WhatsApp Group Join Now

ನಮ್ಮ ದೇಶದಲ್ಲಿ ಒಂದು ಕೆಜಿ ಕೋಳಿಯ ಬೆಲೆ ಸುಮಾರು 200 ರೂಪಾಯಿ ಒಂದು ಕೋಳಿಯ ಬೆಲೆ 200 ರಿಂದ 400 ರೂಪಾಯಿ. ಆದರೆ ಈ ಕೋಳಿಯ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿಗಳು. ಆಶ್ಚರ್ಯ ಆಗುತ್ತಾ ಇದೆಯಲ್ಲ ಹಾಗಾದರೆ ಈ ಕೋಳಿಗೆ ಅಷ್ಟು ಬೆಲೆ ಯಾಕೆ. ಅಷ್ಟಕ್ಕೂ ಈ ಕೋಳಿಯ ವಿಶೇಷತೆ ಏನು ಎಂದು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ ಸ್ನೇಹಿತರೆ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಅಯಾನ್ ಚಿಮಿಣಿ ಎಂಬ ಹೆಸರಿನ ಕೋಳಿಗಳು ಇವೆ. ಇವುಗಳನ್ನು ಲೇಮೋರ್ಗಿನಿ ಕೋಳಿಗಳು ಅಂತಾನೂ ಕರೆಯುತ್ತಾರೆ. ಅದಕ್ಕೆ ಕಾರಣ ಕೋಳಿಯ ಬೆಲೆ ಈ ಕೋಳಿಗಳು ಕಪ್ಪು ಬಣ್ಣದಲ್ಲಿ ಇದ್ದ ಕಾರಣ ಅಂದರೆ ಕೆಲವು ಭಾಗ ಮಾತ್ರ ಕಪ್ಪು ಅಲ್ಲ ಎಲ್ಲಾ ಕಪ್ಪು. ಕೋಳಿಯ ರೆಕ್ಕೆ ಕಣ್ಣು ಅಷ್ಟೇ ಅಲ್ಲದೆ ಒಳಗೆ ಇರುವ ಮಾಂಸ ಕೂಡ ಕಪ್ಪುದು. ಇದೇ ಈ ಕೋಳಿಗಳ ವೈಶಿಷ್ಟ್ಯತೆ.

ಅಷ್ಟು ಬೆಲೆ ಕೊಟ್ಟು, ಈ ಕೋಳಿಗಳನ್ನು ಖರೀದಿ ಮಾಡಲು ಕಾರಣ ಏನು ಗೊತ್ತಾ. ಕೋಳಿಯ ವಹಿಸಕ್ಕೆ ತಕ್ಕಂತೆ ಅದರ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಹೆಚ್ಚು ವಯಸ್ಸಿನ ಕೋಳಿಗೆ ಹೆಚ್ಚು ಬೆಲೆ ಎರಡು ಲಕ್ಷ ಬೆಲೆಯ ಕೋಳಿಗಳ ಸುಮಾರು ಒಂದು ಪಾಯಿಂಟ್ ಐದರಿಂದ ಎರಡು ಕೆಜಿ ಇರುತ್ತದೆ. ಇದರ ಮೂಲ ಇಂಡೋನೇಷಿಯಾಗಿದ್ದು ಅಲ್ಲಿನ ಕೋಳಿಗೆ ಮಾತ್ರ ಈ ಬೆಲೆ ಸಿಗುತ್ತದೆ. ಈ ಕೋಳಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲದೆ ಆರೋಗ್ಯಕರವಾಗಿ ತುಂಬಾ ಒಳ್ಳೆಯದು. ಈ ಕೋಳಿಯ ಮಾಂಸದಲ್ಲಿ ಐರನ್ ಕಂಟೆಂಟ್ ಹೆಚ್ಚಾಗಿರುತ್ತದೆ. ಇವುಗಳನ್ನು ಹೆಚ್ಚಾಗಿ ಗರ್ಭಿಣಿಯರು ಹಾಗೂ ಬಾಣಂತಿಯರು ತಿನ್ನುತ್ತಾರೆ. ಗರ್ಭಿಣಿಯರು ಈ ಕೋಳಿಯನ್ನು ತಿಂದರೆ ಹುಟ್ಟುವ ಮಗು ತುಂಬಾ ಆರೋಗ್ಯವಾಗಿ ಹುಟ್ಟುತ್ತದೆ ಅಂತ ಅಲ್ಲಿ ನಂಬುತ್ತಾರೆ. ಈ ಕೋಳಿಗೆ ಮಲೇಶಿಯಾ ಸಿಂಗಾಪುರ್ ಅಮೇರಿಕಾ ಹಾಗೂ ಇತರೆ ದೇಶಗಳಲ್ಲಿ ಭಾರಿ ಬೇಡಿಕೆ ಇದೆ.

WhatsApp Group Join Now

Leave a Reply

Your email address will not be published. Required fields are marked *