ಇವತ್ತಿನ ದಿನದಲ್ಲಿ ಈ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಕೆಲವರಿಗೆ ಕಣ್ಣಿನ ದೃಷ್ಟಿ ಮಾಗುತ್ತಾ ಇರುತ್ತದೆ ಇನ್ನು ಕೆಲವರಿಗೆ ಕಣ್ಣು ಆಗಾಗ ಕೆಂಪಗೆ ಆಗುತ್ತಾ ಇರುತ್ತದೆ ಇನ್ನು ಕೆಲವರಿಗೆ ಅಂತೂ ಕಣ್ಣು ತುಂಬಾನೇ ಉರಿಯುತ್ತ ಇರುತ್ತದೆ ಇಂತಹ ಎಲ್ಲ ಸಮಸ್ಯೆಗಳಿಂದ ಬಳಲುತ್ತಾ ಇರುವವರು ಈ ದಿನ ತಿಳಿಸುವಂತಹ ಮಾಹಿತಿಯನ್ನು ತಪ್ಪದೆ ಪಾಲಿಸಿ. ಇದನ್ನು ನೀವು ಕೇವಲ ಒಂದು ವಾರ ಸೇವಿಸುತ್ತಾ ಬಂದರೆ ಇದರ ಒಂದು ಫಲಿತಾಂಶವನ್ನು ನೀವೆ ಕಾಣಬಹುದು ನೀವೆ ಗಮನಿಸಬಹುದು.

ಹೌದು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಅದರಲ್ಲಿಯೂ ಈ ಕಣ್ಣಿನ ದೃಷ್ಟಿ ಸಮಸ್ಯೆ ಉಂಟಾಗುವುದು ನಮ್ಮ ಒಂದು ಕೆಟ್ಟ ಆಹಾರ ಪದ್ಧತಿಯಿಂದಾಗಿ ಇದರ ಜೊತೆಗೆ ಕೆಟ್ಟ ಹವ್ಯಾಸಗಳಿಂದ. ಆದ ಕಾರಣ ಯಾವುದೇ ಒಂದು ಪರಿಹಾರಗಳನ್ನು ಮಾಡಿಕೊಳ್ಳುವುದಕ್ಕಿಂತ ಮೊದಲು ನಮ್ಮ ಈ ಹವ್ಯಾಸಗಳನ್ನು ಒಳ್ಳೆಯ ರೀತಿಯಲ್ಲಿ ರೂಢಿಸಿಕೊಳ್ಳಬೇಕು.

ನಂತರ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಪರಿಣಾಮಕಾರಿಯಾದ ಫಲಿತಾಂಶವನ್ನು ನಾವು ಪಡೆದುಕೊಳ್ಳಬಹುದು. ಹಿಂದಿನ ಕಾಲದಲ್ಲಿ ಈ ದೃಷ್ಟಿಗೆ ಸಂಬಂಧಪಟ್ಟ ಸಮಸ್ಯೆಗಳು ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತಿತ್ತು ವಯಸ್ಸಾದವರಲ್ಲಿ ಈ ಕಣ್ಣು ಮಂಜಾಗುವುದು ಕಣ್ಣು ಸರಿಯಾಗಿ ಕಾಣದೆ ಇರುವುದು ಹೀಗೆ ಕಣ್ಣಿನ ಸುತ್ತ ಇರುವ ನರಗಳ ಒಂದು ಬಲಹೀನತೆಯಿಂದ ದೃಷ್ಟಿಗೆ ಸಂಬಂಧಪಟ ಸಮಸ್ಯೆಗಳು ಉಂಟಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಚಿಕ್ಕ ಮಕ್ಕಳಲ್ಲಿಯೆ ಕಾಣಿಸಿಕೊಳ್ಳುತ್ತಿದೆ.

ಇದಕ್ಕೆ ಮೂಲ ಕಾರಣ ಅಂದರೆ ಒಂದು ಸರಿಯಾದ ಪೋಷಣೆ ಇಲ್ಲದೆ ಇರುವುದು ಮತ್ತು ಕೆಟ್ಟ ಹವ್ಯಾಸ.ಈ ಒಂದು ಹೋಮ ರೆಮಿಡಿಯಲ್ ನೀವು ಪಾಲನೆ ಮಾಡುತ್ತಾ ಬಂದರೆ ಕಣ್ಣಿನ ಸುತ್ತ ಇರುವ ಸೂಕ್ಷ್ಮ ನರಗಳು ಬಲಗೊಳ್ಳುತ್ತದೆ ದೃಷ್ಟಿಯನ್ನು ವೃದ್ಧಿಸುತ್ತದೆ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಬಾದಾಮಿ ಬಿಳಿ ಕಾಳು ಮೆಣಸು ಜೀರಿಗೆ ಸೋಂಪಿನ ಕಾಳು ಮತ್ತು ಕಲ್ಲು ಸಕ್ಕರೆ.

ಏಳೆಂಟು ಬಾದಾಮಿ ಬೀಜಗಳನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚ ಜೀರಿಗೆ ಒಂದು ಚಮಚ ಸೋಪಿನ ಕಾಳನ್ನು ಹಾಕಿ ಅರ್ಧ ಚಮಚ ಅಥವಾ ನಾಲ್ಕರಿಂದ ಐದು ಬಿಳಿ ಮೆಣಸಿನ ಕಾಳುಗಳನ್ನು ಈ ಮಿಶ್ರಣದೊಂದಿಗೆ ಬೆರೆಸಿಕೊಳ್ಳಿ. ಇದೀಗ ಈ ಎಲ್ಲ ಪದಾರ್ಥಗಳನ್ನು ಸಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಕಲ್ಲು ಸಕ್ಕರೆಯನ್ನು ಹಾಕಿ ಮತ್ತೊಮ್ಮೆ ಪುಡಿ ಮಾಡಿ ಶೇಖರಣೆ ಮಾಡಿ ಇಟ್ಟುಕೊಳ್ಳಿ.

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀವು ಪುಡಿಯನ್ನು ಮಾಡಿಕೊಳ್ಳಬೇಕು ಅಂದರೆ ಇದೆ ಪದಾರ್ಥಗಳನ್ನು ಇನ್ನು ದುಪ್ಪಟ್ಟಾಗಿ ತೆಗೆದುಕೊಳ್ಳಿ.ಪ್ರತಿದಿನ ಒಂದು ಲೋಟ ಹಾಲಿಗೆ ಈ ಪುಡಿಯನ್ನು ಎರಡು ಚಮಚ ಬೆರೆಸಿಕೊಳ್ಳಬೇಕು ಚಿಕ್ಕ ಮಕ್ಕಳಿಗಾದರೆ ಒಂದು ಚಮಚ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ನೀಡಬೇಕು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *