ನ್ಯಾಷಿನಲ್ ಆನಿಯನ್ ಅಸೋಸಿಯೇಷನ್ ಪ್ರಕಾರ , ಈ ಪರಿಹಾರವು ೧೩೦೦ ರ ದಶಕದಷ್ಟು ಹಿಂದೆಯೇ ಹುಟ್ಟಿಕೊಂಡಿದೆ. ಈರುಳ್ಳಿಗಳು ಸಲ್ಫ್ಯೂರಿಕ್ ಕಾಂಪೌಂಡ್ಸ್ ಗಳಲ್ಲಿ ಸಮೃದ್ಧವಾಗಿದ್ದು , ಕಾಲಿಗೆ ಕಟ್ಟಿ ಮಲಗಿದರೆ ತನ್ನ ಕಟುವಾದ ವಾಸನೆಯಿಂದ ಸಂಯುಕ್ತಗಳು ದೇಹವನ್ನು ನುಸುಳುತ್ತವೆ.
ನಂತರ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಕೊಂದು ರಕ್ತವನ್ನು ಶುದ್ಧೀಕರಿಸುತ್ತದೆ . ಇನ್ನು ನಾವು ಉಸಿರಾಡುವ ಗಾಳಿಯಲ್ಲಿ ಹಲವು ವೈರಸ್ ಗಳು ಇರುತ್ತವೆ. ನಿಮ್ಮ ಮನೆಯ ಕೋಣೆಯ ಮೂಲೆಯಲ್ಲಿ ಈರುಳ್ಳಿ ಇಡುವುದರಿಂದ ವೈರಸ್ ಗಳು, ಜೀವಾಣು ಮತ್ತು ರಾಸಾಯನಿಕಗಳ ಗಾಳಿಯನ್ನು ವಿಮುಕ್ತಿಗೊಳಿಸಿ ಗಾಳಿಯನ್ನು ಶುದ್ಧಗೊಳಿಸುತ್ತದೆ.
ಇನ್ನು ನಮ್ಮ ಪಾದಕ್ಕೆ ಪ್ರತಿದಿನ ಹಲವು ಬ್ಯಾಕ್ಟೀರಿಯಾಗಳು ಆಕ್ರಮಣ ಮಾಡುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ತಳಪಾದಕ್ಕೆ ಈರುಳ್ಳಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಕಟ್ಟಿಕೊಂಡರೆ ದೇಹದೊಳಗೆ ವಿಷಕಾರಿ ಅಂಶ ಪ್ರವೇಶಿಸುವುದಿಲ್ಲ. ಈ ಉಪಾಯದಿಂದ ಶೀತ ಕೂಡ ಕಡಿಮೆಯಾಗುತ್ತದೆ.
ಇನ್ನು ಕಿವಿ ನೋವಿದ್ದರೆ, ಈ ಉಪಾಯ ಮಾಡಿದರೆ ಕಿವಿ ನೋವು ಶಮನವಾಗುತ್ತದೆ. ಈ ಉಪಾಯದಿಂದ ಹೊಟ್ಟೆಯೊಳಗಿನ ಆಮ್ಲ ತೆಗೆದು ಹಾಕುತ್ತದೆ. ಇದರಿಂದ ಊದಿಕೊಂಡಿರುವ ಗ್ರಂಥಿಯು ಮೊದಲಿನ ಸ್ಥಿತಿಗೆ ಬರುತ್ತವೆ. ಕಾಲಿನ ದುರ್ವಾಸನೆ ನಿವಾರಣೆಗೂ ಇದು ಉತ್ತಮ. ಹೊಟ್ಟೆ ಸೋಂಕು , ಮೂತ್ರ ಪಿಂಡದ ಕಲ್ಲು ನಿವಾರಣೆಯಾಗುತ್ತದೆ.