ನಾವು ತಯಾರು ಮಾಡುವ ಸಾಂಬಾರ್ ಗೆ ಬೂದುಗುಂಬಳಕಾಯಿ ಬಳಕೆ ಮಾಡುತ್ತೇವೆ, ಬೂದುಗುಂಬಳ ಕಾಯಿ ಪಲ್ಯ, ಬೂದುಗುಂಬಳಕಾಯಿ ಸೂಪ್ ನಮ್ಮ ಆಹಾರ ಪದ್ಧತಿಯಲ್ಲಿ ಇವೆ. ಆದರೆ ನಮಗೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಮಾಹಿತಿ ಕಡಿಮೆ ಇದೆ. ಏಕೆಂದರೆ ಇಂದು ನಮ್ಮಲ್ಲಿ ಹಲವರಿಗೆ ಬೂದುಗುಂಬಳಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲಾಗುವ ಒಳ್ಳೆಯ ಬದಲಾವಣೆಗಳು ಯಾವುವು ಎಂಬ ಸತ್ಯ ತಿಳಿದಿಲ್ಲ. ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ತರಕಾರಿಯೆಂದರೆ ಅದು ಬೂದುಗುಂಬಳಕಾಯಿ.ಇದರಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್-ಸಿ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣದ ಅಂಶ ಮತ್ತು ಫಾಸ್ಫರಸ್ ಅಂಶ ಜೊತೆಗೆ ನಾರಿನ ಅಂಶ ಕೂಡ ಇದರಲ್ಲಿ ಹೆಚ್ಚು ಸಿಗುತ್ತದೆ. ಬೂದುಗುಂಬಳಕಾಯಿ ತಿನ್ನುವುದರಿಂದ ಉಂಟಾಗುವ ಇನ್ನಿತರ ಆರೋಗ್ಯ ಪ್ರಯೋಜನಗಳು ಈ ರೀತಿ ಇವೆ.
ಬೂದುಗುಂಬಳಕಾಯಿಯಲ್ಲಿ ನೀರಿನ ಅಂಶ ಅಪಾರ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಹೊಟ್ಟೆಯ ಭಾಗದಲ್ಲಿ ಉಂಟಾಗುವ ಹಣ್ಣುಗಳನ್ನು ಇದು ನಿವಾರಣೆ ಮಾಡುತ್ತದೆ ಎಂದು ಹೇಳಬಹುದು. ಅಷ್ಟೇ ಅಲ್ಲದೆ ಕರುಳಿನ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿ ಆಮ್ಲೀಯತೆಯ ಪ್ರಭಾವವನ್ನು ತಪ್ಪಿಸುತ್ತದೆ. ಅತಿ ಹೆಚ್ಚು ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ಮತ್ತು ದೀರ್ಘಕಾಲ ಉಪವಾಸ ಮಾಡುವುದರಿಂದ, ನೀರು ಕಡಿಮೆ ಕುಡಿಯುವುದರಿಂದ ಹೊಟ್ಟೆಯಲ್ಲಿ ಹುಣ್ಣುಗಳು ಕಂಡುಬರುತ್ತವೆ. ಬೂದುಗುಂಬಳಕಾಯಿ ಹೊಟ್ಟೆಯಲ್ಲಿ ಕಂಡುಬರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ದೂರ ಮಾಡಿ ಕರುಳಿನ ಭಾಗದಲ್ಲಿ ಆಂಟಿ ಮೈಕ್ರೋಬಿಯಲ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಇದರಿಂದ ಹೊಟ್ಟೆಯ ಭಾಗದಲ್ಲಿ ಕಂಡುಬರುವ ಜೀರ್ಣನಾಳದ ಸೋಂಕು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಮೊದಲೇ ಹೇಳಿದಂತೆ ಬೂದುಗುಂಬಳಕಾಯಿಯಲ್ಲಿ ನಾರಿನಂಶ ಅಪಾರ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರ ಜೊತೆಗೆ ನೀರಿನ ಅಂಶ ಕೂಡ ಇರುವುದರಿಂದ ಕ್ಯಾಲೋರಿ ಅಂಶಗಳನ್ನು ಹೆಚ್ಚಾಗಿ ಹೊಂದಿದ ಆಹಾರಗಳಿಗೆ ಪರ್ಯಾಯವಾಗಿ ಬೂದುಗುಂಬಳಕಾಯಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬಹುದು. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಸಿಗುವುದರ ಜೊತೆಗೆ ಕ್ರಮೇಣವಾಗಿ ದೇಹದ ತೂಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಈಗಾಗಲೇ ಕಡಿಮೆ ದೇಹದ ತೂಕವನ್ನು ಹೊಂದಿರುವವರಿಗೆ ಅತ್ಯುತ್ತಮವಾದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉಂಟಾಗುವಂತೆ ಮಾಡಿ ಎಲ್ಲರಂತೆ ಸಹಜವಾದ ದೈಹಿಕ ತೂಕವನ್ನು ಹೊಂದಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ.