ಮುಖದ ವೈಶಿಷ್ಟ್ಯಕ್ಕೆ ನಮ್ಮ ಕಣ್ಣುಗಳೇ ಪ್ರಮುಖ ಅಂಗ. ಬೇರೆಯವರನ್ನು ಸೆಳೆಯುವ ಮತ್ತು ಅವರ ಗಮನವನ್ನು ನಿಮ್ಮೆಡೆಗೆ ಕೇಂದ್ರಿಕರಿಸುವ ಸಾಮರ್ಥ್ಯವಿರುವ ಅಂಗವೆಂದರೆ ಅದು ನಿಮ್ಮ ಕಣ್ಣುಗಳು. ಹೊರಗಿನಿಂದ ಚೆನ್ನಾಗಿ ಕಾಣಬೇಕು ಎಂದರೆ, ನೀವು ನಿಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಪ್ಪು ವರ್ತುಲ, ಕಣ್ಣುಗಳ ಕೆಳಗೆ ಚರ್ಮ ಜೋತುಬಿದ್ದಂತಾಗುವುದು, ಕಣ್ಣು ಉರಿ, ಕಣ್ಣಿನ ಊತ, ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ನಿಮಗೆ ಎದುರಾಗಬಹುದು. ಈ ಸಮಸ್ಯೆಯಿಂದ ಬಳಲುವವರು ಪ್ರತಿನಿತ್ಯ ಹಲವು ಪರಿಹಾರಗಳಿಗಾಗಿ ತಡಕಾಡುತ್ತಾರೆ. ಮಾಲಿನ್ಯ, ಧೂಳು ಮತ್ತು ಕೊಳೆಯಿಂದ ನಿಮ್ಮ ಕಣ್ಣುಗಳಿಗೆ ಸಾಕಷ್ಟು ತೊಂದರೆಯಾಗುತ್ತೆ, ಮೇಕಪ್ ಮತ್ತು ಮೇಕಪ್ ರಿಮೂವರ್ ಗಳನ್ನು ಬಳಕೆ ಮಾಡುವುದರಿಂದಲೂ ಕೂಡ ನಿಮ್ಮ ಕಣ್ಣಿನ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗುತ್ತೆ. ಕೆಲವರಿಗೆ ಹಲವಾರು ಕಾರಣಗಳಿಂದಾಗಿ ಕಪ್ಪು ವರ್ತುಲ ಕಾಣಿಸಿಕೊಂಡಿರುತ್ತೆ. ಇಂತಹ ಸಮಸ್ಯೆಗಳು ನಿಮ್ಮ ಕಣ್ಣುಗಳನ್ನು ನಿಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುವಂತೆ ಮಾಡಿಬಿಡುತ್ತೆ.
ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಲು ಬೇಗನೆ ಗ್ರಹಿಕೆಗೆ ಒಳಪಡುವ ನಮ್ಮ ದೇಹದ ಅಂಗವೆಂದರೆ ಅದು ಕಣ್ಣುಗಳು. ಹಾಗಿರುವಾಗ ನಾವು ಅವುಗಳಿಗೆ ಯಾವಾಗಲೂ ತೊಂದರೆ ಕೊಡುವುದು ಸರಿಯಲ್ಲ. ಸ್ವಲ್ಪ ಮಟ್ಟಿನ ಕಾಳಜಿಯನ್ನಾದರೂ ನಮ್ಮ ಕಣ್ಣುಗಳ ಬಗ್ಗೆ ನಾವು ತೆಗೆದುಕೊಳ್ಳಲೇಬೇಕು. ಕಣ್ಣುಗಳಲ್ಲಿ ಬಳಲಿಕೆ, ಕಣ್ಣುಗಳ ಕೆಳಭಾಗದಲ್ಲಿ ಚರ್ಮ ಜೋತುಬಿದ್ದಂತಾಗಿರುವುದು, ಹೀಗೆ ಕಣ್ಣಿನ ಯಾವುದಾದರೂ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಕೂಡಲೇ ಅದನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಇಲ್ಲಿ ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮವನ್ನು ಕಾಂತಿಯುತಗೊಳಿಸಿಕೊಳ್ಳಲು ಮತ್ತು ಅವುಗಳ ರಕ್ಷಣೆಗೆ ಸಹಕಾರಿಯಾಗುವಂತ 15 ಸಲಹೆಗಳನ್ನು ನೀಡಲಾಗಿದೆ.
ಸೌತೆಕಾಯಿ ಕಣ್ಣಿಗೆ ತಂಪು ನೀಡುತ್ತೆ ಮತ್ತು ಆಲೂಗಡ್ಡೆ ರಸ ನಿಮ್ಮ ಕಣ್ಣುಗಳ ಸುತ್ತಲಿನ ಕಪ್ಪು ವರ್ತುಲವನ್ನು ನಿವಾರಿಸುತ್ತೆ. ಇದನ್ನು ಬಳಸಿದ ನಂತರ ನಿಮ್ಮಕಣ್ಣಿನ ಸುತ್ತದ ತೇವಾಂಶ ಕಾಪಾಡಲು ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ ಸಹಕಾರಿ. ಸಣ್ಣಸಣ್ಣ ಗೆರೆಗಳಾಗುವುದನ್ನು ಇದು ತಪ್ಪಿಸುತ್ತೆ. ಜೇನುತುಪ್ಪವು ನಿಮ್ಮ ಕಣ್ಣಿನ ಸುತ್ತದ ಚರ್ಮವನ್ನು ಬಿಳಿಗೊಳಿಸುತ್ತೆ. ಮೊಟ್ಟೆಯ ಬಿಳಿಭಾಗವು ಹಲವು ಬ್ಯೂಟಿ ಲಾಭಗಳಿಂದಾಗಿ ಎಲ್ಲರಿಗೂ ತಿಳಿದಿರುವ ವಸ್ತುವೇ ಆಗಿದೆ. ಇದನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಸುತ್ತಲಿನ ಚರ್ಮ ದೃಢವಾಗುತ್ತೆ ಮತ್ತು ಗೆರೆಗಳು ಬೀಳುವುದು ನಿಯಂತ್ರಣಕ್ಕೆ ಬರುತ್ತೆ. ಟೋಮೆಟೋದಲ್ಲಿ ಆಲಿಯಿಕ್ ಆಸಿಡ್ ಇರುತ್ತೆ. ಇದು ನಿಮ್ಮ ಕಪ್ಪು ವರ್ತುಲವನ್ನು ಕಡಿಮೆ ಮಾಡುತ್ತೆ. ಕಣ್ಣಿನ ಸುತ್ತಲಿನ ಚರ್ಮದ ಕಾಂತಿಗೆ ಅರಿಶಿನ ಸಹಕಾರಿಯಾಗಿದೆ. ನಿಮ್ಮ ಕಣ್ಣಿನ ಸುತ್ತ ಇರುವ ಸೂಕ್ಷ್ಮ ಚರ್ಮವನ್ನು ತಿಳಿಗೊಳಿಸಿ, ಸುಂದರವಾಗಿಸಲು ಈ ವಿಟಮಿನ್ ಇ ನೆರವಾಗಲಿದೆ. ಕೆಟ್ಟ ಕೆಮಿಕಲ್ ಗಳಿಂದ ಆಗಿರುವ ಹಾನಿಯನ್ನು ಅಥವಾ ಕಣ್ಣು ಉಜ್ಜಿಕೊಂಡಿರುವುದರಿಂದಾ ಆಗಿರುವ ಹಾನಿಯನ್ನು ತಪ್ಪಿಸಲು ಇದು ನಿಮಗೆ ನೆರವಾಗುತ್ತದೆ.