WhatsApp Group Join Now

ಸೌಂದರ್ಯಕ್ಕೆ ಅಷ್ಟೇ ಅಲ್ಲ ದೈಹಿಕ ಸಮಸ್ಯೆಗೂ ಆಲೂಗಡ್ಡೆ ಸಹಕಾರಿ, ಯಾವೆಲ್ಲ ಉಪಯೋಗಗಳನ್ನು ಆಲೂಗಡ್ಡೆ ಹೊಂದಿದೆ ಅನ್ನೋದನ್ನ ತಿಳಿಸುತ್ತೇವೆ ನೋಡಿ. ಸನ್ ಟ್ಯಾನ್ ಸಮಸ್ಯೆ ಇದ್ರೆ ಆಲೂಗಡ್ಡೆಯ ಜ್ಯುಸ್ ಮಾಡಿ, ಆ ಜ್ಯುಸ್ ಅನ್ನು ಟ್ಯಾನ್ ಆಗಿರುವ ಜಾಗಕ್ಕೆ ಲೇಪಿಸುವುದರಿಂದ ಸಮಸ್ಯೆಗೆ ಪರಿಹಾರ ಕಾಣಬಹುದು.

ವಾರಕ್ಕೊಮೆಯಾದರು ಆಲೂಗಡ್ಡೆಯನ್ನು ಹೀಗೆ ಬಳಸಿ ಮುಖದ ಮೇಲಿನ ಕಪ್ಪು ಕಲೆ ನಿವಾರಿಸಿಕೊಳ್ಳುವುದರ ಜೊತೆಗೆ, ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಒಂದು ಹಸಿ ಆಲೂಗಡ್ಡೆಯನ್ನು ಪುಡಿ ಮಾಡಿ ಅದಕ್ಕೆ ಒಂದು ನಿಂಬೆಹಣ್ಣಿನ ಪೂರ್ತಿ ರಸವನ್ನು ಹಾಗು ಅರ್ಧ ಚಮಚ ಅರಿಶಿಣವನ್ನು ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿ ಅರ್ಧ ಗಂಟೆ ನಂತರ ಮುಖವನ್ನು ತೊಳೆದುಕೊಳ್ಳುವುದರಿಂದ ಮುಖದಲ್ಲಿನ ಕಪ್ಪು ಕಲೆಗಳು ಕಡಿಮೆಯಾಗು ಮುಖದ ಕಾಂತಿ ಹೆಚ್ಚುತ್ತದೆ.

ಸುಟ್ಟಗಾಯಗಳಿಗೆ ತಕ್ಷಣ ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಲೇಪಿಸಿದರೆ ಉರಿ ಕಡಿಮೆಯಾಗುತ್ತದೆ. ತಲೆನೋವು ನಿವಾರಣೆಗೆ ಹಸಿ ಆಲೂಗಡ್ಡೆಯನ್ನು ರೌಂಡ್ ಆಗಿ ಕಟ್ ಮಾಡಿ ಹಣೆಯ ಮೇಲೆ ಅಥವಾ ಕಣ್ಣುಗಳ ಮೇಲೆ 15 ನಿಮಿಷ ಇಟ್ಟುಕೊಳ್ಳುವದರಿಂದ ತಲೆನೋವು ಕಡಿಮೆಯಾಗುತ್ತದೆ.

ಮುಖದಲ್ಲಿ ಸುಕ್ಕುಗಟ್ಟಿದ ಚರ್ಮ ಇದ್ರೆ ಹಸಿ ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಮೊಸರನ್ನು ಬೆರಸಿ ಸ್ವಲ್ಪ ಹೊತ್ತು ಬಿಟ್ಟು ಆ ಮಿಶ್ರಣವನ್ನು ನೆನಸಿಡಿ, ನಂತರ ಅದನ್ನು ಮುಖಕ್ಕೆ ಲೇಪ ಮಾಡಿ ಅರ್ಧ ಗಂಟೆ ಬಿಟ್ಟು ಮುಖ ತೊಳೆದರೆ ಸುಕ್ಕು ಕ್ರಮೇಣ ನಿವಾರಣೆಯಾಗುತ್ತದೆ. ಇದನ್ನು ಇತರರಿಗೂ ತಿಳಿಸಿ ಈ ಸಮಸ್ಯೆ ಇರುವವರು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

WhatsApp Group Join Now

Leave a Reply

Your email address will not be published. Required fields are marked *