WhatsApp Group Join Now

ಅರಿಶಿನ ಹಾಲು ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅದರ ಬಣ್ಣ ನೋಡಿ ಮಾತ್ರವಲ್ಲ, ಪ್ರಯೋಜನಗಳನ್ನು ನೋಡಿ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಇಲ್ಲಿವೆ ನೋಡಿ. ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಎಲ್ಲಾ ಕಲ್ಮಶಗಳಿಂದ ರಕ್ತನಾಳಗಳು ಮತ್ತು ದುಗ್ಧರಸ ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ.

ಅರಿಶಿನ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಹುದು. ಅರಿಶಿನದಲ್ಲಿರುವ ಕರ್ಕ್ಯುಮಿನ್ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.ಅರಿಶಿನದ ಹಾಲು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಹುಣ್ಣು ಮತ್ತು ಅತಿಸಾರವನ್ನು ತಡೆಯುತ್ತದೆ. ಹೊಟ್ಟೆಯುಬ್ಬರ ಎದೆಯುರಿ ಇತರ ಜಠರಗರುಳಿನ ಸೋಂಕುಗಳಿದ್ದರೆ ಪ್ರತಿದಿನ ಅರಿಶಿನವನ್ನು ಒಂದು ಕಪ್ ಹಾಲಿಗೆ ಸೇರಿಸಿ ಕುಡಿಯಿರಿ.ಅರಿಶಿನದ ಹಾಲು ಕುಡಿಯುತ್ತಿದ್ದರೆ ಮುಟ್ಟಿನ ನೋವು ಶಮನಗೊಂಡು, ಋತುಚಕ್ರ ಸಮಯಕ್ಕೆ ಸರಿಯಾಗಿ ಆಗುತ್ತದೆ. ಜೊತೆಗೆ, ಲ್ಯುಕೋರಿಯಾ, ಎಂಡೊಮೆಟ್ರಿಯೊಸಿಸ್, ಫೈಬ್ರಾಯ್ಡ್ಸ್ ಮತ್ತು ಹಾರ್ಮೋನುಗಳಲ್ಲಿ ಅಸಮತೋಲನ ಹೊಂದಿರುವ ಮಹಿಳೆಯರಿಗೂ ಅರಿಶಿನ ಹಾಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಅರಿಶಿನ ಹಾಲು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವುದರಿಂದ ಕೆಮ್ಮು ಮತ್ತು ಶೀತವನ್ನು ಹೋಗಲಾಡಿಸುತ್ತದೆ. ಗಂಟಲು ನೋಯುತ್ತಿದ್ದರೆ ಅರಿಶಿನ ಹಾಲನ್ನು ಕುಡಿಯಿರಿ.ಅರಿಶಿನದ ಹಾಲು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅಸ್ತಮಾ, ಬ್ರಾಂಕೈಟಿಸ್‌ಗೆ ಪರಿಣಾಮಕಾರಿ ಪರಿಹಾರವಾಗಿದೆ. ಸೈನಸ್ ಮತ್ತು ಶ್ವಾಸಕೋಶದ ಸಮಸ್ಯೆಯಿದ್ದರೂ ಪರಿಹಾರ ನೀಡುತ್ತದೆ.ಹೌದು, ಅರಿಶಿನ ಹಾಲು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ! ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ನಿದ್ರೆ ಸರಿಯಾಗಿ ಬರದಿದ್ದರೆ ಅರಿಶಿನ ಹಾಲು ಕುಡಿಯಿರಿ. ಮಲಗುವ ಮೊದಲು ಅರಿಶಿನ ಹಾಲು ಕುಡಿದರೆ ವಿಶ್ರಾಂತಿ ಸಿಗುತ್ತದೆ. ಮನಸ್ಸು ಶಾಂತಗೊಂಡು ನಿದ್ರೆ ಬರುತ್ತದೆ.

WhatsApp Group Join Now

Leave a Reply

Your email address will not be published. Required fields are marked *