ನಮಸ್ತೆ ಪ್ರಿಯ ಓದುಗರೇ, ಗ್ಯಾಸ್ಟ್ರಿಕ್ ಸಮಸ್ಯೆ, ಈ ಸಮಸ್ಯೆಯು ಹಲವಾರು ಕಾರಣಗಳಿಂದ ಬರಬಹುದು ಅದುವೇ ನೀವು ಮಿತಿಮೀರಿ ಆಹಾರ ಸೇವನೆ ಮಾಡುವುದರಿಂದ ಅಥವಾ ಹೆಚ್ಚಾಗಿ ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹೀಗೆ ಹಲವಾರು ಕಾರಣಗಳಿಂದ ಈ ಸಮಸ್ಯೆ ಬರಬಹುದು. ಹಾಗಾಗಿ ಈ ಸಮಸ್ಯೆಯು ಇನ್ನಿತರ ಹಲವಾರು ಸಮಸ್ಯೆಗಳಾದ ಹೊಟ್ಟೆ ಉಬ್ಬರ ಹೊಟ್ಟೆ ಭಾರ ಹಸಿವು ಆಗದೆ ಇರುವುದು ಹೀಗೆ ಹಲವಾರು ಬಗೆಯ ಸಮಸ್ಯೆಗಳಿವೆ ದಾರಿ ಮಾಡಿ ಕೊಡುತ್ತದೆ. ಗ್ಯಾಸ್ಟ್ರಿಕ್ ಅಂದ್ರೆ ಪದೇ ಪದೇ ಹೊಟ್ಟೆಯಲ್ಲಿ ಗಾಳಿ ತುಂಬುವುದು. ಈ ಗಾಳಿಯನ್ನು ನಾವು ಯಾವಾಗ ಹೊರಗಡೆ ಹಾಕುತ್ತೇವೆ ಆವಾಗ ನಮ್ಮ ದೇಹವು ಸಮಾಧಾನವಾಗಿ ವಿಶ್ರಾಂತಿಯಾಗಿ ಇರುತ್ತದೆ ಇಲ್ಲವಾದರೆ ಗಾಳಿಯು ಹೊಟ್ಟೆಯಲ್ಲಿ ಉಳಿದರೆ ಇದು ತುಂಬಾನೇ ದೊಡ್ಡದಾದ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಈ ಗ್ಯಾಸ್ಟ್ರಿಕ್ ಸಮಸ್ಯೆಯು ನಮ್ಮನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತದೆ. ಇದರಿಂದ ಹೊಟ್ಟೆಯೂ ಭಾರ ಆಗುತ್ತದೆ ಹುಳಿತೇಗು ಬರುತ್ತದೆ ಹೊಟ್ಟೆ ಉರಿಯುತ್ತದೆ. ದೇಹದಲ್ಲಿ ಅನಿಲ ಸಂಗ್ರಹ ಆಗಿ ಜೀರ್ಣಕ್ರಿಯೆ ಸರಾಗವಾಗಿ ಕೂಡ ಆಗುವುದಿಲ್ಲ. ಹಾಗಾದ್ರೆ ಈ ಗ್ಯಾಸ್ಟ್ರಿಕ್ ಸಮಸ್ಯೆಗೆ ಏನು ಮಾಡಬೇಕು ಅಂತ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.
ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದು ಸಿದ್ದ ಮಾಡಿಕೊಳ್ಳಬಹುದು. ಮೊದಲಿಗೆ ಬೇಕಾಗುವ ಸಾಮಗ್ರಿಗಳು ಅಂದ್ರೆ ಗರಿಕೆ, ಕಲ್ಲು ಸಕ್ಕರೆ ಮತ್ತು ಜೀರಿಗೆ. ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಡಬೇಕು ಇದರಲ್ಲಿ ಎರಡು ಲೋಟ ನೀರು ಹಾಕಿಕೊಳ್ಳಿ. ನೀರು ಕುದಿ ಬಂದ ನಂತರ ಅದಕ್ಕೆ ಗರಿಕೆ ಹುಲ್ಲನ್ನು ಹಾಕಬೇಕು. ನಂತ್ರ ಇದಕ್ಕೆ ಜೀರಿಗೆ ಹಾಕಿಕೊಳ್ಳಬೇಕು. ಜೀರಿಗೆಯು ಕೂಡ ಆಹಾರವನ್ನು ಚೆನ್ನಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಅಸಿಡಿಟಿ, ಹೊಟ್ಟೆ ಉಬ್ಬರ, ಹೊಟ್ಟೆ ಭಾರ ಇವೆಲ್ಲ ಸಮಸ್ಯೆಯನ್ನು ಕೇವಲ ಜೀರಿಗೆಯಿಂದ ನೀವು ಕಡಿಮೆ ಮಾಡಿಕೊಳ್ಳಬಹುದು. ಆಮೇಲೆ ಇದು ಚೆನ್ನಾಗಿ ಕುದಿಯಬೇಕು. ಎರಡು ಲೋಟ ನೀರು ಒಂದು ಲೋಟ ಆಗುವವರೆಗೆ ಕುದಿಸಿಕೊಳ್ಳಿ. ನಂತ್ರ ಇದಕ್ಕೆ ಕಲ್ಲು ಸಕ್ಕರೆ ಹಾಕಿ. ಕಲ್ಲು ಸಕ್ಕರೆ ಕುದಿಯುವವರೆಗೆ ಕಾಯಿಸಬೇಕು. ಆಮೇಲೆ ಈ ಕಷಾಯವನ್ನು ಶೋಧಿಸಿಕೊಳ್ಳಿ. ಈ ಮನೆಮದ್ದು ಅನ್ನು ನೀವು ನಿತ್ಯವೂ ಮಾಡಿ ಕುಡಿಯುವ ಅವಶ್ಯಕತೆ ಏನು ಇಲ್ಲ ಮಿತ್ರರೇ. ಆದರೆ ನಿಮಗೆ ತುಂಬಾನೇ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಅಂದ್ರೆ ನೀವು ವಾರದಲ್ಲಿ 2-3 ಬಾರಿ ಮಾಡಿ ಕುಡಿಯಬಹುದು.
ಊಟವನ್ನು ಮಾಡುವುದಕ್ಕಿಂತ ಮುಂಚೆ ಅಥವಾ ಊಟವನ್ನು ಮಾಡಿ ಕುಡಿದರು ಕೂಡ ಯಾವುದೇ ರೀತಿಯ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಈ ಮನೆಮದ್ದು ತಯಾರು ಮಾಡಲು ಬಳಸಿದ ಸಾಮಗ್ರಿಗಳಾದ ಗರಿಕೆ ಮತ್ತು ಜೀರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಕೂಡ ಸಹಾಯ ಮಾಡುತ್ತದೆ. ಮತ್ತೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮತ್ತಷ್ಟು ಉದ್ಭವ ಆಗುವ ಹೊಟ್ಟೆ ನೋವು ಹೊಟ್ಟೆ ಭಾರ ಹೊಟ್ಟೆ ಉಬ್ಬರ ಈ ಬಗೆಯ ಸಮಸ್ಯೆಯನ್ನು ಕೂಡ ದೂರ ಮಾಡಲು ಈ ಮನೆಮದ್ದು ತುಂಬಾನೇ ಸಹಾಯ ಮಾಡುತ್ತದೆ. ಅದರಲ್ಲೂ ಜೀರಿಕೆ ನಮ್ಮ ಆಹಾರವು ಚೆನ್ನಾಗಿ ಪಚನವಾಗಲು ಸಹಾಯ ಮಾಡಿ ದೇಹದಲ್ಲಿ ಗಾಳಿ ಅಥವಾ ಅನಿಲವು ಸಂಗ್ರಹ ಆಗದಂತೆ ನೋಡಿಕೊಳ್ಳುತ್ತದೆ. ಮತ್ತೆ ನಮ್ಮನ್ನು ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ರಕ್ಷಣೆ ಮಾಡುತ್ತದೆ. ನೋಡಿದ್ರಲಾ ಸ್ನೇಹಿತರೇ ಗ್ಯಾಸ್ಟ್ರಿಕ್ ಅದ್ಭುತವಾದ ಹೊಮ್ ರೆಮೇಡಿ ನಾ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.