ಮನೆಯಂಗಳದಲ್ಲಿ ಸುಲಭವಾಗಿ ಸಿಗುವ ಗಿಡಮೂಲಿಕೆಗಳಲ್ಲಿ ಅಮೃತಬಳ್ಳಿಯ ಕೂಡ ಒಂದು. ಅಮೃತಬಳ್ಳಿ ಯು ಒಂದು ಕೂಡ ಒಂದು ಔಷಧೀಯ ಸಸ್ಯವಾಗಿದೆ. ಅಮೃತಕ್ಕೆ ಸಮಾನವಾದದ್ದು. ಅಮೃತಬಳ್ಳಿ. ನಾನಾ ಕಾಯಿಲೆಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿಯೇ ಇಂದಿನ ಹಿರಿಯರು ಇದಕ್ಕೆ ಅಮೃತಬಳ್ಳಿ ಎಂದು ಹೆಸರು ಇಟ್ಟಿದ್ದಾರೆ. ಬನ್ನಿ ಹಾಗಾದರೆ ಅಮೃತಬಳ್ಳಿ ಯಿಂದ ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ ಎಂದು ತಿಳಿದುಕೊಳ್ಳೋಣ.

ಸಕ್ಕರೆ ಕಾಯಿಲೆ ಇರುವವರು ಅಮೃತಬಳ್ಳಿಯನ್ನು ನಿಯಮಿತವಾಗಿ ಎಲೆಗಳನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಮತ್ತು ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದರೆ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಅಮೃತಬಳ್ಳಿ ಇಂದ ತಯಾರಿಸಿದ ಜ್ಯೂಸ್ ಸೇವನೆ ಮಾಡುವುದರಿಂದ ಬುದ್ಧಿ ಶಕ್ತಿ ಚುರುಕು ಆಗುವುದರ ಜೊತೆಗೆ ನೆನಪಿನ ಶಕ್ತಿ ಕೂಡ ಹೆಚ್ಚಾಗುತ್ತದೆ. ಹಾಗೂ ಮಾನಸಿಕ ಒತ್ತಡವು ಸಹ ಕಡಿಮೆ ಮಾಡುತ್ತದೆ.

ಸಾಕಷ್ಟು ಮಂದಿ ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಅಂತವರು ಅಮೃತಬಳ್ಳಿಯನ್ನು ಆಗಾಗ್ಗೆ ಸೇವನೆ ಮಾಡಬಹುದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಕರುಳಿಗೆ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅಮೃತ ಬಳ್ಳಿ ತುಂಬಾ ಪ್ರಯೋಜನಕಾರಿಯಾಗಿದೆ.

ಇನ್ನು ಪಿತ್ತ ಹೆಚ್ಚಾಗಿ ದೇಹದಲ್ಲಿ ಉರಿ ಇದ್ದರೆ ಅಮೃತಬಳ್ಳಿ ಜ್ಯೂಸ್ಗೆ ಜೀರಿಗೆ ಸೇರಿಸಿ ಸೇವನೆ ಮಾಡುವುದರಿಂದ ಇತ್ತ ನಮನ ವಾಗುತ್ತದೆ. ಮತ್ತು ದೇಹದಲ್ಲಿ ಬೇರೆ ಬೇರೆ ರೀತಿಯಾಗಿ ನೋವಿದ್ದರೆ ಅಮೃತಬಳ್ಳಿ ಎಲೆಗಳ ರಸಕ್ಕೆ ಹಸುವಿನ ತುಪ್ಪ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ. ಮತ್ತು ಈ ಬಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದಾಗಿ ನಮ್ಮ ಕಣ್ಣಿನ ಸ್ಪಷ್ಟತೆ ಹೆಚ್ಚಿಸುವುದಲ್ಲದೆ.

ಕನ್ನಡಕವಿಲ್ಲದೆ ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಹಾಗೂ ಮುಖದ ಮೇಲೆ ಇರುವ ಕಲೆಗಳು ಗುಳ್ಳೆ ಗಳನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಇನ್ನು ವಾಂತಿ ಯಾಗುತ್ತಿದ್ದಾರೆ ಹತ್ತರಿಂದ ಇಪ್ಪತ್ತು ಗ್ರಾಮ್ ಅಮೃತಬಳ್ಳಿ ಕಷಾಯದ ಜೊತೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದ ವಾಂತಿ ಕಡಿಮೆಯಾಗುತ್ತದೆ. ಮತ್ತೆ ಎಲ್ಲಾ ಬಗೆಯ ಜ್ವರಗಳಲ್ಲಿ ಯೂ ಅಮೃತಬಳ್ಳಿಯ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.

ಮತ್ತು ಈ ಬಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಅಮೃತಬಳ್ಳಿಯ ಕಾಂಡ ರಸದೊಂದಿಗೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಮುಂಜಾನೆ ಮತ್ತು ಸಂಜೆ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಅಂಶ ಹೆಚ್ಚಾಗುತ್ತದೆ. ಅಮೃತ ಬಳ್ಳಿಯು ಅಪಾಯಕಾರಿ ಜ್ವರಗಳಾದ ಡೆಂಗ್ಯೂ, ಹಂದಿ ಜ್ವರ, ಮಲೇರಿಯಾದಂತಹ ಹಲವಾರು ಮಾರಣಾಂತಿಕ ಪರಿಸ್ಥಿತಿಗಳ ಚಿಹ್ನೆ ಮತ್ತು ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *