ಆಲೂಗಡ್ಡೆಯನ್ನು ಬಳಸುವಾಗ ಸಿಪ್ಪೆ ತೆಗೆದುಹಾಕದೆ ಬಳಸಬೇಕು. ಇದರಿಂದಲೂ ಪೌಷ್ಟಿಕಾಂಶ ಕಡಿಮೆ ಆಗುವುದು, ಪಲ್ಯ ಮಾಡುವಾಗ ತೊಳೆದ ಆಲೂಗಡ್ಡೆಯನ್ನು ಸಣ್ಣ ಹೋಳುಗಳಾಗಿ ಮಾಡಿ ಬೇಯಿಸಿದರೆ ಸಾಕು, ಅದಕ್ಕೆ ಕಾರಣ ಆಲೂಗಡ್ಡೆ ಸಿಪ್ಪೆಯಲ್ಲಿ ಖನಿಜಾಂಶ ಜೀವ ಸತ್ವಗಳಿರುತ್ತೇವೆ.
ಹಬೆಯಲ್ಲಿ ಆಲೂಗಡ್ಡೆಯನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬ ಒಳ್ಳೆಯದು ಮತ್ತು ಪುಟ್ಟ ಮಕ್ಕಳಿಗೆ ಹಬೆಯಲ್ಲಿ ಬೇಯಿಸಿದ ಆಲೂಗಡ್ಡೆಗೆ ರುಚಿಗೆ ತಕ್ಕಸ್ಟು ಉಪ್ಪು, ಕಾಳುಮೆಣಸಿನ ಪುಡಿ ಬೆರಸಿ, ಸೇವಿಸಲು ಕನಿಷ್ಠ ಪ್ರಮಾಣದಲ್ಲಿ ಕೊಡುವುದರಿಂದ ಬೆಳವಣಿಗೆ ಉತ್ತಮವಾಗಿರುತ್ತದೆ.
ಕೆಂಡದ ಮೇಲೆ ಸುತ್ತ ಆಲೂಗಡ್ಡೆಯನ್ನು ತಿನ್ನುವುದರಿಂದ ಮೂತ್ರ ವಿಸರ್ಜನೆ ಮಾಡುವಾಗ ಬಾಧಕ ಬರುವುದಿಲ್ಲ, ಮಲವಿಸರ್ಜನೆಯು ಸುಲಭವಾಗಿ ಆಗುತ್ತದೆ ಹಾಗು ಹಾಲುಣಿಸುವ ತಾಯಂದಿರಿಗೆ ಎದೆಹಾಲು ಜಾಸ್ತಿ ಉತ್ಪತ್ತಿಯಾಗುತ್ತದೆ.
ಹಸಿಯ ಹಾಲುಗಡ್ಡೆಯನ್ನು ಜಜ್ಜಿ ನುಣ್ಣಗೆ ಗಂಧದಂತೆ ಮಾಡಿ ಗಾಯದ ಮೇಲೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ ಹಾಗು ನಿದಾನವಾಗಿ ಗಾಯ ಮಾಯುತ್ತದೆ.
ಹಾಲುಗಡ್ಡೆಯನ್ನು ನುಣ್ಣಗೆ ಅರೆದು ನಿಂಬೆರಸದಲ್ಲಿ ದಿನವಿಡೀ ಅಚ್ಚುತ್ತಿದ್ದರೆ ಕರಪಾಣಿ, ಗಜಕರ್ಣ ಹುಣ್ಣುಗಳು ಬೇಗನೆ ವಾಸಿಯಾಗುತ್ತವೆ. ಮತ್ತೆ ಅಡುಗೆಯಲ್ಲಿ ಹೆಚ್ಚಾಗಿ ಆಲೂಗಡ್ಡೆಯನ್ನು ತರಕಾರಿಯ ರೂಪದಲ್ಲಿ ಬಳಸುತ್ತಿದ್ದರೆ ವಾತರೋಗ ಹೆಚ್ಚುವುದು. ಕೀಲುಗಳಲ್ಲಿ ನೂವು ಕಾಣುವುದು ಹಾಗು ಗ್ಯಾಸ್ರ್ಟಿಕ್ ತೊಂದರೆಗಳು ಹೆಚ್ಚಾಗುತ್ತದೆ.