WhatsApp Group Join Now

ಹೌದು ಜಾಯಿಕಾಯಿಯನ್ನು ಹಿಂದಿನ ಕಾಲದಿಂದಲೂ ಭಾರತೀಯರು ಸಾಮಾನ್ಯವಾಗಿ ಬಳಸುವ ಒಂದು ಮಸಾಲ ವಸ್ತು. ಅಡಕೆಯಂತೆ ಕಾಣುವ, ಸುವಾಸನಾಭರಿತ ಈ ಕಾಯಿಯನ್ನು ಅಡುಗೆಗಷ್ಟೇ ಅಲ್ಲದೆ ಆಯುರ್ವೇದದಲ್ಲೂ ಕೂಡ ಬಳಸುತ್ತಾರೆ. ಜಾಯಿಕಾಯಿಯಲ್ಲಿ ಔಷಧೀಯ ಗುಣಗಳಿರುವುದು ವೈಜ್ಞಾನಿಕ ಸಂಶೋಧನೆಗಳಲ್ಲೂ ಕೂಡ ದೃಢಪಟ್ಟಿವೆ.

ಆಂಟಿ ಆಕ್ಸಿಡೆಂಟ್ಸ್‌ಗಳ ಪ್ರಮಾಣ ಹೆಚ್ಚಿರುವುದರಿಂದ ಜಾಯಿಕಾಯಿಯು, ನರಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. ಪಿತ್ಥ, ವಾಕರಿಕೆ, ಹೊಟ್ಟೆನೋವು ಕಾಡಿದಾಗ ಜಾಯಿಕಾಯಿಯ ಕಷಾಯ ಕುಡಿಯುವುದರಿಂದ ಹುಟ್ಟೆನೋವು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ನಿಮಗೆ ಹಸಿವಾಗಿಲ್ಲ ಎಂದರೆ ಇದನ್ನು ಸೇವಿಸಿಬಹುದು ಯಾಕೆಂದರೆ ಇದಕ್ಕೆ ಹಸಿವು ಹೆಚ್ಚಿಸುವ ಗುಣವೂ ಇದೆ.

ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿರುವ ಈ ಜಾಯಿಕಾಯಿಯು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಜಾಯಿಕಾಯಿಯಲ್ಲಿ ಬಿ-ಕಾಂಪ್ಲೆಕ್ಸ್‌, ವಿಟಮಿನ್‌ ಸಿ, ಫಾಲಿಕ್‌ ಆಸಿಡ್ ನಂತಹ ಅಂಶಗಳು ಹೇರಳವಾಗಿವೆ. ಜಾಯಿಕಾಯಿಯನ್ನು ತೇಯ್ದು, ಹಚ್ಚಿದರೆ ಕಣ್ಣಿನ ಸುತ್ತಲಿನ ಕಪ್ಪು ಕಲೆಯು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ಔಷಧಗಳಲ್ಲಿ ಜಾಯಿಕಾಯಿಯನ್ನು ಬಳಸುತ್ತಾರೆ. ಹಾಗು ಜಾಯಿಕಾಯಿಯ ಪುಡಿಯನ್ನು ಮೈಗೆ ಉಜ್ಜಿ ಸ್ನಾನ ಮಾಡುವುದರಿಂದ, ಕಜ್ಜಿ, ತುರಿಕೆ, ಮೊಡವೆಯಂತಹ ಸಮಸ್ಯೆಗಳು ಹಾಗು ಚರ್ಮರೋಗಗಳು ಗುಣವಾಗುತ್ತವೆ.

WhatsApp Group Join Now

Leave a Reply

Your email address will not be published. Required fields are marked *