗೆ ಕಾಲದಲ್ಲಿ ಶುಂಠಿಯನ್ನು ಸೇವನೆ ಮಾಡಿದರೆ ನಿಮ್ಮ ಬಾಡಿಯನ್ನು ಇನ್ನು ಹೀಟ್ ಮಾಡುತ್ತದೆ. ಬಾಡಿ ಹೀಟ್ ಆಗುವುದರಿಂದ ಹಲವಾರು ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ಬೇಸಿಗೆಯಲ್ಲಿ ನಿಮ್ಮ ಬಾಡಿ ಹೀಟ್ ಆದರೆ ಮೂಗಿನಲ್ಲಿ ರಕ್ತವು ಕೂಡ ಬರುತ್ತದೆ. ಹಾಗಾಗಿ ಶುಂಠಿಯನ್ನು ಅವಾಯ್ಡ್ ಮಾಡಿದರೆ ಒಳ್ಳೆಯದು. ಮತ್ತು ನೀವು ಶುಂಠಿ ಚಹಾವನ್ನು ಸೇವನೆ ಮಾಡುತ್ತಿದ್ದರೆ ಮಿತಿಯಾಗಿ ಸೇವನೆ ಮಾಡಬೇಕು. ನಿಮ್ ಅಗತ್ಯಕ್ಕೆ ತಕ್ಕಷ್ಟು ಇರಬೇಕು. ಅಗತ್ಯವಾಗಿ ಬೀರಬಾರದು. ಶುಂಠಿಯನ್ನು ಅಧಿಕವಾಗಿ ಸೇವನೆ ಮಾಡುವುದರಿಂದ

ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಜಠರದಲ್ಲಿ ಒಂದಿಷ್ಟು ಸಮಸ್ಯೆಗಳು ಕಾಡುತ್ತದೆ. ಹಾಗೂ ಎದೆಯುರಿ ಎಂತಹ ಸಮಸ್ಯೆಗಳು ಕೂಡ ಬರುತ್ತದೆ. ಬಾಯಿ ತುರಿಕೆ ಕೂಡ ಕಂಡುಬರುತ್ತದೆ ಇದನ್ನು ಅಧಿಕವಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಆಸಿಡಿಟಿ ಹೆಚ್ಚಾಗುತ್ತದೆ. ಆಸಿಡಿಟಿ ಸಮಸ್ಯೆ ಇದ್ದವರು ಶುಂಠಿಯನ್ನು ಅವಾಯ್ಡ್ ಮಾಡಿದರೆ ಒಳ್ಳೆಯದು. ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೂ ಕೂಡ ಶುಂಠಿಯನ್ನು ಸೇವನೆ ಮಾಡಬಾರದು ಮತ್ತು ಶುಂಠಿ ಯು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಮಧುಮೇಹಿಗಳು ಇದನ್ನು ಅಧಿಕ ಪ್ರಮಾಣದಲ್ಲಿ ಬಳಕೆ ಮಾಡಬಾರದು.

WhatsApp Group Join Now

Leave a Reply

Your email address will not be published. Required fields are marked *