ನಮಸ್ತೆ ಪ್ರಿಯ ಓದುಗರೇ, ಬದನೆಕಾಯಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನ ಇದೆ ಎಂದು ಪರಿಗಣಿಸಲಾಗುತ್ತದೆ. ಆದ್ರೆ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಗಳು ನಮಗೆ ಇದ್ದಾಗ ಆಗ ನಾವು ಬದನೆಕಾಯಿಯನ್ನು ಸೇವನೆ ಮಾಡುವುದನ್ನು ತಪ್ಪಿಸಬೇ ಕಾಗುತ್ತದೆ. ಹಾಗಿದ್ರೆ ಯಾವ ಅರೋಗ್ಯದ ತೊಂದರೆಗಳು ನಿಮಗೆ ಇದ್ರೆ ಬದನೆಕಾಯಿಯನ್ನು ಸೇವಿಸಬಾರದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಸ್ನೇಹಿತರೆ ಬಹುತೇಕ ಎಲ್ಲಾ ಆಯುರ್ವೇದಿಕ್ ವೈದ್ಯರು ಕೂಡ ನೀವು ಯಾವುದಾದರೂ ಒಂದು ಆರೋಗ್ಯ ಸಮಸ್ಯೆಯ ಪರಿಹಾರಕ್ಕೆ ಮಾತ್ರೆಯನ್ನು ತೆಗೆದುಕೊಳ್ಳುತ್ತಾ ಇದ್ದರೆ ಅವರು ಏನಾದರೂ ನಿಮಗೆ ಪಥ್ಯ ಹೇಳಿದರೆ ಅದರಲ್ಲಿ ಬದನೆಕಾಯಿಯನ್ನು ಕೂಡ ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಈ ರೀತಿ ಹೇಳಲು ತುಂಬಾ ಕಾರಣ ಇದೆ. ಯಾಕೆಂದ್ರೆ ಬದನೆಕಾಯಿ ಎಲ್ಲರಿಗೂ ಒಳ್ಳೆಯದಲ್ಲ. ಇದು ಕೇವಲ ಯಾವಾಗಲಾದರೂ ಒಮ್ಮೆ ಸೇವನೆ ಮಾಡುವುದಕ್ಕೆ ಯಾವುದೇ ರೀತಿಯಾಗಿ ತೊಂದರೆ ಇರುವುದಿಲ್ಲ. ಆದ್ರೆ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಗಳು ನಿಮಗೆ ಇದ್ದಾಗ ನೀವು ಬದನೆಕಾಯಿಯ ಸೇವನೆ ಮಾಡುವುದನ್ನು ತಪ್ಪಿಸಬೇಕು.

ಉದಾಹರಣೆಗೆ ನಿಮಗೇನಾದರೂ ಚರ್ಮ ರೋಗದ ಸಮಸ್ಯೆ ಇದ್ದರೆ ನೀವು ಬದನೆಕಾಯಿಯನ್ನು ಸೇವಿಸದೇ ಇರುವುದು ಒಳ್ಳೆಯದು. ಯಾಕೆಂದ್ರೆ ಬದನೆಕಾಯಿ ಸೇವನೆ ಮಾಡುವುದರಿಂದ ನಿಮಗೆ ತುರಿಕೆ ಮತ್ತು ಇನ್ನಿತರ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗಾಗಿ ಚರ್ಮ ಸಂಬಂಧಿ ಕಾಯಿಲೆ, ಸಮಸ್ಯೆ, ದೇಹದಲ್ಲಿ ತುರಿಕೆ ಇದ್ದರೆ, ಸೋರಿಯಾಸಿಸ್ ಎಂಬ ರೋಗ ಇತ್ತು ಎಂದರೆ ನೀವು ಬದನೆಕಾಯಿಯನ್ನು ಸೇವಿಸದೇ ಇರುವದು ಒಳಿತು. ಇನ್ನೂ ಗರ್ಭಿಣಿ ಮಹಿಳೆಯರೂ ಕೂಡ ಬದನೆಕಾಯಿಯನ್ನು ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಯಾಕೆಂದ್ರೆ ಬದನೆಕಾಯಿ ಮೂತ್ರವರ್ಧಕ ಗುಣಗಳು ಇರುವುದರಿಂದ ಸಾಮಾನ್ಯವಾಗಿ ಮಹಿಳೆಯರಲ್ಲಿ ಋತು ಸ್ರಾವವನ್ನು ಹೆಚ್ಚು ಮಾಡುವ ಗುಣ ಲಕ್ಷಣಗಳನ್ನೂ ಹೊಂದಿರುತ್ತದೆ. ಹಾಗಾಗಿ ಗರ್ಭಿಣಿಯರು ಬದನೆಕಾಯಿಯನ್ನು ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಒಂದುವೇಳೆ ಗರ್ಭಿಣಿಯರು ಈ ಬದನೆಕಾಯಿ ಸೇವನೆ ಮಾಡಿದರೆ ಹೊಟ್ಟೆಯಲ್ಲಿ ಹಾಗೂ ಕರುಳಿನ ಭಾಗದಲ್ಲಿ ಹಲವಾರು ರೀತಿಯ ಅರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಾಗಿ ಗರ್ಭಿಣಿ ಮಹಿಳೆಯ ರು ಸೇವನೆ ಮಾಡಬಾರದು ಎಂದು ಹೇಳುತ್ತಾರೆ.

ಇನ್ನೂ ನೀವೇನಾದರೂ ಮಾನಸಿಕ ಕಾಯಿಲೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ ಅಂದ್ರೆ ಖಿನ್ನತೆಗೆ ಔಷಧಿ ತೆಗೆದುಕೊಳ್ಳುತ್ತಾ ಇದ್ದರೆ, ನೀವು ಬದನೆಕಾಯಿಯನ್ನು ಸೇವನೆ ಮಾಡದೇ ಇರುವುದು ಒಳ್ಳೆಯದು. ಯಾಕೆಂದ್ರೆ ಬದನೆಕಾಯಿ ಸೇವನೆ ಮಾಡುವುದರಿಂದ ಔಷಧದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ನೀವೇನಾದರೂ ಖಿನ್ನತೆಗೆ ಒಳಗಾಗಿದ್ದ ರೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇದ್ದರೆ ಬದನೆಕಾಯಿಯನ್ನು ಸೇವಿಸದೇ ಇರುವದು ಒಳಿತು. ಇನ್ನೂ ನಿಮಗೇನಾದ್ರೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಇದ್ದರೆ ಬದನೆಕಾಯಿ ಯ ಸೇವನೆಯನ್ನು ತಪ್ಪಿಸಿ. ಇಲ್ಲದಿದ್ದರೆ ಹೊಟ್ಟೆ ನೋವು, ವಾಂತಿ, ತಲೆನೋವು ಹೆಚ್ಚಾಗುತ್ತದೆ. ಇನ್ನೂ ಕೆಲವರಿಗೆ ಈ ಬದನೆಕಾಯಿ ಸೇವನೆ ಮಾಡುವುದರಿಂದ ಅಲರ್ಜಿ ಇನ್ನೂ ಕೆಲವರಿಗೆ ಗಂಟಲಿನ ಭಾಗದಲ್ಲಿ ಕಿರಿ ಕಿರಿ ಉಂಟು ಮಾಡುವ ಜೊತೆಗೆ ಗಂಟಲು ಊತಕ್ಕು ಕೂಡ ಕಾರಣ ಆಗಬಹುದು. ಒಂದುವೇಳೆ ನಿಮಗೇನಾದರೂ ಇಂತಹ ಲಕ್ಷಣಗಳು ಕಂಡು ಬಂದರೆ ಆದಷ್ಟೂ ಬದನೆಕಾಯಿಯನ್ನು ಸೇವನೆ ಮಾಡದೇ ಇರುವುದು ಒಳ್ಳೆಯದು. ನೊಡಿದ್ರಲ್ವ ಸ್ನೇಹಿತರೆ ಯಾರು ಯಾರು ಬದನೆಕಾಯಿ ಸೇವನೆ ಮಾಡಬಾರದು ಅಂತ. ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *