ಇತ್ತೀಚಿನ ದಿನಗಳಲ್ಲಿನ ತಿನ್ನುವ ಆಹಾರದಿಂದ ಬರುವಂತ ಹಲವಾರು ಕಾಯಿಲೆಗಳು ಬರುತ್ತವೆ ಅದರಲ್ಲಿ ಈ ಆಸನ ಉರಿ ಸಹ ಒಂದಾಗಿದೆ, ಇದರಿಂದ ಸಾಕಷ್ಟು ನೋವು ಉರಿ ಕೆಲವೊಮ್ಮೆ ಮುಜುಗರ ಸಹ ಆಗುತ್ತದೆ ಹಾಗಾಗಿ ಈ ಆಸನದ ಉರಿ ತಪ್ಪಿಸಲು ಇಲ್ಲಿವೆ ನೋಡಿ ಸೂಕ್ತ ಮನೆಮದ್ದುಗಳು.
ಬಹಳ ಉಷ್ಣಪದಾರ್ತಗಳನ್ನು ಸೇವಿಸಿದಾಗ ಆಸನದ್ಲಲಿ ಹೆಚ್ಚಾಗಿ ಉರಿ ಕಾಣಿಸಿಕೊಳ್ಳುತ್ತದೆ ಆ ಸಮಯದಲ್ಲಿ ನೀರನ್ನು ಹೆಚ್ಚಾಗಿ ಸೇವಿಸಿದರೆ ವಿಷದ ಪದಾರ್ಥಗಳ ಆಮ್ಲತೆ ಕಡಿಮೆಯಾಗಿ ತಣ್ಣಗಾಗುವುದು. ಎಲ್ಲ ವಿಧವಾದ ಹಣ್ಣುಗಳನ್ನು ಜ್ಯೂಸ್ ಮಾಡಿ ಸೇವಿಸಿದರೆ ಉರಿ ನಾಶವಾಗುತ್ತದೆ.
ಹಸಿ ತರಕಾರಿಗಳನ್ನು ಮತ್ತು ಮೊಳಕೆ ಬಂಡ ಕಾಲುಗಳನ್ನು ಸೇವಿಸುವುದರಿಂದ ಆಸನದಲ್ಲಿ ಹುರಿ ಕಡಿಮೆಯಾಗುವುದು, ತರಕಾರಿಗಳನ್ನು ಬೇಯಿಸಿದ ಮೇಲೆ ಅದರ ರಸಕ್ಕೆ ಸಕ್ಕರೆ ಅಥವಾ ಉಪ್ಪು ಹಾಕಿ ಕುಡಿದರೆ ಆಸನದ ಉರಿ ಕಡಿಮೆಯಾಗುತ್ತದೆ.
ಸ್ತ್ರೀಯರ ಯೋನಿಯಲ್ಲಿ ಉರಿ ಬಂದಾಗ ಬೇವಿನ ಸೊಪ್ಪಿನ ಕಷಾಯ ಮಾಡಿ ಅದರಲ್ಲಿ ಆಗಾಗ ತೊಳೆಯುತ್ತಿದ್ದರೆ, ಬಿಳುಪು, ಕೆಂಪು ಹೋಗುವ ವಿಷ ಕ್ರಿಮಿಗಳು ನಾಶವಾಗಿ ಉರಿ ಕಡಿಮೆಯಾಗುತ್ತದೆ.
ತಲೆಗೆ ವಾರದಲ್ಲಿ ಎರಡು ಮೂರು ಬಾರಿ ಅರಳೆಣ್ಣೆ ಅಚ್ಛ್ಗಿಕೊಳ್ಳುವುದರಿಂದ ಇಡೀ ದೇಹಕ್ಕೆ ತಂಪು ಆಗುತ್ತದೆ ಮತ್ತು ಆಸನದ ಉರಿಯುವುದು ಕಡಿಮೆಯಾಗುತ್ತದೆ ಹಾಗು ಎಮ್ಮೆ ಬೆಣ್ಣೆಯನ್ನು ತಿನ್ನಬೇಕು ಹಾಗು ಅದರ ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ಆಸನದ ಉರಿ ಕಡಿಮೆಯಾಗುತ್ತದೆ.