ಗ್ಯಾಸ್ ಬಳಕೆ ಬಗ್ಗೆ ಯಾವುದೇ ಶಾಲೆ ಕಾಲೇಜ್ ಸ್ಥಳೀಯ ಸಂಘ ಸಂಸ್ಥೆ ಸರ್ಕಾರದ ಯೋಜನೆಗಳು ಸಿಲಿಂಡರ್ ಗ್ಯಾಸ್ ಉಪಯೋಗದ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸುವುದಿಲ್ಲ ಇದೆ ಕಾರಣದಿಂದ ಇಂತಹ ಸಮಸ್ಯೆಗೆ ತುತ್ತಾಗುವುದು ಕಂಡು ಬರುತ್ತೆ, ಈ ಎಲ್ಲ ಘಟನೆಗೆ ನೀವೂ ಮಾಡುವ ತಪ್ಪುಗಳು ಮತ್ತು ಸರಿಯಾದ ಗ್ಯಾಸ್ ಬಳಕೆ ಮಾಡುವ ಬಗ್ಗೆ ವೈಜ್ಞಾನಿಕ ಮಾಹಿತಿ ಇಲ್ಲಿದೆ ನೋಡಿ.
ಸಿಲಿಂಡರ್ ತೆಗೆದುಕೊಳ್ಳುವಾಗೆ ಗ್ಯಾಸ್ ಪಿನ್-ನಲ್ಲಿರುವ ವೈಸರ್ ಸರಿಯಾಗಿದೆ ಇಲ್ಲೋ ನೋಡಿ:
ನಿಮ್ಮ ಮನೆಗೆ ಬರುವ ಸಿಲಿಂಡರ್ ಬಂದಾಗೆ ಗ್ಯಾಸ್ ಸರಿಯಾಗಿ ಪ್ಯಾಕ್ ಆಗಿದೆ ಇಲ್ಲೋ ಮತ್ತೆ ಹೊಸ ವೈಸರ್ ಹಾಕಿದ್ದಾರೋ ಇಲ್ಲೋ ನೋಡಿ ಇಲ್ಲದಿದ್ದರೆ ದಿನವೂ ನೀವೂ ಅಡುಗೆ ಮಾಡುವಾಗೆ ನಿಮ್ಮಗೆ ಗೊತ್ತಿಲ್ಲದೇ ಗ್ಯಾಸ್ ಲೀಕ್ ಆಗಿ ತಿಂಗಳು ಬರುವ ಗ್ಯಾಸ್ ಕೇವಲ ದಿನಕೆ ಕಾಲಿಯಾಗುತ್ತೆ ಕೆಲವೊಂದು ಸಮಯದಲ್ಲಿ ಸ್ಪೋಟಗೊಂಡು ಅಪಾಯಗಳು ಸಂಭವಿಸಬಹುದು.
ತೀರಾ ಹಳೆಯ ಗ್ಯಾಸ್ ಉಪಯೋಗಿಸುವುದು: ಹಳೆಯ ಗ್ಯಾಸ್ ಓಲೆ ನಿಮ್ಮ ಮನೆಯಲ್ಲಿದ್ದರೆ ಅದನ್ನು ಬಳಕೆ ಮಾಡುವ ಮುನ್ನ ಗ್ಯಾಸ್ ಬತ್ತೆ ಮತ್ತು ಸ್ಟೋ ಅನ್ನು ಪ್ರತಿದಿನವೂ ಪರಿಕ್ಷಿಸುವುದು ಒಳ್ಳೆಯದು ಇಲ್ಲವಾದರೆ ಗ್ಯಾಸ್ ಬಳಕೆ ಪ್ರಮಾಣ ಬಹಳಷ್ಟು ಇದ್ದರು ಬೇಗನೆ ಅಡುಗೆ ಆಗುವುದಿಲ್ಲ ಇಲ್ಲ ಗ್ಯಾಸ್ ಆನ್ ಮಾಡದನೆ ಗ್ಯಾಸ್ ಲೀಕ್ ಕಂಡು ಬರುತ್ತೆ.
ಗಾಳಿ ಬೀಸುವ ಜಾಗದಲ್ಲಿ ಅಡುಗೆಯನ್ನು ಮಾಡಬಾರದು. ಅಡುಗೆ ತಯಾರಾಗುವವರೆಗೂ ಗ್ಯಾಸ್ ಮುಂದೆಯೇ ನಿಂತುಕೊಂಡು ಇರುವುದು ಒಳ್ಳೆಯದು. ಉಕ್ಕುವಪದಾರ್ಥಗಳನ್ನು ಬರ್ನರ್ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ತುಂಬಾ ಜಾಗೃತೆಯಿಂದ ಇರಬೇಕು.
ಸಿಲಿಂಡರ್ ಇಟ್ಟಿರುವ ಸ್ಥಳ ಹೇಗೆ ಇದೆ ನೋಡಿ. ಸಿಲಿಂಡರ್ ನಿಂದ ಸ್ವಲ್ಪ ಎತ್ತರ ದೂರದಲ್ಲಿ ಒಲೆಯನ್ನು ಇಡಬೇಕು. ಮತ್ತು ಸಿಲಿಂಡರ್ ನೇರವಾಗಿ ಇರಬೇಕು ಬೇಕಾಬಿಟ್ಟಿಯಾಗಿ ಇಲ್ಲ ಕಡಿಮೆ ಜಾಗದಿಂದ ಓರೇಯಾಗಿ ಇಟ್ಟಗ್ಯಾಸ್ ಸರಿಯಾಗಿ ಓಲೆಗೆ ಸಮರ್ಪಕವಾಗಿ ಸಿಗದೇ ವೇಗವಾಗಿ ಅಡುಗೆಯಾಗದೆ ಬೇಗನೆ ಕಾಲಿಯಾಗುತ್ತೆ.
ಗ್ಯಾಸ್ ಓಲೆಯನ್ನು ಬರ್ನರ್ ಸ್ವಚವಾಗಿ ಇಡಬೇಕು: ಕ್ರಮೆಣವಾಗಿ ಸ್ವವ್ ಬರ್ನರ್ -ನ್ನು ಶುಭ್ರ ಮಾಡಬೇಕು ಹಾಗೆಯೆ ನಾಣ್ಯದಂತೆ ಇರುವ ಸ್ವೌವ್ ಪೈಪ್ ಗಳನ್ನು ಬಳಸಬೇಕು. ಪಾತ್ರೆಗೆ ಬೇಕಾದಷ್ಟು ಉರಿಯನ್ನು ಸಣ್ಣದಾಗಿಡಿ ನೀವೂ ಅವಸರಲ್ಲಿ ಮಾಡುವ ಅಡುಗೆಗೆ ಚಿಕ್ಕ ಪಾತ್ರೆಯನ್ನು ಇಟ್ಟು ದೊಡ್ಡ ಉರಿಯನ್ನು ಇಟ್ಟರೆ ಬೇಗನೆ ಗ್ಯಾಸ್ ಕಾಲಿಯಾಗುತ್ತೆ ಮತ್ತು ಮಾಡುವ ಆಹಾರ ಕೂಡ ಸರಿಯಾಗಿ ಬೇಯಿವುದಿಲ್ಲ ರುಚಿಯು ಇರೋದಿಲ್ಲ.
ಅಡುಗೆ ಮಾಡುವ ಮುನ್ನ ಬೇಕಾದ ಎಲ್ಲ ಸಾಮಗ್ರಿಯನ್ನು ಒಂದಡೆ ಇಟ್ಟುಕೊಳ್ಳಿ: ನೀವೂ ಮಾಡುವ ಇನ್ನೊಂದು ದೊಡ್ಡ ತಪ್ಪು ಅಂದ್ರೆ ಒಲೆ ಹಚ್ಚುವ ಮುನ್ನ ಅಡುಗೆ ಮಾಡಲು ಬೇಕಾದ ಸಾಮಾಗ್ರಿಗಳನ್ನು ಹತ್ತಿರದಲ್ಲಿ ಇಟ್ಟುಕೊಂಡರೆ ತಕ್ಷಣ ಸಿಗುತ್ತದೆ ಇಲ್ಲವಾದರೆ ಗ್ಯಾಸ್ ಉರಿತಿರುತ್ತೆ ನೀವೂ ಸಾಮಾನು ಹುಡುಕಿ ಹಾಕುವುದರಲ್ಲಿ ಗ್ಯಾಸ್ ಹಾಳಾಗಿ ಹೋಗುತ್ತೆ.
ಅಡುಗೆಯನ್ನು ತಯಾರಿಸುವ ಸಂದರ್ಭದಲ್ಲಿ ಪಾತ್ರೆಯ ಮೇಲೆ ಮುಚ್ಚಳವನ್ನು ಮುಚ್ಚುವುದನ್ನು ಮರೆಯಬೇಡಿ ಹಾಗೆಯೇ ಪಾತ್ರೆಗಳಿಗಿಂತ ಒಳ್ಳೆಯ ಪ್ರೆಷರ್ ಕುಕ್ಕರ್ ಬಳಕೆ ಮಾಡಿದ್ದರೆ ಅರ್ಧದಷ್ಟು ಗ್ಯಾಸ್ ಉಳಿತಾಯವಾಗುತ್ತೆ. ನಿಮ್ಮ ಮನೆಯ ಪ್ರಿಜ್ ನಲ್ಲಿರುವ ಅಡುಗೆ ವಸ್ತುಗಳನ್ನು ಡೈರೆಕ್ಟ್ ಆಗಿ ಪಾತ್ರೆಗೆ ಹಾಕಿ ಗ್ಯಾಸ್ ಮೇಲೆ ಇಟ್ಟರೆ ಅದು ಬಿಸಿಯಾಗಲು ಬಹಳಷ್ಟು ಸಮಯವನ್ನು ತೆಗೆದುಕೊಂಡು ಗ್ಯಾಸ್ ಸುಕ್ಕಸುಮ್ನ ಹಾಳಾಗುತ್ತೆ. ಹಾಗೆಯೇ ಕೆಲವೊಂದು ಗಟ್ಟಿಯಾದ ಬೆಳೆ ಅಕ್ಕಿಯನ್ನು ಅಡುಗೆಯ ಮೊದಲು ನೀರಿನಲ್ಲಿ ನೆನೆಸಿಟ್ಟು ಬಳಕೆಮಾಡುವುದು ಒಳ್ಳೆಯದು.
ಗ್ಯಾಸ್ ಹಚ್ಚಲು ಮಕ್ಕಳಿಗೆ ಕಳುಹಿಸುವುದು: ಟಿವಿ ಅಥವಾ ಮೊಬೈಲ್- ನಲ್ಲಿ ಬುಸ್ಯಿ ಯಾಗಿ ಚಿಕ್ಕಮಕ್ಕಳಿಗೆ ಗ್ಯಾಸ್ ಹಚ್ಚಲು ಹೇಳಬೇಡಿ ಯಾಕೆಂದರೆ ಮಕ್ಕಳಿಗೆ ಸರಿಯಾಗಿ ಗ್ಯಾಸ್ ಓಲೆ ಸಿಗದ ಕಾರಣ ಗ್ಯಾಸ್ ಆನ್ ಮಾಡಿ ಲೈಟರ್ ಹಚ್ಚುವುದು ಲೇಟ್ ಮಾಡಿದರೆ ಕ್ಷಣದಲ್ಲೇ ಗ್ಯಾಸ್ ಅಡುಗೆ ಮನೆಯ ತುಂಬಾ ಲೀಕ್ ಆಗಿ ಗ್ಯಾಸ್ ಬೇಗನೆ ಕಾಲಿಯಾಗುತ್ತೆ ಹಾಗೆಯೇ ಅಪಾಯಗಳು ಕೂಡ ಆಗಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.