ಇದರಲ್ಲಿ ಮುಖ್ಯವಾಗಿ ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಕಫ ತುಂಬಿಕೊಂಡು ಸುಂಯ್ ಸುಂಯ್ ಎಂಬ ಶಬ್ದ ಹೊರಬರುತ್ತದೆ. ಶ್ವಾಸನಾಳಗಳು ಸಂಕುಚಿತಗೊಂಡು ಸಲೀಸಾಗಿ ಆಮ್ಲಜನಕವನ್ನು ಒಳಕ್ಕೆ ಎಳೆದುಕೊಳ್ಳಲಾರದೆ ಉಸಿರಾಟವೆಂಬುದು ಕಡುಕಷ್ಟವಾಗಿ ಪರಿಣಮಿಸುತ್ತದೆ. ಅಸ್ತಮಾವನ್ನು ನಿಯಂತ್ರಿಸಬಹುದೇ ಹೊರತು ಪೂರ್ತಿ ಗುಣಪಡಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಸ್ತಮಾ ರೋಗವು ಧೂಳು, ಹಿಮಪಾತ, ಕುಂಭದ್ರೋಣ ಮಳೆಯ ವಾತಾವಾರಣದಲ್ಲಿ ತೀವ್ರಗೊಳ್ಳುತ್ತದೆ. ಬೇಸಿಗೆಯಲ್ಲೂ ಅತಿಯಾದ ಬಿಸಿಲು, ಧೂಳಿನಿಂದ ಅಸ್ತಮಾ ಕಾಣಿಸಿಕೊಳ್ಳಬಹುದು. ಸರಿಯಾದ ಆಹಾರ, ಚಿಕಿತ್ಸೆ ಮತ್ತು ಪ್ರಾಣಾಯಾಮದಂತಹ ವ್ಯಾಯಾಮಗಳನ್ನು ತಜ್ಞರ ಮಾರ್ಗದರ್ಶನದಲ್ಲಿ ಮಾಡಬೇಕು.ಅಸ್ತಮಾ ಹೃದ್ರೋಗಗಳಿಗೂ ದಾರಿ ಮಾಡಿ ಕೊಡುವ ಸಂಭವವುಂಟು.
ಅಸ್ತಮಾಗೆ ಗೃಹಚಿಕಿತ್ಸೆಗಳು ಇಲ್ಲಿವೆ: ಮೆಂತ್ಯ ಮತ್ತು ಓಮ್ ಕಾಳುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ, ಕಷಾಯಮಾಡಿ ಜೇನುತುಪ್ಪದೊಂದಿಗೆ ದಿನಕ್ಕೆ ೨-೩ ಸಲ ಸೇವಿಸಬೇಕು. ಪ್ರತಿರಾತ್ರಿ ಒಂದು ಟೀ ಚಮಚ ಬೆಳ್ಳುಳ್ಳಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾ ಬರಬೇಕು. ಉದ್ದಿನ ಹಿಟ್ಟು, ಕಡಲೆ ಹಿಟ್ಟು, ಟೀ ಸೊಪ್ಪು, ಅರಿಶಿನ ಪುಡಿ ಸಮಭಾಗ ತೆಗೆದುಕೊಂಡು ಮಿಶ್ರಣ ತಯಾರಿಸಿ ಈ ಮಿಶ್ರಣವನ್ನು ಕೆಂಡದ ಮೇಲೆ ಸುಟ್ಟು ಹೊಗೆ ಸೇವಿಸಬೇಕು.
ದತ್ತೂರದ ಎಲೆಗಳನ್ನು ಕೆಂಡದ ಮೇಲೆ ಸುಟ್ಟು ಹೊಗೆ ಸೇವಿಸಬೇಕು. ಏಳೆಂಟು ಬೆಳ್ಳುಳ್ಳಿ ತೊಳೆಗಳನ್ನು ಒಂದುಬಟ್ಟಲು ಹಾಲಿಗೆ ಹಾಕಿ ಕುದಿಸಿ ರಾತ್ರಿ ಹೊತ್ತು ಕುಡಿಯಬೇಕು. ಮೆಣಸಿನಕಾಳಿನ ಪುಡಿಯನ್ನು ಕಾಲು ಚಮಚದಷ್ಟು ಜೇನುತುಪ್ಪದೊಂದಿಗೆ ಕಲಸಿ ದಿನಕ್ಕೆ ಎರಡು ಬಾರಿಯಂತೆ ಸೇವಿಸಬೇಕು. ಗಸಗಸೆಯನ್ನು ೩-೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ರುಬ್ಬಿಕೊಂಡು ಅದನ್ನು ಬಿಸಿನೀರಿನಲ್ಲಿ ಕದಡಿ ಹಾಲಿನಂತೆ ತೆಳುವಾದ ದ್ರವ ತಯಾರಿಸಬೇಕು. ಅದಕ್ಕೆ ಹುಡಿಬೆಲ್ಲ ಸೇರಿಸಿ ದಿನಕ್ಕೆ ೨ ಕಪ್ ಗಳಂತೆ ೩-೪ ದಿನ ಸೇವಿಸಬೇಕು.
ಒಂದು ಸ್ಟೀಲ್ ಡಬ್ಬಿಯಲ್ಲಿ ಮಾಗಿದ ಬಾಳೆಹಣ್ಣಿನ ತಿರುಳು ಮತ್ತು ಅಷ್ಟೇ ಪ್ರಮಾಣದ ಸಕ್ಕರೆ ಹಾಕಿ ಮುಚ್ಚಳ ಮುಚ್ಚಿ ಈ ಡಬ್ಬಿಯನ್ನು ದೊಡ್ಡ ಪಾತ್ರೆಯಲ್ಲಿರಿಸಿ ಡಬ್ಬಿ ಮುಳುಗದಷ್ಟು ನೀರು ಸುರಿಯಬೇಕು. ಆ ಪಾತ್ರೆಯನ್ನು ಸಣ್ಣ ಉರಿಯ ಮೇಲಿಟ್ಟು ಡಬ್ಬಿಯಲ್ಲಿನ ರಸಾಯನ ಬೆಂದ ಬಳಿಕ ಕೆಳಗಿಳಿಸಿ ಡಬ್ಬಿಯಲ್ಲಿರುವ ರಸಾಯನ ತಣ್ಣಗಾದ ಬಳಿಕ ಅದಕ್ಕೆ ಶುದ್ಧ ನೀರು ಸೇರಿಸಿ ದಿನವೂ ಕುಡಿಯಬೇಕು.
ಬೊಜ್ಜು ಅಸ್ತಮಾವನ್ನು ತೀವ್ರಗೊಳಿಸುತ್ತದೆ. ಒಳ್ಳೆ ವೈದ್ಯರಿಂದ ತರಬೇತಿ ಪಡೆದು ಯೋಗಾಸನ, ಪ್ರಾಣಾಯಾಮಗಳನ್ನು ತಪ್ಪದೆ ಮಾಡಬೇಕು. ಅಸ್ತಮಾರೋಗಿಗಳು ಧೂಮಪಾನ ಮಾಡಿದ್ದಲ್ಲಿ ಹೃದಯಾಘಾತ, ಪಲ್ಮನರಿ ಎಂಬಾಲಿಸಂ ಗಳಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.