WhatsApp Group Join Now

ಅಭ್ಯಂಗ ಸ್ನಾನವು ಬೆಳಗ್ಗೆ ಬೇಗನೆ ಎದ್ದು ಸೂರ್ಯೋದಯಕ್ಕೆ ಮುಂಚಿತವಾಗಿ ಇಡೀ ದೇಹಕ್ಕೆ ಎಣ್ಣೆಯ ನ್ನು ಹಚ್ಚಿ ಮತ್ತು ಚರ್ಮದಲ್ಲಿ ಹೀರಿಕೊಳ್ಳುವವರೆಗೆ ಮಸಾಜ್ ಮಾಡಿ ಮತ್ತು ನಂತರ ಬೆಚ್ಚಗಿನ ನೀರಿನ ಸ್ನಾನವನ್ನು ತೆಗೆದುಕೊಳ್ಳುವುದು ಆಗಿದೆ. ಅಭ್ಯಂಗ ಸ್ನಾನ ಎಂದೊಡನೆ ನಮಗೆಲ್ಲ ನೆನಪಾಗೋದು ಯುಗಾದಿ ದೀಪಾವಳಿ ಹಬ್ಬಗಳು. ಸ್ನಾನ ಮಾಡೋಕೆ ಹಬ್ಬ ಹರಿದಿನಗಳ ಬರ ಬೇಕಿಲ್ಲ. ನಾವು ಬಿಡುವಿನ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡಿದರೆ ಅನೇಕ ಲಾಭಗಳಾಗುತ್ತವೆ. ಇಷ್ಟಕ್ಕೂ ಅಭ್ಯಂಗ ಸ್ನಾನ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ ಅನ್ನುವುದನ್ನು ತಿಳಿಯೋಣ ಬನ್ನಿ.ಮೊದಲನೇದಾಗಿ ಈ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ನಾವು ಎಣ್ಣೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿ ಬಿಸಿ ಬಿಸಿಯಾದ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುವುದಕ್ಕೆ ತುಂಬಾನೇ ಸಹಾಯವಾಗುತ್ತದೆ.

ಇನ್ನು ನಾವು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದರಿಂದ ದೇಹಕ್ಕೆ ಉಷ್ಣತೆ ಜಾಸ್ತಿ ಆಗಿದ್ದಾರೆ. ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯಕವಾಗಿದೆ. ಅದರ ಜೊತೆಯಲ್ಲಿ ನಮ್ಮ ರಕ್ತದ ಒತ್ತಡವನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳ ಲು ತುಂಬಾನೇ ಸಹಾಯವಾಗುತ್ತೆ.ಇನ್ನು ಈ ಎಣ್ಣೆ ಹಚ್ಚಿ ಸ್ನಾನ ಮಾಡುವುದ್ರಿಂದ ವಾತ ದೋಷವನ್ನು ನಿವಾರಿಸಲು ಬಹಳ ಒಳ್ಳೆಯದು. ಚರ್ಮದ ಮೇಲಿನ ರೋಮದ ಮೂಲಕ ಆಂತರಿಕವಾಗಿ ಎಣ್ಣೆ ಇಳಿಯುವ ಮೂಲಕ ವಾತ ದೋಷವನ್ನು ನಿವಾರಣೆ ಮಾಡುತ್ತದೆ. ಜೊತೆ ಗೆ ವಾತ ದೋಷವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಲು ಸಹಾಯ ಮಾಡುತ್ತದೆ.
ಹೀಗಾಗಿ ವಾರದಲ್ಲಿ ಒಮ್ಮೆ ಯಾದರೂ ಉಗುರು ಬೆಚ್ಚಗಿನ ಎಣ್ಣೆಯನ್ನು ದೇಹಕ್ಕೆ ಹಚ್ಚಿ ಮಸಾಜ್ ಮಾಡಿಕೊಂಡು ಸ್ನಾನ ಮಾಡಿ. ಮತ್ತು ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮ ವನ್ನು ಮೊಶ್ಚಿ ರೈಸ್ ಮಾಡುತ್ತದೆ. ಜೊತೆಗೆ ಚರ್ಮವನ್ನು ಕಾಂತಿಯುತ ಗೊಳಿಸುತ್ತದೆ.

ಹೀಗಾಗಿ ಅಭ್ಯಂಜನ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಒಣ ಚರ್ಮ ಇರುವವರು ದಿನನಿತ್ಯ ಎಣ್ಣೆ ಹಚ್ಚಿ ಮಸಾಜ್ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ. ಜೊತೆಗೆ ಹೊಳಪಿನಿಂದ ಕೂಡಿರುತ್ತದೆ. ಜೊತೆಗೆ ವಯಸ್ಸಾಗುವಿಕೆಯ ಲಕ್ಷಣಗಳಾದ ಚರ್ಮ, ಸುಕ್ಕುಗಟ್ಟುವಿಕೆ, ಕಪ್ಪಗಾಗುವುದು ಇದನ್ನೆಲ್ಲ ತಡೆದು ಚರ್ಮವು ಚೆನ್ನಾಗಿ ಇರುತ್ತದೆ. ಇನ್ನು ಯಾರಿಗೆ ನಿದ್ರಾಹೀನತೆ ಸಮಸ್ಯೆ ಇರುತ್ತದೆ ಅಂತವರಿಗೆ ಇದು ತುಂಬಾನೇ ಒಳ್ಳೆಯದು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಎಣ್ಣೆ ಸ್ನಾನಕ್ಕೆ ವಿಶೇಷ ಮಹತ್ವ ವಿದೆ. ಆಯುರ್ವೇದದ ಪ್ರಮುಖ ಆಕರ ಗ್ರಂಥ ಗಳಾದ ಸುಶ್ರುತ ಸಂಹಿತ ಅಷ್ಟಾಂಗ ಹೃದಯ ಚರಕ ಸಂಹಿತೆಯ ಸೂತ್ರ, ಸ್ನಾನ ದಲ್ಲಿ ಎಣ್ಣೆ ಸ್ನಾನದ ಬಗ್ಗೆ ಪ್ರಸ್ತಾಪವಿದೆ. ಪ್ರತಿನಿತ್ಯ ಮೈಗೆ ಎಣ್ಣೆ ಹಚ್ಚುವುದರಿಂದ ಶರೀರದ ಆಯಾಸ ಪರಿಹಾರವಾಗುತ್ತದೆ. ಅಲ್ಲದೆ ನಿದ್ರಾಹೀನತೆಯಿಂದ ಬಳಲುವವರು ಅಭ್ಯಂಗ ಸ್ನಾನ ಮಾಡಿದರೆ ನಿದ್ರಾಹೀನತೆ ಸಮಸ್ಯೆ ದೂರ ಆಗುತ್ತೆ.

WhatsApp Group Join Now

Leave a Reply

Your email address will not be published. Required fields are marked *