ಹಿಂದೂ ಸಂಪ್ರದಾಯದ ಪ್ರಕಾರ ಅಮಾವಾಸ್ಯೆಗೆ ವಿಶೇಷ ಪ್ರಾಮುಖ್ಯತೆ ಇದೆ. ಪಿತ್ರುಕಾರ್ಯಗಳಿಗೆ ಪ್ರಶಸ್ತವಾದ ದಿನ ಇದಾಗಿದ್ದು,ದಾನ,ಧರ್ಮ, ಪಿತೃ ತರ್ಪಣ ಮುಂತಾದ ಕಾರ್ಯಗಳಿಗೆ ಉತ್ತಮ ದಿನವಾಗಿದೆ. ಹಾಗಾಗಿ ಅಮಾವಾಸ್ಯೆಯಂದು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಅಥವಾ ಹೊಸ ಕೆಲಸಗಳನ್ನು ಆರಂಭಿಸುವುದು ಒಳ್ಳೆಯದಲ್ಲ.ಕೆಲವು ವಸ್ತುಗಳನ್ನು ಸಹ ಖರೀದಿಸುವುದು ಅಶುಭವೆಂದು ಹೇಳಲಾಗುತ್ತದೆ. ಹಾಗಾದರೆ ಅಮಾವಾಸ್ಯೆಯಂದು ಮನೆಗೆ ತರಬಾರದ ವಸ್ತುಗಳು ಯಾವುವೆಂದು ತಿಳಿಯೋಣ…

ಸನಾತನ ಸಂಸ್ಕೃತಿಯಲ್ಲಿ ಅನೇಕ ಬಗೆಯ ಆಚರಣೆಗಳಿವೆ. ಆಯಾ ಆಚರಣೆಗೆ ಅದರದ್ದೇ ಆದ ಮಹತ್ವವಿದೆ. ಪಂಚಾಂಗದಲ್ಲಿ ನಮೂದಿಸಿದ ತಿಥಿ, ಮುಹೂರ್ತಗಳಿಗೆ ಅನುಗುಣವಾಗಿ ಕೆಲವೊಂದು ದಿನಗಳು ಕೆಲವು ಕೆಲಸಗಳಿಗೆ ನಿಷಿದ್ಧವಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟಿದ ವಾರ ಕ್ಶೌರ ಮಾಡಿಸಿಕೊಳ್ಳುವುದು ,ಉಗುರು ಕತ್ತರಿಸುವುದು ಮಾಡಬಾರದು ಎಂಬ ನಿಯಮವಿದೆ.ಹಾಗೆಯೇ ತಿಥಿಯ ಪ್ರಕಾರ ಏಕಾದಶಿಯಂದು ಕೆಲವರು ಉಪವಾಸ ಮಾಡುತ್ತಾರೆ,ಇಲ್ಲವೇ ಒಂದು ಹೊತ್ತು ಮಾತ್ರ ಭೋಜನ ಮಾಡುತ್ತಾರೆ . ಹಲವು ಸಂಪ್ರದಾಯಗಳನ್ನು ಆಚರಿಸುವವರು ಕೆಲವರೇ ಆದರೂ ಅದರ ಮಹತ್ವ ತಿಳಿದು ಪಾಲಿಸಿದರೆ ಎಲ್ಲರಿಗೂ ಅನುಕೂಲ. ಅಮಾವಾಸ್ಯೆ ತಿಥಿಯು ಪಿತೃಗಳಿಗೆ ಅರ್ಪಿತವಾದ ದಿನ . ಹಾಗಾಗಿ ಆ ದಿನ ರಾತ್ರಿ ಹೊರಗಡೆ ಯಾರೂ ಹೆಚ್ಚು ಒಡಡುತಿರಲಿಲ್ಲ. ಅಮಾವಾಸ್ಯೆ ಎಂದರೆ ಉತ್ತಮ ಕಾರ್ಯಗಳನ್ನು ಮಾಡಲು ಒಳ್ಳೆಯ ದಿನವಲ್ಲ ಎಂಬ ನಂಬಿಕೆ . ಹಾಗಾಗಿ ಆ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದು ಶ್ರೆಯಸ್ಸಲ್ಲ ಎಂಬ ಮಾತಿದೆ , ಹಾಗಿದ್ದರೆ ಆ ವಸ್ತುಗಳ ಬಗ್ಗೆ ತಿಳಿಯೋಣ….

ಪೊರಕೆ : ಅಮಾವಾಸ್ಯೆಯು ಪಿತೃಗಳ ದಿನವೆಂದು ಹೇಳಲಾಗುತ್ತದೆ. ಆ ದಿನ ಶನಿ ದೇವರ ದಿನವೂ ಆಗಿದೆ . ಲಕ್ಷ್ಮೀ ದೇವಿಗೂ ಪೊರಕೆಗೂ ಸಂಬಂಧವಿರುವ ಕಾರಣ, ಅಮಾವಾಸ್ಯೆಯಂದು ಪೊರಕೆಯನ್ನು ಮನೆಗೆ ತಂದರೆ ಲಕ್ಷ್ಮೀ ದೇವಿಯು ಕೋಪಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ .ಅಷ್ಟೇ ಅಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚುವುದರಿಂದ ಅನಗತ್ಯ ವಸ್ತುಗಳ ಮೇಲೆ, ಅನಾರೋಗ್ಯಗಳಿಗೆ ಹಣ ಖರ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಭಿವೃದ್ದಿ ಹೊಂದುವುದು ಕಷ್ಟಕರವಾಗುತ್ತದೆ. ಹಾಗಾಗಿ ಅಮಾವಾಸ್ಯೆಯಂದು ಪೊರಕೆಯನ್ನು ಮನೆಗೆ ತರುವುದು ಶುಭವಲ್ಲ … ಗೋದಿ ಹಿಟ್ಟು : ಗೋಧಿ ಅಥವಾ ಗೋಧಿ ಹೊತ್ತು ಯಾವುದನ್ನೂ ಅಮಾವಾಸ್ಯೆಯಂದು ಮನೆಗೆ ತರುವುದು ಶುಭವಲ್ಲ ಎಂಬ ನಂಬಿಕೆ ಇದೆ . ಅದರಲ್ಲೂ ವಿಶೇಷವಾಗಿ ಭಾದ್ರಪದ ಮಾಸದ ಅಮಾವಾಸ್ಯೆಯಂದು ಇದನ್ನು ಪಾಲಿಸಲೇಬೇಕು ಎಂದು ಶಾಸ್ತ್ರ ಹೇಳುತ್ತದೆ. ಈ ದಿನ ಗೋಧಿ ಅಥವಾ ಗೋಧಿ ಹಿಟ್ಟನ್ನು ಕೊಳ್ಳುವುದು ಪಿತೃಗಳಿಗೆ ಮಾತ್ರ ಎಂಬ ನಂಬಿಕೆ ಇದೆ ,ಹಾಗಾಗಿ ಅಮಾವಾಸ್ಯೆಯ ದಿನ ಗೋಧಿ ಹಿಟ್ಟನ್ನು ಕೊಳ್ಳುವುದು ಅಶುಭವಾಗಿದೆ…

ತಲೆಗೆ ಎಣ್ಣೆ ಹಚ್ಚಬಾರದು: ಅಮಾವಾಸ್ಯೆಯಂದು ತಲೆಗೆ ಎಣ್ಣೆ ಹಚ್ಚಬಾರದು,ಹಾಗೆಯೇ ಸಂಕ್ರಾಂತಿಯಂದು ಸಹ ಎಣ್ಣೆ ಹಚ್ಚುವುದು ಅಶುಭವೆಂದು ಹೇಳಲಾಗುತ್ತದೆ.ಅಮಾವಾಸ್ಯೆಯಂದು ಎಣ್ಣೆಯನ್ನು ದಾನ ಮಾಡುವುದರಿಂದ ಶನಿಯ ಉತ್ತಮ ಪ್ರಭಾವ ಹೆಚ್ಚಾಗುವುದಲ್ಲದೇ ಶನಿ ದೋಷ ನಿವಾರಣೆ ಆಗುತ್ತದೆ. ಪಿತೃಗಳ ನಿಮಿತ್ತ ಇರುವ ಅಮಾವಾಸ್ಯೆಯಂದು ಸಾತ್ವಿಕ ಸ್ಥಿತಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಸಿಂಗರಿಸಿಕೊಳ್ಳುವುದು ಮತ್ತು ತಲೆಗೆ ಎಣ್ಣೆ ಹಚ್ಚುವುದು ನಿಷಿಧವೆಂದು ಹೇಳಲಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಮಾವಾಸ್ಯೆಯಂದು ಚಂದ್ರನ ಪಕ್ಷ ಪರಿವರ್ತನೆ ಆಗುತ್ತದೆ,ಹಾಗೆಯೇ ಸಂಕ್ರಾಂತಿಯಂದು ಸೂರ್ಯನ ಸ್ಥಿತಿ ಬದಲಾವಣೆ ಆಗುತ್ತದೆ. ಹಾಗಾಗಿ ಸಕಾರಾತ್ಮಕಯನ್ನು ಕಾಪಾಡಿಕೊಳ್ಳಲು ಆ ದಿನ ತಲೆಗೆ ಎಣ್ಣೆ ಹಚ್ಚದೇ ಸಾತ್ವಿಕ ಭಾವವನ್ನು ಹೊಂದುವುದು ಶುಭವೆಂದು ಹೇಳಲಾಗುತ್ತದೆ. ಶುಭಕಾರ್ಯಕ್ಕಾಗಿ ವಸ್ತುಕೊಳ್ಳುವುದು : ಪಿತೃ ಕರ್ಮಗಳಿಗೆ ಮತ್ತು ಪಿತೃಗಳ ಸಲುವಾಗಿ ದಾನ ನೀಡಲು ಶ್ರೇಷ್ಠವಾದದ್ದು ಅಮಾವಾಸ್ಯೆಯ ದಿನ. ಹಾಗಾಗಿ ಅ ದಿನ ಶುಭ ಕಾರ್ಯಗಳ ನಿಮಿತ್ತ ಯಾವುದೇ ವಸ್ತುಗಳನ್ನು ಕೊಳ್ಳುವುದು ಅಶುಭವೆಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *