WhatsApp Group Join Now

ಮಧುಮೇಹ ನಿಯಂತ್ರಣಕ್ಕೆ ಬರಲು, ಬೊಜ್ಜು ಕರಗಿಸಲು ಸೋರೆಕಾಯಿ ಜ್ಯೂಸ್ ಉತ್ತಮ ಮನೆಮದ್ದು ಎಂದು ಹೇಳಿರುವುದನ್ನು ಕೇಳಿರಬಹುದು. ಆದರೆ ಆರೋಗ್ಯವೆಂದು ನಾವು ಕುಡಿಯುವ ಈ ಸೋರೆಕಾಯಿ ಜ್ಯೂಸ್‌ ಕೆಲವೊಮ್ಮೆ ವಿಷವಾಗಿ ನಮ್ಮ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುತ್ತದೆ.

2010ರಲ್ಲಿ ಸೋರೆಕಾಯಿ ಜ್ಯೂಸ್‌ನಿಂದಾಗಿ ಸುಶೀಲ್‌ ಕುಮಾರ್‌ ಸಕ್ಸೇನಾ ಎಂಬ ವಿಜ್ಞಾನಿ ತೀರಿ ಹೋದರು. ಸುಶೀಲ್‌ ಕುಮಾರ್ ಹಾಗೂ ಪತ್ನಿ ಸೋರೆಕಾಯಿ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ರಕ್ತ ವಾಂತಿ ಮಾಡಲಾರಂಭಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಸುಶೀಲ್ ಕುಮಾರ್‌ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಸಾವಿಗೆ ಸೋರೆಕಾಯಿ ಜ್ಯೂಸ್ ಕಾರಣವೆಂಬುವುದನ್ನು ವೈದ್ಯರು ಖಚಿತ ಪಡಿಸಿದರು.

ಸೋರೆಕಾಯಿ ಕಹಿಯಾಗಿದ್ದರೆ ಆ ಸೋರೆಕಾಯಿಯಿಂದ ಅಡುಗೆ ಅಥವಾ ಜ್ಯೂಸ್‌ ಮಾಡಬೇಡಿ. ಸೋರೆಕಾಯಿ ಕಹಿಯಾಗಿದ್ದರೆ ಅದರಲ್ಲಿ Tetracyclic Triterpenoid Cucurbitacin ಎಂಬ ವಿಷಾಂಶವಿರುತ್ತದೆ. ಇದು ನಮ್ಮ ದೇಹವನ್ನು ಸೇರಿದರೆ ವಾಂತಿಯಾಗಿ ಸಾವು ಸಂಭವಿಸುವುದು.

WhatsApp Group Join Now

Leave a Reply

Your email address will not be published. Required fields are marked *