ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮಾನಸಿಕ ದೈಹಿಕ ಆರೋಗ್ಯಕ್ಕೆ ನಿದ್ದೆ ಹೇಗೆ ಮುಖ್ಯ ಆಗುತ್ತೆ ಎನ್ನುವುದನ್ನು ತಿಳಿದುಕೊಳ್ಳೋಣ. ನಿದ್ದೆ, ಹೌದು ಮಕ್ಕಳಿಂದ ವೃದ್ಧರವರೆಗೆ ಅತ್ಯಂತ ಪ್ರಿಯವಾದ ವಿಷಯ. ಇತ್ತೀಚೆಗೆ ತಂತ್ರಜ್ಞಾನ ಬೆಳೆದ ಹಾಗೆ ಜನರಿಗೆ ನಿದ್ದೆ ಕೂಡ ಕಡಿಮೆ ಆಗ್ತಾ ಇದೆ. ನಿದ್ರಾ ಹೀನತೆ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ ಮತ್ತು ಎಚ್ಚರವಹಿಸಬೇ ಕಾದ ವಿಷಯ. ನಿದ್ರಾ ಹೀನತೆಯಿಂದ ಆಯಾಸ, ಆತಂಕ ಗಳಂಥ ಸಮಸ್ಯೆಗಳು ಗಂಭೀರ ಕಾರಣದಿಂದ ನಮಗೆ ಕಾಡುತ್ತವೆ. ಹಾಗೆ ದೈಹಿಕ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ. ಅತಿಯಾದ ಸಿಡುಕುತನ ವೂ ನಿದ್ರಾ ಹೀನತೆಗೆ ಕಾರಣ ಆಗುತ್ತೆ ಎನ್ನುವುದು ತಜ್ಞರ ಅಭಿಪ್ರಾಯ ಆಗಿದೆ.
ಇನ್ನೂ ನಿದ್ರಾ ಹೀನತೆ ಯ ಲಕ್ಷಣಗಳ ಬಗ್ಗೆ ಹೇಳುವುದಾದರೆ, ಅತಿಯಾದ ಆಯಾಸ, ಆತಂಕ ಸಿದುಕೂತನ, ಆಲಸ್ಯಗಳು ನಮ್ಮನ್ನು ಬಾದಿಸ ತೊಡಗುತ್ತೆ. ಹಾಗೆಯೇ ಮರೆವು, ಯಾವುದರಲ್ಲಿಯೂ ಗಮನ ನೀಡಲು ಸಾಧ್ಯ ಆಗದೆ ಇರುವುದು, ಕಿರಿ ಕಿರಿ ಮೊದಲಾದುವುಗಳನ್ನು ಅನುಭವಿಸಬೇಕಾಗುತ್ತದೆ. ಹಾಗೆಯೇ ಹೃದಯ ಸಂಬಂಧಿ ಸಮಸ್ಯೆಗಳಿಗೂ ನಿದ್ರಾ ಹೀನತೆ ಕಾರಣ ಆಗುತ್ತೆ ಎನ್ನುವುದು ಗಂಭೀರ ವಿಷಯ. ಜೊತೆಗೆ ವೃದ್ದಾಪ್ಯ ಸಹ ಬೇಗನೆ ಆವರಿಸುತ್ತದೆ ಎನ್ನುವುದು ಸತ್ಯ. ಇನ್ನೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅತಿಯಾದ ಮರೆವು, ಯಾವುದರಲ್ಲೂ ಗಮನ ಹರಿಸುವು ದಕ್ಕೆ ಸಾಧ್ಯ ಆಗದೇ ಇರುವುದು, ಕೋಪ, ಆಲಸ್ಯ ಮೊದಲಾದ ಸಮಸ್ಯೆಗಳನ್ನು ಸಹ ನಾವು ಎದುರಿಸುವ ಪರಿಸ್ಥಿತಿ ನಿರ್ಮಾಣ ಆಗಬಹುದು. ಇನ್ನೂ ದಿನಕ್ಕೆ ಎಷ್ಟು ಗಂಟೆಗಳ ನಿದ್ದೆಯನ್ನು ಮನುಷ್ಯನ ದೇಹ ಬಯಸುತ್ತದೆ ಎಂದು ಹೇಳುವುದಾದರೆ ನವಜಾತ ಶಿಶುಗಳಿಗೆ ದಿನಕ್ಕೆ 14 ರಿಂದ 17 ಗಂಟೆಗಳ ನಿದ್ದೆ.
ಶಿಶುಗಳಿಗೆ 12-15 ಗಂಟೆಗಳ ನಿದ್ದೆ, ಮಕ್ಕಳಿಗೆ 9-11 ಗಂಟೆಗಳ ನಿದ್ದೆಯ ಅಗತ್ಯ ಇದೆ. ಇನ್ನೂ ಯುವ ಜನರಿಗೆ 7-8 ಗಂಟೆಗಳ ನಿದ್ದೆಯ ಅವಶ್ಯಕತೆ ಇದೆ. ನಿದ್ದೆ ಮಾಡೋ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡುವುದು, ಲ್ಯಾಪ್ ಟಾಪ್ ಬಳಸುವುದು ಮೊದಲಾದವುಗಳನ್ನು ಚಟವಾಗಿ ಬೆಳೆಸಿಕೊಂಡಿ ದ್ರಿ ಅಂದಾದರೆ ಅದು ಮಾನಸಿಕ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವುದು ಸತ್ಯ. ಹೀಗಾಗಿ ದಿನನಿತ್ಯ ಚೆನ್ನಾಗಿ ನಿದ್ದೆ ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಗ್ಗೆ ಗಮನ ಕೊಡಿ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ದೇಹಕ್ಕೆ ನಮ್ಮ ಆರೋಗ್ಯಕ್ಕೆ ನಿದ್ದೆಯ ಅವಶ್ಯಕತೆ ಎಷ್ಟಿದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.