ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿಯೋಣ ಸ್ನೇಹಿತರೆ. ಹಾಗಾಗಿ ಸಂಪೂರ್ಣ ಲೇಖನ ಓದಿ. ಸೋ ಮೊದಲನೆಯದಾಗಿ ಈ ಶ್ವಾಸಕೋಶದ ಕ್ಯಾನ್ಸರ್ ಅಂದ್ರೆ ಏನು? ಈ ಕ್ಯಾನ್ಸರ್ ಯಾಕೆ ಬರುತ್ತೆ ನೋಡೋಣ. ಇದಕ್ಕೂ ಮೊದಲು ಕ್ಯಾನ್ಸರ್ ಅಂದ್ರೆ ಏನು ಅನ್ನೋದನ್ನ ತುಂಬಾ ಚಿಕ್ಕದಾಗಿ ಅರ್ಥ ಮಾಡಿಕೊಳ್ಳುವುದಾದರೆ, ನಮ್ಮ ದೇಹದಲ್ಲಿ ಹುಟ್ಟುವ ಎಲ್ಲಾ ಅಂಗಾಂಶಗಳಿಗೆ ಅಥವಾ ಸೇಲ್ಸ್ ಗಳಿಗೆ ಸಾವು ಅಂತ ಇರುತ್ತೆ, ಅಂದ್ರೆ ಒಂದು ಸಾರಿ ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು ಅಲ್ವಾ? ಅದೇ ರೀತಿ ಈ ಅಂಗಾಂಶಗಳಿಗೆ ಕೂಡ ಹುಟ್ಟು ಸಾವು ಇರುತ್ತದೆ. ಅಂಗಾಂಶ ಸಾಯಲು ಒಂದು ಅವಧಿ ಅಂತ ಇರುತ್ತದೆ, ಅದು ನಮ್ಮ ದೇಹದ ಜೆನೆಟಿಕ್ ಡಿಎನ್ಎ ಇಂದ ತಿಳಿದು ಬರುತ್ತದೆ. ಒಂದು ಅಂಗಾಂಶ ಹುಟ್ಟಿದ ಮೇಲೆ ಅದರ ಬದುಕಿನ ಅವಧಿಯನ್ನು ಈ ಡಿಎನ್ಎ ಕಂಟ್ರೋಲ್ ಮಾಡುತ್ತೆ, ಅದೇ ವಿಧಾನವಾಗಿ ಒಂದು ಅಂಗಾಂಶ ಹುಟ್ಟಿ 3 ದಿನಕ್ಕೆ ಸಾಯಬೇಕು ಅಂತ ಇದ್ದರೆ ಅದು ಕೇವಲ 3 ದಿನಕ್ಕೆ ಸಾಯುವ ಕ್ರಿಯೆ ನಿರಂತರವಾಗಿ ನಮ್ಮ ದೇಹದಲ್ಲಿ ನಡೆಯುತ್ತಲೇ ಇರುತ್ತದೆ. ಇದೆ ನಿಟ್ಟಿನಲ್ಲಿ ಸೇಲ್ಸ್ ಬೆಳೆಯುವುದು, ಸೆಲ್ ಡಿವಿಷನ್ ಪ್ರಕ್ರಿಯೆ ಕೂಡಾ ನಿರಂತರವಾಗಿ ನಡೆಯುತ್ತಲೇ ಇರುತ್ತದೇ. ಯಾವಾಗ ಈ ಕಂಟ್ರೋಲ್ ತಪ್ಪಿ ಹೋಗುತ್ತೋ ಆಗ ಈ ಸೆಲ್ ಗಳು ಸಾಯೋದೇ ಇಲ್ಲ, ಸಾಯದೆ ಹಾಗೆ ಉಳಿಯಲು ಬೇರೆ ಸೆಲ್ ಗಳು ಡೆವಲಪ್ ಆಗಲು, ಡಿವೈಡ್ ಆಗಲು ಶುರು ಆಗುತ್ತವೆ. ಹೀಗೆ ದೇಹದಲ್ಲಿ ಕಂಟ್ರೋಲ್ ಇಲ್ಲದ ಸೆಲ್ ಗಳ ಬೆಳವಣಿಗೆ, ಮರು ಹುಟ್ಟುವಿಕೆ, ಕಂಟ್ರೋಲ್ ಇಲ್ಲದ ಸೆಲ್ ಡಿವಿಷನ್ ಅನ್ನು ನಾವು ಕ್ಯಾನ್ಸರ್ ಅಂತ ಹೇಳಬಹುದು.
ಈಗ ಶ್ವಾಸಕೋಶದಲ್ಲಿ ಈ ತರಹ ಬೆಳವಣಿಗೆ ಕಂಡು ಬಂದರೆ ಅದು ಶ್ವಾಸಕೋಶದ ಕ್ಯಾನ್ಸರ್ ಆಗಿ ಕಂಡು ಬರುತ್ತದೆ. ಯಾಕೆ ಈ ಶ್ವಾಸಕೋಶದ ಕ್ಯಾನ್ಸರ್ ಬರುತ್ತೆ ಎಂದು ಹೇಳಲು ತುಂಬಾ ಕಾರಣಗಳು ಇವೆ. ಅದರಲ್ಲಿ ಒಂದು ಧೂಮಪಾನ ಅಂದ್ರೆ ತಂಬಾಕು ಸೇವನೆ. ನೀವು ಧೂಮಪಾನ ಮಾಡುವ ಸಮಯದಲ್ಲಿ ಅದರಲ್ಲಿ ನೂರಾರು ಅಂಶಗಳು ಇರುತ್ತವೆ, ಅದರಲ್ಲಿ ನಾವು ನಮ್ಮ ದೇಹಕ್ಕೆ ಅದನ್ನು ಸೇವನೆ ಮಾಡಬೇಕು ಅನ್ನಿಸುವುದು ನಿಕೋಟಿನ್ ಅಂಬ ಅಂಶಕ್ಕೊಸ್ಕರ. ಆ ನಿಕೋಟಿನ್ ನಮ್ಮ ಮೆದುಳಿಗೆ ಹೋಗಿ ಒಂದು ಹಾರ್ಮೋನ್ ನ್ನ ಸ್ರವಿಸುತ್ತದೆ. ಆ ಹಾರ್ಮೋನ್ ಬಿಡುಗಡೆ ಆದ ತಕ್ಷಣ ನಮಗೆ ಒಂದು ತರಹದ ಸಮಸ್ಯೆಗಳಿಂದ ಬಿಡುಗಡೆ ಆದ ಭಾವ, ಖುಷಿ, ಸಂತೋಷ, ನೆಮ್ಮದಿ ಸಿಕ್ಕಂತಹ ಅನುಭವ ಆಗುತ್ತೆ, ಇದೊಂದಕ್ಕೆ ಈಗಿನ ಜನ ಅವರ ಜೀವನ ಜಂಜಾಟಗಳ ನೆನೆದು ಅದರಿಂದ ಸ್ವಲ್ಪ ಹೊತ್ತು ಮುಕ್ತಿ ಪಡೆಯಲು ಈ ಧೂಮಪಾನಕ್ಕೆ ದಾಸರಾಗಿದ್ದಾರೆ. ಧೂಮಪಾನ ಮಾಡುವಾಗ ಕೇವಲ ಈ ನಿಕೋಟಿನ್ ಅಂಶ ದೇಹಕ್ಕೆ ಸೇರುವುದು ಜೊತೆಗೆ ಇನ್ನೂ ಅನೇಕ ವಿಷಕಾರಕ, ಭಯಾನಕ ಅಂಶಗಳು ನಮ್ಮ ಶ್ವಾಸಕೋಶಕ್ಕೆ ಸೇರುತ್ತವೆ. ಅವುಗಳು ನಮಗೆ ಕ್ಯಾನ್ಸರ್ ಉತ್ಪತ್ತಿ ಮಾಡುವ ವಿಷಕಾರಕ ಅಂಶಗಳೇ ಎನ್ನುವುದು ಬಲು ಬೇಜಾರಿನ ಸಂಗತಿ. ಇದು ತಿಳಿದೂ ಜನರು ಧೂಮಪಾನಕ್ಕೆ ನೋ ಎನ್ನುವುದನ್ನು ಬಿಡುತ್ತಿಲ್ಲ. ಹೀಗೆ ಒಳಗೆ ಹೋದ ವಿಷಕಾರಕ ಅಂಶಗಳು ನಮ್ಮ ಶ್ವಾಸಕೋಶದ ಸೇಲ್ಸ್ ಗಳನ್ನ ಹಾಳು ಮಾಡಿ, ಸೆಲ್ ಸತ್ತು ಹೋಗುವ ಅವಕಾಶದ ಹಳಿ ತಪ್ಪಿಸಿ ಬಿಡುತ್ತವೆ. ಆಗ ಶ್ವಾಸಕೋಶದಲ್ಲಿ ಕ್ಯಾನ್ಸರ್ ಉತ್ಪತ್ತಿ ಆಗುತ್ತದೆ.
ಮೇಲಿಂದ ಮೇಲೆ ಈ ಧೂಮಪಾನ ಮಾಡಿ ಮಾಡಿ, ವರ್ಷಾನುಗಟ್ಟಲೆ ಧೂಮಪಾನ ಮಾಡಿ ನಮ್ಮ ಶ್ವಾಸಕೋಶದ ಮೇಲೆ ಹೊಡೆತ ಬಿದ್ದು, ಕ್ಯಾನ್ಸರ್ ಉತ್ಪತ್ತಿ ಆಗುತ್ತೆ. ಈಗ ನಿಮಗೆ ಕ್ಯಾನ್ಸರ್ ಬಂದಿದೆ ಅಂತ ಹೇಗೆ ಗೊತ್ತು ಮಾಡುವುದು ಎಂದರೆ, ಒಂದುವೇಳೆ ನೀವು ಹತ್ತು ವರ್ಷದಿಂದ ಧೂಮಪಾನ ಮಾಡುತ್ತಿದ್ದೀರಾ ಎಂದರೆ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ ಅವು ಏನೇನು ಅಂದ್ರೆ, ನಿಮಗೆ ಗೊತ್ತಿಲ್ಲದೆ ಅಂದಾಜಿಗೆ ಸಿಗದ ಮತ್ತು ಯಾವುದೇ ಕಾರಣವಿಲ್ಲದೆ ನಿಮ್ಮ ತೂಕದಲ್ಲಿ ಇಳಿಕೆ ಕಂಡು ಬರುತ್ತದೆ. ಅದನ್ನು ಹೇಗೆ ತಿಳಿದುಕೊಳ್ಳುವುದು ಎಂದರೆ ಈಗ ನಿಮ್ಮ ತೂಕ ತಿಂಗಳಲ್ಲಿ 10 ಕೆಜಿ ಮತ್ತು ಅದಕ್ಕಿಂತ ಜಾಸ್ತಿ ಇಳಿಕೆ ಕಂಡು ಬರುತ್ತಿದೆ ಎಂದರೆ ಅದು ಈ ಕ್ಯಾನ್ಸರ್ ನ ಪ್ರಮುಖ ಲಕ್ಷಣ. ಹಾಗೆ ನಿಮಗೆ ಹೊಟ್ಟೇನೆ ಹಸಿಯುತ್ತಿಲ್ಲ ಎನ್ನುವುದು, ನಿಮಗೆ ಜಾಸ್ತಿ ಕೆಮ್ಮು ಬರ್ತಾ ಇದೆ ಅಂದ್ರೆ, ಕೆಮ್ಮಲ್ಲಿ ಸ್ವಲ್ಪ ಸ್ವಲ್ಪ ಕಫ ಬರ್ತಾ ಇದ್ರೆ, ತುಂಬಾ ಸುಸ್ತು ಆಗೋದು, ದೇಹ ದಿನದಿಂದ ದಿನಕ್ಕೆ ಶಕ್ತಿಹೀನ ಆಗ್ತಾ ಇದೆ ಅಂದ್ರೆ, ತುಂಬಾ ಗಮನೀಯ ಅಂದ್ರೆ ಕೆಮ್ಮುವಾಗ ರಕ್ತ ಬಿದ್ರೆ, ಊಟಾ ಸೆರ್ತಾ ಇಲ್ಲ ಅನ್ನೋದು ಇವೆಲ್ಲಾ ಲಕ್ಷಣಗಳು ಇದ್ದೊ ನೀವು ತುಂಬಾ ವರ್ಷಗಳಿಂದ ಧೂಮಪಾನ ಮಾಡ್ತಾ ಇದ್ದೀರಾ ಅಂದ್ರೆ ನಿಮಗೆ ಶ್ವಾಸಕೋಶದ ಕ್ಯಾನ್ಸರ್ ಇರಬಹುದು ಎಂದು ಸಂಶಯ ಪಡಬೇಕಾದ ವಿಷಯ. ಸಾಮಾನ್ಯವಾಗಿ ಈ ಕ್ಯಾನ್ಸರ್ ಮಧ್ಯ ವಯಸ್ಕರಿಗೆ ಹಾಗೂ ವಯಸ್ಸಾದವರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಣ್ಣ ಮಕ್ಕಳಲ್ಲಿ ಹಾಗೂ ಟೀನ್ ಏಜ್ ಅವರಿಗೆ ಕಾಣಿಸಿಕೊಳ್ಳುವುದು ಅತೀ ವಿರಳ. ನೊಡಿದಿರಲ್ಲಾ ಸ್ನೇಹಿತರೆ, ಇವೆಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ದಯವಿಟ್ಟು ತಪ್ಪದೇ ಒಮ್ಮೆ ನಿಮ್ಮ ವೈದ್ಯರ ಬಳಿ ಸಲಹೆ ತೆಗೆದುಕೊಂಡು, ಧೂಮಪಾನ ಬಿಡುವುದು ನಿಮಗೇ ಒಳ್ಳೆಯದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.