ನಮಸ್ತೆ ನಮ್ಮ ಆತ್ಮೀಯ ಓದುಗರೇ, ಸಕ್ಕರೆ ಕಾಯಿಲೆ ತನ್ನ ಗುಣ ಲಕ್ಷಣಗಳನ್ನು ಅನೇಕ ತೆರನಾಗಿ ತೋರ್ಪಡಿಸುತ್ತದೆ. ರೋಗಿಯ ವಯಸ್ಸು ಮತ್ತು ರೋಗದ ಪ್ರಾರಂಭಿಕ ಹಂತದಲ್ಲಿ ಗೋಚರಿಸುವ ಗುಣ ಲಕ್ಷಣಗಳು ಅವರಲ್ಲಿರುವ ಸಕ್ಕರೆ ಕಾಯಿಲೆ ರೂಪದ ಚಿತ್ರವನ್ನು ನೀಡುತ್ತವೆ. ಮಕ್ಕಳಲ್ಲಿ, ಹರೆತನದಲ್ಲಿ ಮತ್ತು ಕಡಿಮೆ ತೂಕದ ಏಳೆ ವಯಸ್ಕರಲ್ಲಿ ಮತ್ತು ಕೆಲವು ವಯಸ್ಕರಲ್ಲಿ ರೋಗದ ಮೂರು ಮುಖ್ಯ ಲಕ್ಷಣಗಳಾದ ಅತಿಮೂತ್ರ, ವಿಪರೀತ ನೀರಡಿಕೆ ಮತ್ತು ಹೆಚ್ಚಿದ ಹಸಿವೆ ತೋರಿ ಬರುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಮೂತ್ರ ಪಿಂಡದ ಸೋಸು ಮಟ್ಟವನ್ನು ದಾಟಿದ ಮೇಲೆ ಅದರ ಜಾಲರಿ ಮೂಲಕ ಸೋಸಿ ಹೋಗುವುದರಿಂದ ಅದು ತನ್ನೊಟ್ಟಿಗೆ ನೀರನ್ನು ಸೆಳೆದು ಕೊಳ್ಳುವುದರಿಂದ ಮೂತ್ರ ವಿರ್ಜನೆಯನ್ನು ಪದೇ ಪದೇ ಮಾಡಬೇಕಾಗುತ್ತದೆ. ರಾತ್ರಿಯ ವೇಳೆಯಲ್ಲಿ ಮಲಗಿದ ನಂತರ ಅನೇಕ ಬಾರಿ ಮೂತ್ರ ವಿಸರ್ಜನೆಗೆ ಏಳಬೇಕಾಗುತ್ತದೆ. ದೇಹದಿಂದ ಈ ರೀತಿ ನೀರು ಮತ್ತು ಲವಣದಂಶಗಳು ವಿಸರ್ಜಿಸಲ್ಪಡುವುದರಿಂದ ನೀರಿಗಾಗಿ ದಾಹ ಹೆಚ್ಚುತ್ತದೆ. ದೇಹದಲ್ಲಿನ ದ್ರವ ಕರಗಿ ನೆಣ ಮತ್ತು ಸ್ನಾಯು ವೇಗ ಗತಿಯಿಂದ ಭಗ್ನಗೊಳ್ಳುವುದರಿಂದ ಅವರ ತೂಕ ಇಳಿದು ದೇಹ ಬಡಕಲಾಗುತ್ತದೆ. ಅವರು ಹೆಚ್ಚು ಆಹಾರ ಸೇವಿಸಿದರೂ ಇನ್ಸುಲಿನ್ ಕೊರತೆಯಿಂದ ಅದನ್ನು ಬಳಸಿಕೊಳ್ಳುವ ಸಾಮರ್ಥ್ಯ ಇಲ್ಲವಾಗಿರುವುದರಿಂದ ತೂಕ ಇಳಿಯುವುದು, ಸುಸ್ತು, ಬಲಹೀನತೆ ಕಾಲುನೋವು, ಕಾಲು ಸೇದಿಕೆ, ಜೋಮು, ಜೋಲಿ, ಮುಸುಕು ದೃಷ್ಟಿ, ಸಮೀಪ ದೃಷ್ಟಿದೋಷದ ರೋಗದ ತೊಡಕಾಗಿ ನಂತರ ಗೋಚರಿಸುತ್ತದೆ.

ಅಪರೂಪವಾಗಿ ಕೆಲವರು ರೋಗದ ತೀವ್ರತಯನ್ನು ಲಕ್ಷಣಗಳ ರೂಪದಲಿ ಪದೇ ಪದೇ ಮೂತ್ರ ವಿಸರ್ಜನೆ, ಹೊಟ್ಟೆ ನೋವು, ವಾಂತಿ, ಒಣಗಿದ ದೇಹ, ಬಲಹೀನತೆ, ಮಂಪರು, ಸ್ಮರ್ಥಿ ಕಳೆತವನ್ನು ತೋರ್ಪಡಿಸುತ್ತದೆ. ವಯಸ್ಕರಲ್ಲಿ ಮತ್ತು ವೃದ್ಧರಲ್ಲಿ ಸಕ್ಕರೆ ಕಾಯಿಲೆ ರೋಗ ಲಕ್ಷಣಗಳು ನಿಧಾನವಾಗಿ ಬೆಳವಣಿಗೆ ಹೊಂದುತ್ತವೆ. ಅನೇಕರಲ್ಲಿ ಬೇರೆ ಯಾವುದೇ ಕಾರಣಕ್ಕಾಗಿ ಮೂತ್ರ ಪರೀಕ್ಷೆ ಮಾಡಿದಾಗ ಅಲ್ಲಿ ಸಕ್ಕರೆ ಇರುವುದು ಗೋಚರಿಸುಬಹುದು ಅವರ ರಕ್ತ ಪರೀಕ್ಷೆ ಕಾಲದಲ್ಲಿ ರಕ್ತ ದ್ರವದಲ್ಲಿ ಸಕ್ಕರೆ ಮಟ್ಟ ಏರಿರುವುದು ಸಕ್ಕರೆ ರೋಗವಿರುವುದರ ಕುರುಹಾಗಿ ತೋರುತ್ತದೆ. ಮತ್ತೆ ಕೆಲವರು ಆಕಾರಣವಾಗಿ ಸುಸ್ತು, ತೂಕದ ಇಳಿಕೆ, ಕಾಲು ಸೆದಿಕೆ, ಜೋಮಿಗಾಗಿ ಪರೀಕ್ಷೆ ಮಾಡಿದಾಗ ಸಕ್ಕರೆ ಕಾಯಿಲೆ ಇರುವುದು ಗೋಚರಿಸಬಹುದು. ದೇಹದಲ್ಲಿ ಗೋಚರಿಸಿದ ಹುಣ್ಣು ಮಾಯುವಿಕೆ ನಿಧನಾಗೊಳ್ಳುವುದು. ಪದೇ ಪದೇ ಕೀವುಗುಳ್ಳೆ, ಕುರು, ರಾಜ ಕುರು, ತೋರಿರಬಹುದು. ಸ್ತ್ರೀ ಹೊರ ಜನಾಂಗದಲ್ಲಿ ತುರಿಕೆ, ಗರ್ಭ ತೆಳೆದಾಗ ತೊಂದರೆ, ಪುರುಷನ ಮುಂದೊಗಲು ಉರಿಯೂತ. ಶಂಡತ್ವ, ನರದೌರ್ಬಲ್ಯ, ದೃಷ್ಟಿ ದೋಷ, ಕಿರೀಟ ಧಮನಿ, ಪರಿಧಿಯ ಇಲ್ಲವೇ ಮಿದುಳ ರಕ್ತ ನಾಳಗಳ ರೋಗಗಳಲ್ಲಿ ಪರೀಕ್ಷೆ ಮಾಡಿದಾಗ ಸಕ್ಕರೆ ಕಾಯಿಲೆ ಇರುವುದು ದೃಢ ಪಡುತ್ತದೆ.

ಅನೇಕ ಬಾರಿ ಮೂತ್ರದ ಸುತ್ತ ಇರುವೆಗಳು ಒಗ್ಗುಡುವುದು ಮತ್ತು ಒಳ ಉಡುಪಿನಲ್ಲಿ ಬಿಳಿ ಕಲೆಗಳು ಮೂತ್ರ ಸಿಡಿದ ಸ್ಥಳಗಳಲ್ಲಿ ಗೋಚರಿಸುತ್ತವೆ. ನಾರು ಹಟ್ಟಿ ಹರಳು ರೂಪುಗೊಂಡ ಪ್ರಂಕ್ರಿಯಸಿನ ರೋಗದಲ್ಲಿ ರಕ್ತ ದ್ರವದಲ್ಲಿ ಗ್ಲೂಕೋಸ್ ಮಟ್ಟ ಏರಿರುವ ಲಕ್ಷಣಗಳು ಗೋಚರಿಸುವ ಪೂರ್ವದಲ್ಲಿ ಪದೇ ಪದೇ ಹೊಟ್ಟೆನೋವು,ಅಪಚನ, ಹೆಚ್ಚು ಪ್ರಮಾಣದಲ್ಲಿ ಮಲ ವಿಸರ್ಜನೆ ತೋರಿ ಬರುತ್ತದೆ. ಹೊಟ್ಟೆಯ ಎಕ್ಸ್ ಕಿರಣ ಚಿತ್ರ ತೆರೆದಾಗ ಕಲ್ಲು ಗೋಚರಿಸುವುದು. ಎಳೆತನದಲ್ಲಿ ಪ್ರೊಟೀನ್ ಕೊರತೆ ಇಂದ ಚಿಕ್ಕ ವಯಸ್ಸಿನಲ್ಲಿ ಉದ್ಭವಿಸುವ ಸಕ್ಕರೆ ಕಾಯಿಲೆಯಲ್ಲಿ ವ್ಯಕ್ತಿ ಕುಂಠಿತ ಬೆಳವಣಿಗೆ, ಸಣಕಲಾದ ದೇಹ, ನಿತ್ರಾಣ, ವಿಪರೀತ ಹಸಿವೆ, ಚರ್ಮದ ಉರಿತ, ಜೋಮು, ಕಾಲುಸೇದಿಕೆ, ಮುಟ್ಟು ತಡೆ, ತೋರಿಬರುತ್ತದೆ. ಅಂತಹ ರೋಗ ಸಾಮಾಜಿಕವಾಗಿ ಆರ್ಥಿಕವಾಗಿ ಕೆಳವರ್ಗಕ್ಕೆ ಸೇರಿದವರಲ್ಲಿ ತೋರಿ ಬರುತ್ತದೆ. ಇವೆರೆಡೂ ಬಗೆಯ ರೋಗಗಳಲ್ಲಿ ಕಿವಿ ಪಕ್ಕದ ಜೊಲ್ಲು ಗ್ರಂಥಿಗಳು ದೊಡ್ಡದಾಗಿರುತ್ತವೆ. ಮಧ್ಯ ವಯಸ್ಕ ರೋಗಿಗಳು ಬೊಜ್ಜಿನಿಂದ ಕೂಡಿದ ಸ್ಥೂಲದೆಹ ಹೊಂದಿರುತ್ತಾರೆ. ಶುಭದಿನ.

Leave a Reply

Your email address will not be published. Required fields are marked *