WhatsApp Group Join Now

ಏಪ್ರಿಲ್, ಮೇ ತಿಂಗಳಿನಲ್ಲಿ ಕೊರೊನಾ ಅಂಕಿ-ಅಂಶ ಭಯ ಹುಟ್ಟಿಸಿದೆ. ಇದ್ರ ಮಧ್ಯೆ ಸ್ವಲ್ಪ ನೆಮ್ಮದಿ ಸುದ್ದಿಯೂ ಇದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 25 ಸಾವಿರದವರೆಗೆ ಕಡಿಮೆಯಾಗಿದೆ. ಕೊರೊನಾ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿವೆ. ಈಗ ನಡೆದ ಸಂಶೋಧನೆಯಲ್ಲಿ ಕೊರೊನಾ ಯಾರನ್ನು ಹೆಚ್ಚು ಕಾಡಲಿದೆ ಎಂಬ ಬಗ್ಗೆ ಹೇಳಲಾಗಿದೆ.

ಎಬಿ ಮತ್ತು ಬಿ ರಕ್ತ ಗುಂಪುಗಳ ಜನರು ಉಳಿದ ರಕ್ತ ಗುಂಪುಗಳಿಗಿಂತ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಹೇಳಲಾಗಿದೆ. ಇದು ಸಮೀಕ್ಷೆಯ ಮಾದರಿ ಮಾತ್ರ. ಈ ಬಗ್ಗೆ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳಿಲ್ಲ. ಓ ರಕ್ತ ಗುಂಪಿನ ಜನರು ಸೋಂಕಿನ ವಿ-ರು-ದ್ಧ ಹೋರಾಡಲು ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳುವುದು ಆತುರದ ಹೇಳಿಕೆಯಾಗುತ್ತದೆ. ಇದ್ರ ಬಗ್ಗೆ ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆಯಬೇಕೆಂದು ಸಿಎಸ್‌ಐಆರ್‌ನ ಈ ಸಮೀಕ್ಷೆಯಲ್ಲಿ ಹಿರಿಯ ವೈದ್ಯ ಡಾ.ಎಸ್‌.ಕೆ. ಕಲ್ರಾ ಹೇಳಿದ್ದಾರೆ.

ಕೊರೊನಾ ಸೋಂಕಿತರಲ್ಲಿ ಹೆಚ್ಚಿನ ಜನರು ಎಬಿ ರ-ಕ್ತ ಗುಂಪಿನವರಾಗಿದ್ದಾರೆ. ಇದರ ನಂತರ ಕೊರೊನಾ ಸೋಂಕು ಬಿ ರ-ಕ್ತ ಗುಂಪಿನವರನ್ನು ಕಾಡಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಇದೇ ವೇಳೆ ಸಸ್ಯಹಾರಿ ಆಹಾರ ಸೇವನೆ ಮಾಡುವವರ ಮೇಲೆ ವೈರಸ್ ದಾ-ಳಿ ಕಡಿಮೆ. ದಾ-ಳಿ ಮಾಡಿದ್ರೂ ರೋಗಿಯ ಸ್ಥಿತಿಯು ಗಂಭೀರವಾಗುವುದಿಲ್ಲವೆನ್ನಲಾಗಿದೆ.

ಸಸ್ಯಹಾರಿಗಳಿಗಿಂತ ಮಾಂಸಹಾರಿಗಳಿಗೆ ಕೊರೊನಾ ಸೋಂಕು ಹೆಚ್ಚು ಕಾಡಲಿದೆ. ಸುಮಾರು 10 ಸಾವಿರ ಜನರ ಮೇಲೆ ನಡೆದ ಅಧ್ಯಯನದಲ್ಲಿ ಇದನ್ನು ಹೇಳಲಾಗಿದೆ. ಸಸ್ಯಹಾರಿ ಆಹಾರವು ಹೆಚ್ಚು ನಾರಿನಂಶದಿಂದ ಕೂಡಿರುತ್ತದೆ. ಹಾಗಾಗಿ ಸೋಂಕಿನ ಅಪಾಯ ಕಡಿಮೆ ಎನ್ನಲಾಗಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *