ಉತ್ತಮ ಆರೋಗ್ಯ ಹೊಂದಲು ನೀರು ಕುಡಿಯುವುದು ಬಹಳ ಮುಖ್ಯ. ದಿನವು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ ಅಥವಾ ಇತರೆ ಹಣ್ಣಿನ ರಸಗಳನ್ನು ಹೆಚ್ಚಾಗಿ ಸೇವಿಸಿ. ಮೂತ್ರವಿಸರ್ಜನೆ ಹೆಚ್ಚು ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿನ್ ಹೊರ ಹೋಗುತ್ತದೆ. ಇದರಿಂದ ಮೂತ್ರಪಿಂಡದಲ್ಲಿರುವ ಸೋಡಿಯಂ ಮತ್ತು ಯೂರಿಯಾ ಅಂಶಗಳು ಕಡಿಮೆಯಾಗುತ್ತದೆ. ಮೂತ್ರಪಿಂಡವು ದೇಹದ ಅತ್ಯಂತ ಸೂಕ್ಷ್ಮವಾದ ಅಂಗ. ಹೆಚ್ಚಿನವರು ಈ ಅಂಗದ ಬಗ್ಗೆ ಹೆಚ್ಚು ಕಾಳಜಿವಸುವುದಿಲ್ಲ. ಆದರೆ ನಮ್ಮನ್ನು ಆರೋಗ್ಯವಂತರಾಗಿಡುವ ಅನೇಕ ಕಾರ್ಯಗಳನ್ನು ಕಿಡ್ನಿ ಮಾಡುತ್ತದೆ. ಇದರ ಆರೈಕೆಗೆ ಒತ್ತು ನೀಡದಿದ್ದರೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ಜೀವನಶೈಲಿಯಿಂದ ಕಂಡು ಬರುವ ಮಧುಮೇಹ, ಸ್ಥೂಲಕಾಯತೆ ಮತ್ತು ರಕ್ತದೊತ್ತಡದ ಸಮಸ್ಯೆಗಳಿಂದ ಮೂತ್ರಪಿಂಡದ ಕಾಯಿಲೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಜೀವನ ಶೈಲಿ, ಆಹಾರ ಕ್ರಮಗಳು ಇಂತಹ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಮೂತ್ರಪಿಂಡ ಅಥವಾ ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳು ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ನಿಮ್ಮ ಆಹಾರ ಕ್ರಮದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮೂತ್ರಪಿಂಡ ಅಥವಾ ಕಿಡ್ನಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಆದರೆ ಈಗಾಗಲೇ ಮೂತ್ರಪಿಂಡದ ಸಮಸ್ಯೆಗೆ ಒಳಗಾದವರು ತಮ್ಮ ಆಹಾರದಲ್ಲಿ ಪೊಟಾಷಿಯಂ ಅಂಶ ಕಡಿಮೆ ಇರುವ ಆಹಾರಗಳನ್ನು ಸೇವಿಸುವುದು ಉತ್ತಮ. ಇಂತಹ ಸಮಯದಲ್ಲಿ ಸೇಬು, ಪೇರಳೆ, ಪಪ್ಪಾಯಿ ಮುಂತಾದ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹೈಪರ್ಟೆನ್ಶನ್ ಮತ್ತು ಮಧುಮೇಹ ಸಮಸ್ಯೆ ಇರುವವರಲ್ಲಿ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಕುಟುಂಬದಲ್ಲಿ ಅನುವಂಶಿಕವಾಗಿ ರಕ್ತದೊತ್ತಡ ಅಥವಾ ಮಧುಮೇಹದ ಸಮಸ್ಯೆಯಿದ್ದರೆ, ನೀವೂ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ. ಇದರಿಂದ ಕಿಡ್ನಿಯ ಬಗ್ಗೆ ನೀವು ಹೆಚ್ಚು ಕಾಳಜಿವಹಿಸಬಹುದು.
ಪ್ರತಿದಿನ ವ್ಯಾಯಾಮ ಮಾಡುವುದರಿಂದ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಸ್ಥೂಲಕಾಯತೆಯ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಬೊಜ್ಜಿನ ಸಮಸ್ಯೆ ಹೆಚ್ಚಾಗುವುದರಿಂದ ಮಧುಮೇಹ ಮತ್ತು ರಕ್ತದೊತ್ತಡದ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದು ಮೂತ್ರಪಿಂಡದ ಸಮಸ್ಯೆಯನ್ನು ತಂದೊಡ್ಡಬಹುದು. ಹೀಗಾಗಿ ಹೆಚ್ಚು ವ್ಯಾಯಾಮ ಮಾಡುವುದರಿಂದ ಕಿಡ್ನಿಯ ಆರೋಗ್ಯವು ಹೆಚ್ಚಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮಧುವೇಹಿ ರೋಗಿಗಳ ಕಿಡ್ನಿ ವೈಫಲ್ಯ ಹೊಂದಿದರೆ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಮಾತ್ರ ಪರಿಹಾರವಾಗಿದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಾ ಇರುವುದು ಆರೋಗ್ಯಕ್ಕೆ ಒಳ್ಳೆದು. ಉತ್ತಮ ಆರೋಗ್ಯ ಹೊಂದಲು ನೀರು ಕುಡಿಯುವುದು ಬಹಳ ಮುಖ್ಯ. ದಿನವು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ ಅಥವಾ ಇತರೆ ಹಣ್ಣಿನ ರಸಗಳನ್ನು ಹೆಚ್ಚಾಗಿ ಸೇವಿಸಿ. ಮೂತ್ರವಿಸರ್ಜನೆ ಹೆಚ್ಚು ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿನ್ ಹೊರ ಹೋಗುತ್ತದೆ. ಇದರಿಂದ ಮೂತ್ರಪಿಂಡದಲ್ಲಿರುವ ಸೋಡಿಯಂ ಮತ್ತು ಯೂರಿಯಾ ಅಂಶಗಳು ಕಡಿಮೆಯಾಗುತ್ತದೆ.