ಇತ್ತೀಚಿನ ದಿನಗಳಲ್ಲಿ ಡ್ರೋನ್ ಅಂದರೆ ತಟ್ಟನೆ ನೆನಪು ಆಗೋದು ಡ್ರೋನ್ ಪ್ರತಾಪ್ ಆದರೆ ಇದು ಡ್ರೋನ್ ಪ್ರತಾಪನ ಸುದ್ದಿಯಲ್ಲ ನಿಜವಾದ ಸುದ್ದಿ ರಾಯಚೂರು ಜಿಲ್ಲೆಯ ಲಿಂಗಸರಿನ ಕೃಷ್ಣ ನದಿಯ ತೀರದ ನಡುಗಡ್ಡೆಯಲ್ಲಿ ಸಿಲುಕಿರುವ ಜನರಗೆ ಸಹಾಯ ಮಾಡಿರುವ ಸುದ್ದಿ ಕೃಷ್ಣ ನದಿಯ ದಡದ ಕದಡಾರಗಡ್ಡಿಯಲ್ಲಿ ಸಿಲುಕಿರುವ ಜನರಿಗೆ ಡ್ರೋನ್ ಬಳಸಿ ಅಗತ್ಯ ವಸ್ತುಗಳ ಜೊತೆ ಔಷದಿ ಮತ್ತು ಆಹಾರ ನೀಡಲು ಈ ಡ್ರೋನ್ ಬಳಸಿದ್ದಾರೆ ಮತ್ತು ಈ ಡ್ರೋನ್ ಬಳಸಿ ಜಿಲ್ಲಾಡಳಿತ ಯಶಸ್ವಿ ಆಗಿದ್ದರೆ.
ಈ ನದಿಯ ತೀರದಲ್ಲಿ ಹೆಚ್ಚು ಹೆಚ್ಚು ಕಲ್ಲು ಬಣವೆಗಳು ಇರುವುದರಿಂದ ಇಲ್ಲಿ ರಕ್ಷಣಾ ಕಾರ್ಯ ಸ್ಥಗಿತಗೊಂಡಿದ್ದೆ ಇದಲ್ಲದೆ ಇಲ್ಲಿ ನದಿಯಲ್ಲಿ ನೀರಿನ ಸೆಳೆತ ಸಹ ಹೆಚ್ಚಾಗಿದ್ದು ರಕ್ಷಣಾ ಕಾರ್ಯ ಸಾಧ್ಯವಾಗುತಿಲ್ಲ ಅನ್ನೋದು ಜಿಲ್ಲಾಡಳಿತದ ಹೇಳಿಕೆ ಇನ್ನು ಈ ನದಿಯ ನಡುಗಡ್ಡೆಯಲ್ಲಿ ನಾಲ್ಕು ಜನ ತಮ್ಮ ಜಾನುವಾರು ಮತ್ತು ಜಮೀನು ಬಿಟ್ಟು ಬರಲು ಸಾಧ್ಯವಾಗದೆ ಅಲ್ಲೇ ಇದ್ದು ಪರದಾಡುತ್ತಿದ್ದಾರೆ ಹಾಗಾಗಿ ಇವರ ರಕ್ಷಣೆಯಲ್ಲಿ ಜಿಲ್ಲಾಡಳಿತ ಪಾಲ್ಗೊಂಡಿದೆ.
ಇನ್ನು ಈ ನಾಲ್ವರ ಪೈಕಿ ಒಬ್ಬರಿಗೆ ತಿಪ್ಪಣ್ಣ ಎನ್ನುವರಿಗೆ ಪಾರ್ಶ್ವವಾಯು ಇರುವುದರಿಂದ ಇವರಿಗೆ ಅಗತ್ಯವಾಗಿ ಮತ್ತು ತುರ್ತಾಗಿ ಇವರೀಗೆ ಔಷದಿ ಬೇಕಾಗಿತ್ತು ಅಲ್ಲದೆ ಅವರಿಗೆ ಹೆಚ್ಚು ಮೈ ಕೈ ನೋವು ಇರುವುದರಿಂದ 15 ದಿನಗಳಿಗೆ ಆಗುವಷ್ಟು ಮಾತ್ರೆ ಮತ್ತು ಔಷಧಿಯನ್ನು ತಾಲೂಕು ಆಡಳಿತ ನೀಡಿದೆ.
ಇನ್ನು ಔಷಧಿಯನ್ನು ಡ್ರೋನ್ ಮೂಲಕ ಕಳುಹಿಸಿದ್ದು ಅವರಿಗೆ ಬೇಕಾಗಿರುವ ಆಹಾರ ಪದಾರ್ಥಗಳನ್ನು ಸಹ ಈ ಡ್ರೋನ್ ಮೂಲಕ ಕಳುಹಿಸಬೇಕು ಎಂದು ಅಧಿಕಾರಿಗಳು ಮುಂದಾಗಿದ್ದಾರೆ ಮತ್ತು ರಾಯಚೂರಿನ ಕೃಷಿ ವಿವಿಯಲ್ಲಿರುವ ಎಲ್ಲ ಡ್ರೋನ್ ಗಳನ್ನೂ ಇಲ್ಲಿ ಬಳಸಿಕೊಳ್ಳಲು ಸಿದ್ಧವಾಗಿದ್ದಾರೆ ಇದೆ ಮೊದಲ ಬಾರಿಗೆ ನಡುಗಡ್ಡೆಯಲ್ಲಿ ಇದ್ದವರಿಗೆ ಸಹಾಯ ಮಾಡಲು ಬಳಸಲಾಗಿದೆ.