ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲಿ ಎಂದು ಎಲ್ಲರು ಬಯಸುತ್ತಾರೆ, ಲಕ್ಷ್ಮಿಯನ್ನು ಒಲಿಸಿ ಕೊಳ್ಳಲು ವಿವಿಧ ಪೂಜೆಗಳನ್ನ ಮಾಡುತ್ತಾರೆ, ಆದರೆ ಕೆಲವರ ಮನೆಗೆ ಲಕ್ಷ್ಮಿ ಕಾಲಿಡುವುದೇ ಇಲ್ಲ, ಇದಕ್ಕೆ ಕಾರಣವೇನು ಎಂಬುವುದನ್ನು ಖುದ್ದು ಲಕ್ಷ್ಮಿಯೇ ಇಂದ್ರನಿಗೆ ಹೇಳಿದ್ದಾಳೆ, ಅದು ಏನು ಎಂಬುದನ್ನ ಮುಂದೆ ಓದಿ.
ಅಸುರನ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಿ ಒಂದು ದಿನ ಇಂದ್ರನ ಮನೆಗೆ ಬರ್ತಾಳೆ ಹಾಗು ಇಂದ್ರನಿಗೆ ನಿಮ್ಮ ಮನೆಯಲ್ಲಿ ವಾಸ ಇರಬಹುದಾ ಎಂದು ಇಂದ್ರದೇವನಿಗೆ ಪ್ರೆಶ್ನೆ ಮಾಡುತ್ತಾಳೆ, ತಕ್ಷಣ ಇಂದ್ರದೇವ ಖುಷಿ ಖುಷಿಯಿಂದ ತಾಯಿ ಲಕ್ಷ್ಮಿಗೆ ಅನುಮತಿಯನ್ನ ಮನೆಯೊಳಗೆ ಸಕಲ ಮರ್ಯಾದೆಗಳಿಂದ ಸ್ವಾಗತಿಸುತ್ತಾನೆ.
ಆದರೆ ಇಂದ್ರನ ಮನದಲ್ಲಿ ಒಂದು ಪ್ರೆಶ್ನೆ ಇರುತ್ತದೆ ಅದೆಂದರೆ ಎಷ್ಟೋ ಭಾರಿ ಇಂದ್ರ ದೇವಾ ಲಕ್ಷ್ಮಿಯನ್ನ ತನ್ನ ಮನೆಯಲ್ಲಿ ನೆಲೆಸುವಂತೆ ಕೇಳಿ ಕೊಂಡಿರುತ್ತಾನೆ ಆದರೆ ತಾಯಿ ಲಕ್ಷ್ಮಿ ಇದಕ್ಕೆ ಒಪ್ಪಿರುವಿದಿಲ್ಲ ಆದರೆ ಇಂದು ಅವಳಾಗೇ ಬಂದಿರುತ್ತಾಳೆ, ಇದರಿಂದ ಆಶ್ಚರ್ಯ ಗೊಂಡ ಇಂದ್ರ ದೇವ ಲಕ್ಷ್ಮಿಯೊಡನೆ ಇದೆ ಪ್ರೆಶ್ನೆಯನ್ನು ಕೇಳುತ್ತಾನೆ ಆಗ ಲಕ್ಷ್ಮಿ ಹೀಗೆ ಉತ್ತರಿಸುತ್ತಾಳೆ ಮುಂದೆ ಓದಿ.
ಅಸುರರು ಅಧರ್ಮಿಗಳಾಗ್ತಿದ್ದಾರೆ ಹಾಗಾಗಿ ಅಲ್ಲಿಂದ ಇಲ್ಲಿಗೆ ಬಂದೆ ಎನ್ನುತ್ತಾಳಂತೆ ಲಕ್ಷ್ಮಿ, ದ್ವೇಷ, ಕೋಪ, ಸೇಡು ತುಂಬಿರುವ ಮನೆ, ಮನದಲ್ಲಿ ಎಂದು ನೆಲೆಸುವುದಿಲ್ಲ ಎಂದು ಲಕ್ಷ್ಮಿ ಇಂದ್ರನಿಗೆ ಹೇಳುತ್ತಾಳೆ, ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ವಾಸಿಸುವಿದಿಲ್ಲ ಹಾಗೆಯೇ ವಿವೇಕ ಹಾಗು ಧರ್ಮದ ಬಗ್ಗೆ ಮಾತನಾಡದ, ಜ್ಞಾನಿಗಳ ಅಪಮಾನ ಮಾಡುವ ಜಾಗದಲ್ಲಿ ನೆಲೆ ನಿಲ್ಲುವುದಿಲ್ಲ.
ಪಾಪ, ಅಧರ್ಮ, ಅಧರ್ಮ ಸ್ವಾರ್ಥ ತುಂಬಿರುವ ಮನೆಗೆ ಲಕ್ಷ್ಮಿ ಕಾಲಿಡುವುದಿಲ್ಲ, ಗುರು, ತಂದೆ ತಾಯಿ ಹಿರಿಯರಿಗೆ ಗೌರವವಿಲ್ಲದ ಮನೆಯಲ್ಲಿ ನಾನಿರುವುದಿಲ್ಲ ಎಂದಿದ್ದಾಳೆ ಲಕ್ಷ್ಮಿ.ಹಾಗೆ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಅಥವಾ ಭಗವಾನ್ ವಿಷ್ಣು ಹಾಗು ವಿಷ್ಣು ವಾಹನ ಗರುಡನ ಜೊತೆಗಿರುವ ಲಕ್ಷ್ಮಿ ಫೋಟೋವನ್ನು ಪೂಜಿಸಿದ್ರೆ ಲಕ್ಷ್ಮಿ ಬಹು ಬೇಗ ಪ್ರಸನ್ನಳಾಗ್ತಾಳೆ.