ನಮಸ್ತೆ ನಮ್ಮ ಪ್ರಿಯ ಓದುಗರೇ, ಆಲೂಗೆಡ್ಡೆ ಒಂದು ರುಚಿಯಾದ ತರಕಾರಿ. ಇದರ ಸಪ್ಪೆ ರುಚಿ ಇಂದ ಯಾವ ರೀತಿಯ ಅಡುಗೆ, ಪಲ್ಯ, ರೈಸ್ ಬಾತ್ ಗಳಲ್ಲಿ ಹಾಕಿದರೂ ಒಳ್ಳೆ ರುಚಿಯನ್ನು ಕೊಡುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಅಲೋಗೆಡ್ಡೆಯದು ವಾಯು ಗುಣ . ಇದು ದೇಹ ಸೇರಿದ ಬಳಿಕ ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಅನ್ನು ಹೆಚ್ಚಿಸುತ್ತದೆ. ಹೀಗಾಗಿ ಕೆಲವರು ಇದನ್ನು ತಿನ್ನಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಇದರ ಸಿಪ್ಪೆ ಸಹಿತ ಸೇವನೆ ದೇಹಕ್ಕೆ ಒಳ್ಳೆಯದೇ ಆಗಿದೆ. ಆಲೂಗೆಡ್ಡೆ ಎಲ್ಲರೂ ಇಷ್ಟ ಪಡುವ ತರಕಾರಿ ಆಗಿದ್ದು ಇದನ್ನು ಬಳಸಿ ಅದೆಷ್ಟೋ ಬಗೆಯ ತಿಂಡಿ ತಿನಿಸುಗಳನ್ನು ಮಾಡುತ್ತಾರೆ ಲೆಕ್ಕವೇ ಇಲ್ಲ. ಆಲೂಗೆಡ್ಡೆ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುವ ಜೊತೆಗೆ ಅಮೈನೋ ಆಸಿಡ್ ಅಂಶವಿರುವುದರಿಂದ ರುಚಿಯಲ್ಲಿ ಹಿತಕರವಾದ ಮತ್ತು ಎಲ್ಲಾ ತರಹದ ತಿಂಡಿ ತಿನಿಸುಗಳಲ್ಲಿ ಉಪಯೋಗಿಸುತ್ತಾರೆ. ಈ ಆಲೂಗೆಡ್ಡೆಯನ್ನು ಮೂರು ವಿಧಗಳಾಗಿ ವಿಂಗಡಿಸಬಹುದು ಮೊದಲನೇ ಮೇಲ್ಭಾಗ ಸಿಪ್ಪೆ, ಸಿಪ್ಪೆಯ ತಳ ಭಾಗದಲ್ಲಿರುವ ತೆಳುವಾದ ಪದರ ಮೂರನೆಯದು ಒಳ ಪಿಷ್ಟ ಭಾಗ. ಮೊದಲನೆಯ ಭಾಗದಲ್ಲಿ ಖನಿಜಾಂಶಗಳು ಮತ್ತು ಜೀವಸತ್ವಗಳು ಇರುತ್ತವೆ. ಇನ್ನೂ ಏರೆಡನೆಯ ಪದರದಲ್ಲಿ ಸಸಾರಜನಕ ಮತ್ತು ವರ್ಣದ್ರವ ಇರುತ್ತದೆ. ಏನಿದು ಸಸಾರಜನಕ ಎಂದರೆ ಇದು ನಮ್ಮ ದೇಹಕ್ಕೆ ಬೇಕಾದ ಪ್ರೊಟೀನ್ ಅನ್ನು ಒದಗಿಸುತ್ತದೆ.
ಈ ವರ್ಣದ್ರವವು ನಾವು ಆಲೂಗೆಡ್ಡೆಯನ್ನು ಕತ್ತರಿಸಿದಾಗ ಗಾಳಿಯ ಸಂಪರ್ಕಕ್ಕೆ ಬಂದು ಆಲೂಗೆಡ್ಡೆಯ ಬಣ್ಣವನ್ನು ಬದಲಾಯಿಸುತ್ತವೆ. ಇನ್ನೂ ಮೂರನೆಯ ಭಾಗ ಪಿಷ್ಟ ಮತ್ತು ನೀರಿನಿಂದ ಕೂಡಿರುತ್ತದೆ. ಇನ್ನೂ ಆರೋಗ್ಯಕ್ಕೆ ಉಪಯುಕ್ತವಾಗುವ ಆಲೂಗೆಡ್ಡೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಏನೆಲ್ಲಾ ಉಪಯೋಗ ಇದೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ವಿಟಮಿನ್ ಸಿ ಈ ಸಿಪ್ಪೆಯಲ್ಲಿ ಹೆಚ್ಚಾಗಿರುವ ಕಾರಣ ಸಿ ಜೀವಸತ್ವದ ಕೊರತೆ ಇಂದ ಬಳಲುತ್ತಾ ಇದ್ದರೆ ಆಲೂಗೆಡ್ಡೆಯನ್ನು ಸಿಪ್ಪೆಯೊಂಡಿಗೆ ಸೇವನೆ ಮಾಡುವುದು ಒಳ್ಳೆಯದು. ವಿಟಮಿನ್ ಡಿ ಕಾಂಪ್ಲೆಕ್ಸ್ ಕ್ಯಾಲ್ಸಿಯಂ ಪ್ರಮಾಣ ಸಹ ಹೆಚ್ಚಾಗಿರುವುದರಿಂದ ಇದು ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಇನ್ನೂ ಫೈಬರ್ ಅಂದರೆ ನಾರಿನಂಶ ಹೆಚ್ಚಾಗಿರುವುದಿಂದ ಇದು ಮಲಬದ್ಧತೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ಹಾಗೂ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗೂ ಆಲೂಗೆಡ್ಡೆಯನ್ನು ವಿಟಮಿನ್ ಬಿ6 ಜೀವಸತ್ವವು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನೂ ಮುಖದ ಸೌಂದರ್ಯವನ್ನು ಹೆಚ್ಚಿಸಲು ಆಲೂಗೆಡ್ಡೆ ಯ ಫೆಸ್ ಪ್ಯಾಕ್ಕು ಬಳಸಬಹುದಾಗಿದೆ. ಹೌದು ಆಲೂ ಹಾಗೂ ಹಳದಿ ಫೇಸ್ ಪ್ಯಾಕ್ ನಿಂದ ನಿಮ್ಮ ತ್ವಚೆಯ ಬಣ್ಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಆಲೂಗೆಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿ ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ಈ ರೀತಿ ವಾರದಲ್ಲಿ ಒಂದು ಸಲ ಮಾಡಿ ನಿಮ್ಮ ಮುಖದಲ್ಲಿನ ಕಾಂತಿಯಲ್ಲಿನ ಬದಲಾವಣೆ ಗಮನಿಸಿ.
ಇನ್ನೂ ಆಲೂಗೆಡ್ಡೆ ಕಡಿಮೆ ರಕ್ತದೊತ್ತಡ ಸಮಸ್ಯೆ ಇಂದ ಬಳಲುತ್ತಾ ಇರುವವರಿಗೆ ಸಹಾಯ ಮಾಡುತ್ತದೆ. ಇದರಲ್ಲಿನ ಪೊಟ್ಯಾಸಿಯಂ ಅಂಶವು ಕಡಿಮೆ ರಕ್ತದೊತ್ತಡ ವ ನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಲೂಗೆಡ್ಡೆ ಯಿಂದ ಇನ್ನೂ ಸಾಕಷ್ಟು ಉಪಯೋಗ ಇದೆ ಆದರೆ ಇದು ಕೆಲವೊಬ್ಬರು ದೇಹಕ್ಕೆ ಸರಿ ಹೊಂದುವುದಿಲ್ಲ. ಹಾಗಾಗಿ ಯಾರ ದೇಹಕ್ಕೆ ಒಗ್ಗುತ್ತದೆಯೋ ಅಂತಹವರು ಸೇವನೆ ಮಾಡಿದರೆ ತಪ್ಪಿಲ್ಲ ಹಾಗೂ ಥೈರಾಯ್ಡ್ ಸಮಸ್ಯೆ ಇದ್ದವರು ಈ ತರಕಾರಿಯನ್ನು ಸೇವನೆ ಮಾಡದೆ ಇದ್ದರೆ ಒಳ್ಳೆಯದು. ಮುಖದಲ್ಲಿನ ಭಂಗು, ಕಪ್ಪು ಕಲೆಗಳ ನಿವಾರಣೆಗೆ ಆಲೂಗೆಡ್ಡೆಯನ್ನು ಬೇಯಿಸಿ ಅದರ ಸಿಪ್ಪೆಯನ್ನು ಭಂಗು, ಮೊಡವೆ ಆದ ಜಾಗಕ್ಕೆ ಇಟ್ಟು 15-20 ನಿಮಿಷಗಳ ನಂತರ ತೆಗೆದು ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ಕಲೆಗಳು ನಿವಾರಣೆ ಆಗುತ್ತವೆ. ಈ ಮಾಹಿತಿ ಇಷ್ಟವಾದಲ್ಲಿ ನೀವೂ ಅನುಸರಿಸಿ ಇತರರಿಗೂ ತಿಳಿಸಿ. ಶುಭದಿನ.