ಆಲೂಗಡ್ಡೆ ವಿಭಿನ್ನ ಖಾದ್ಯ ಮಾಡಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆಲೂಗಡ್ಡೆ ಪವರ್ ಮತ್ತು ಪೊಟ್ಯಾಶಿಯಂನಲ್ಲಿ ಸಮೃದ್ಧವಾಗಿದೆ. ಆಲೂಗಡ್ಡೆಯಲ್ಲಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳು ಇವೆ. ಆಲೂಗಡ್ಡೆ ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರ ಅಚುಮೆಚ್ಚಿನ ತರಕಾರಿ ಎಂದೇ ಹೇಳಬಹುದು. ಆಲೂಗಡ್ಡೆಯಿಂದ ವಿವಿಧ ಭಕ್ಷ್ಯಗಳನ್ನು ತಯಾರು ಮಾಡಬಹುದು. ಇದರ ಒಂದೊಂದು ಭಕ್ಷ್ಯಗಳು ರುಚಿಯಾಗಿರುತ್ತದೆ. ಬಹುತೇಕರು ಆಲೂಗಡ್ಡೆ ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂದೂ, ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ ಎಂದು ಕೈ ಬಿಡುತ್ತಾರೆ.ಆಲೂಗಡ್ಡೆಯನ್ನು ಸೇವನೆ ಮಾಡುವವರು ಸಿಪ್ಪೆಯನ್ನು ಎಸೆಯುತ್ತಾರೆ. ಮುಖ್ಯವಾಗಿ ಆಲೂಗಡ್ಡೆಯ ಸಿಪ್ಪೆಯು ಉತ್ಕರ್ಷಣ ನಿರೋಧಕವನ್ನು ಹೊಂದಿದೆ. ಇದು ನಿಮ್ಮ ದೇಹಕ್ಕೆ ಹೇಗೆಲ್ಲಾ ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿಯಿರಿ. ರಕ್ತದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯ ಸೇರಿದಂತೆ ಹಲವಾರು ಪ್ರಯೋಜನಗಳು ಇವೆ. ಹಾಗಾದರೆ ಆಲೂಗಡ್ಡೆ ಸೇವನೆಯಿಂದ ಇನ್ಯಾವೆಲ್ಲ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.
ಆಲೂಗಡ್ಡೆಯ ಸಿಪ್ಪೆನಲ್ಲಿ ಸಮೃದ್ಧವಾಗಿದೆ ಇದು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಖನಿಜವಾಗಿದೆ ಸರಾಸರಿ ಗಾತ್ರದ ಆಲೂಗಡ್ಡೆಯು ಸುಮಾರು 535 ಮಿಲಿ ಗ್ರಾಂ ಪೊಟ್ಯಾಷಿಯಂ ಅನ್ನು ಹೊಂದಿರುತ್ತದೆ. ರಕ್ತದ ಹೆಚ್ಚಿನ ಮಟ್ಟದ ಪೊಟ್ಯಾಶಿಯಂ ಮೂತ್ರದ ಗಡ್ಡಗಳು ಹೆಚ್ಚು ಉಪ್ಪು ಮತ್ತು ನೀರಿನ ಹೊರ ಹಾಕುವಂತೆ ಮಾಡುತ್ತದೆ. ಇದು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಇನ್ನು ಆಲೂಗಡ್ಡೆಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಅವು ಫೈಬರ್ ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಮತ್ತು ಬಿ ಸಿಕ್ಸ್ ಅನ್ನು ಹೊಂದಿರುತ್ತದೆ. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಉತ್ತಮವಾಗಿವೆ. ತರಕಾರಿಯಲ್ಲಿರುವ ವಿಟಮಿನ್ ರಕ್ತದ ಮೇಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಪೊಟ್ಯಾಶಿಯಂ ಹೃದಯವನ್ನು ಸಹ ರಕ್ಷಿಸುತ್ತದೆ ಅಷ್ಟೇ ಅಲ್ಲದೆ ಆಲೂಗಡ್ಡೆಯಲ್ಲಿ ಆಲ್ಫಾ ಲಿಕ್ವಿಡ್ ಆಮ್ಲವಿದೆ.
ಇದು ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ ಆಲೂಗಡ್ಡೆಯಲ್ಲಿ ಇರುವ ವಿಟಮಿನ್ ಸಿ ಖಿನ್ನತೆಯ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತದೆ. ನೀವು ಮಲಗುವ ಮೊದಲು ಒಂದು ಸಣ್ಣ ಆಲೂಗಡ್ಡೆಯನ್ನು ತಿನ್ನುವುದು ನಿಮ್ಮ ದೇಹವು ನಿಮ್ಮ ಭಾವನೆಗಳು ಮತ್ತು ಮನಸ್ಥಿತಿಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.ಆಲೂಗಡ್ಡೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಯಕೃತ್ ಮತ್ತು ಕರುಳಿನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸಬಹುದು. ನೀವು ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೊಂದಿದ್ದರೆ ಆಲೂಗಡ್ಡೆಯನ್ನು ನಿಯಮಿತವಾಗಿ ಸೇವನೆ ಮಾಡಿ. ಆಲೂಗಡ್ಡೆಯು ಕರಗುವ ಫೈಬರ್ ಮತ್ತು ಕರಗದ ಫೈಬರ್ ಎಂಬ ಎರಡು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿ ನೀವು ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೊಂದುವುದಿಲ್ಲ.