ನಮಸ್ಕಾರ ನಮ್ಮ ಪ್ರಿಯಾ ಓದುಗರೇ, ಅಸ್ತಮಾ ರೋಗಿಗಳಲ್ಲಿ ಶೇಕಡಾ ೭೫ ಕ್ಕೊ ಹೆಚ್ಚು ರೋಗಿಗಳು ತಮ್ಮ ಪರಿಸ್ಥಿತಿ ರಾತ್ರಿಯ ಹೊತ್ತು ಉಲ್ಬಣಗೊಳ್ಳುವುದಾಗಿ ವರದಿ ಮಾಡಿದ್ದಾರೆ. ಈ ಬಗ್ಗೆ ತಜ್ನರು ಏನು ಹೇಳುತ್ತಾರೆ? ಶ್ವಾಸಕೋಶಗಳಿಗೆ ಮತ್ತು ಉಸಿರಿಗೆ ಸಂಬಂಧಿಸಿದ ಕಾಯಿಲೆಯಾದ ಅಸ್ತಮಾ ರಾತ್ರಿಯ ಹೊತ್ತು ಉಲ್ಬಣಗೊಳ್ಳಲು ವುದನ್ನು ಶೇಕಡಾ ೭೫ ಕ್ಕೂ ಹೆಚ್ಚು ರೋಗಿಗಳು ವರದಿ ಮಾಡಿರುವುದು ಈ ಬಗ್ಗೆ ಹೆಚ್ಚಿನ ಸಂಶೋದನೆ ನಡೆಸಲು ಪ್ರೇರಣೆ ನೀಡಿದೆ. ಈ ಸ್ಥಿತಿಗೆ ವಾತಾವರಣದ ಪರಿಸ್ಥಿತಿ, ವ್ಯಾಯಾಮ, ಹವೆಯ ತಾಪಮಾನ, ನಿದ್ರಿಸುವ ಭಂಗಿ, ನಿದ್ರಿಸುವ ಸ್ಥಳದ ವಾತಾವರಣ ಮೊದಲಾದವು ಅಸ್ತಮಾ ಸ್ಥಿತಿಯನ್ನು ಉಲ್ಬಣಿಸಲು ಕಾರಣವಾಗಿವೆ ಎಂದು ಮೇಲ್ನೋಟಕ್ಕೆ ಕಂಡಬರುತ್ತಿದೆ. ನೂರಾರು ವರ್ಷಗಳಿಂದ ರೋಗಿಗಳು ಈ ತೊಂದರೆಯನ್ನು ವರದಿ ಮಾಡಿದ್ದರೂ, ಇದುವರೆಗೆ ತಿಳಿದಂತೆ ಈ ಕಾರಣಗಳಿಗೂ ಮೀರಿ ಸರ್ಕಾಡಿಯನ್ ವ್ಯವಸ್ಥೆ ಅಥವಾ ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಾವು ನಿರ್ವಹಿಸುವ ಚಟುವಟಿಕೆಗಳು ಇದರ ಮೇಲೆ ಪ್ರಭಾವ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ.
ದೇಹದ ಸಾರ್ಕಾಡಿಯನ್ ವ್ಯವಸ್ಥೆ- ಸರ್ಕಾಡಿಯನ್ ವ್ಯವಸ್ಥೆಯಲ್ಲಿ ಮೆದುಳೆ ಕೇಂದ್ರವಾಗಿದೆ ಮತ್ತು ದೇಹದ ಎಲ್ಲಾ ಕಾರ್ಯಗಳನ್ನು ಜೈವಿಕ ಗಡಿಯಾರಕ್ಕೆ ಅನುಸಾರವಾಗಿ ನಿರ್ವಹಿಸುವಂತೆ ಮಾಡುತ್ತದೆ. ಇವೇ ನಮ್ಮ ದಿನಚರಿಯಾಗಿಬಿಡುತ್ತದೆ. ಬ್ರಿಘಮ್ ಕೇಂದ್ರದಲ್ಲಿ ನಿದ್ರೆ ಮತ್ತು ಅಸ್ವಸ್ಥತೆಗಳ ವಿಭಾಗದಲ್ಲಿ ವೈದ್ಯಕೀಯ ಕ್ರೋನೋಬಯಾಲೇಜಿ ಕಾರ್ಯಕ್ರಮದ ನಿರ್ದೇಶಕರಾಗಿರುವ ಪ್ರಂಕ್ ಏ ಜೆ ಎಲ್ ಸ್ಕೀರ್ ರವರು ಹೀಗೆ ವಿವರಿಸುತ್ತಾರೆ. “ಸಾರ್ಕಾಡಿಯನ್ ವ್ಯವಸ್ಥೆ ನಮ್ಮ ನಡವಳಿಕೆ, ನಿದ್ದೆ ಮತ್ತು ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತದ. ಎಂಬ ಬಗ್ಗೆ ನಡೆಸಲಾಗಿರುವ ಪ್ರಥಮ ಅಧ್ಯಯನವಾಗಿದೆ”.
“ಗಂಭೀರ ಅಸ್ತಮಾ ತೊಂದರೆ ಇರುವ ವ್ಯಕ್ತಿಗಳಿಗೆ ರಾತ್ರಿಯಲ್ಲಿ ಸಿರ್ಕಾಡಿಯನ್ ಪ್ರೇರಿತವಾಗಿ ಶ್ವಾಸಕೋಶದ ಕಾರ್ಯದಲ್ಲಿ ಇಳಿಕೆ ಕಂಡುಬಂದಿರುವುದನ್ನೂ ನಾವು ಗಮನಿಸಿದ್ದೇವೆ. ಪರಿಣಾಮವಾಗಿ ನಿದ್ದೆಯ ಸಹಿತ ಇತರ ನಡವಳಿಕೆಗಳ ಮೇಲೆ ಪ್ರಭಾವ ಬೀರಿರುವುದಾನ್ನು ಗಮನಿಸಲಾಗಿದೆ” ಎಂದು ಒರೆಗಾನ್ ಇನ್ಸ್ಟಿಟ್ಯೂಟ್ ಆಫ್ ಅಕ್ಯೂಪೇಶ್ನಲ್ ಹೆಲ್ತ್ ಸೈನ್ಸಸ್ ನಲ್ಲಿ ಪ್ರೊಫೆಸರ್ ಮತ್ತು ನಿರ್ದೇಶಕರಾಗಿರುವ ಸ್ಟೀವನ್ ಏ.ಶಿಯಾರವರು ವಿವರಿಸುತ್ತಾರೆ. ಈ ಅಧ್ಯಯನದ ವರದಿಗಳನ್ನು ನ್ಯಾಶ್ನಲ್ ಅಕಾಡೆಮಿ ಆಫ್ ಸೈನ್ಸಸ್ ವಿಭಾಗದ ಪ್ರಕಟಣೆಗಳಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.