ನಮಸ್ತೆ ಪ್ರಿಯ ಓದುಗರೇ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನುವುದು ಪ್ರತಿಯೊಬ್ಬರನ್ನೂ ಎಡಬಿಡದೆ ಕಾಡುವ ಸಮಸ್ಯೆಗಳಲ್ಲಿ ಒಂದಾಗಿದೆ ಇದು ಆಹಾರವನ್ನು ಅತಿಯಾಗಿ ಸೇವನೆ ಮಾಡಿದರು ಮಾಡದೇ ಇದ್ದರೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನುವುದು ತಾನಾಗಿಯೆ ಹುಟ್ಟಿಕೊಳ್ಳುತ್ತದೆ. ಆಹಾರ ಚೆನ್ನಾಗಿ ಇದೆ ಅಂತ ಅತಿಯಾಗಿ ಸೇವನೆ ಮಾಡಿದರು ಕೂಡ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಇನ್ನೂ ಈ ಸಮಸ್ಯೆಯನ್ನು ಜನರು ತುಂಬಾನೇ ಅಲಕ್ಷ್ಯ ಮಾಡುತ್ತಾರೆ. ಆದರೆ ಇದು ಜನರ ಮಧ್ಯೆ ಇರುವಾಗ ತುಂಬಾನೇ ಮುಜುಗರ ಉಂಟು ಮಾಡುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡರೆ ಅದು ಬಾಯಿಯ ಮೂಲಕ ಅಥವಾ ಇನ್ನಿತರ ದೇಹದ ಯಾವುದೋ ಭಾಗದಿಂದ ಹೊರಗೆ ಹೋಗಲು ಪ್ರಯತ್ನ ಮಾಡುತ್ತದೆ. ಒಂದು ವೇಳೆ ಹೊಟ್ಟೆಯಲ್ಲಿ ಅತಿಯಾಗಿ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು ಅದು ಯಾವುದೇ ಕಾರಣಕ್ಕೂ ದೇಹದಿಂದ ಹೊರಗಡೆ ಬಿಡುಗಡೆ ಆಗದೆ ಇದ್ದಾಗ ಅದು ಹೃದಯದ ಮೇಲೆ ಒತ್ತಡ ಬೀಳುತ್ತದೆ ಇದರಿಂದ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಅಷ್ಟೊಂದು ಅಪಾಯಕಾರಿ ಆಗಿದೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನುವುದು.ಮತ್ತು ಹೊಟ್ಟೆಯಲ್ಲಿ ಸೇರಿದ ಆಹಾರವು ಚೆನ್ನಾಗಿ ಜೀರ್ಣವಾಗದೆ ಅದು ತೇಗು ಮೂಲಕ ಅಥವಾ ಇನ್ನಿತರ ವಿಧಾನ ಮೂಲಕ ಹೊರಗೆ ಹೋಗುತ್ತದೆ. ಇಲ್ಲವಾದರೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು ಹೊಟ್ಟೆ ಉಬ್ಬಿದಂತೆ ಆಗುತ್ತದೆ.
ಹೊಟ್ಟೆ ಉಬ್ಬಿದರೆ ಇನ್ನಿತರ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಈ ಗ್ಯಾಸ್ಟ್ರಿಕ್ ಸಮಸ್ಯೆ ಬಂದವರು ಹಲವಾರು ಮಾರ್ಗಗಳನ್ನು ಅನುಸರಣೆ ಮಾಡುತ್ತಾರೆ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಲು ಆದರೆ ಇದು ಶಾಶ್ವತವಾಗಿ ಪರಿಹಾರವನ್ನು ಕೊಡುವುದಿಲ್ಲ. ಈ ತೊಂದರೆಯನ್ನು ನಾವು ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ತುಂಬಾನೇ ಸುಲಭವಾಗಿ ಸರಳವಾಗಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೇ ಮನೆಮದ್ದು ಮಾಡಿ ಸೇವನೆ ಮಾಡಿದರೆ ಗ್ಯಾಸ್ಟ್ರಿಕ್ ಟ್ರಬಲ್ ನಿಂದಾಗಿ ಮುಕ್ತಿಯನ್ನು ಪಡೆಯಬಹುದು.ಮನೆಯಲ್ಲಿ ದೊರೆಯುವ ಅಡುಗೆ ಮನೆಯ ಸಾಮಗ್ರಿಗಳು ವೈದ್ಯರ ಮಾತ್ರೆಗಳಿಗೆ ಸಮಾನ ಅಂತ ಹೇಳಿದರೆ ತಪ್ಪಾಗಲಾರದು. ಆದರೆ ಯಾರೂ ಇದರ ಬಗ್ಗೆ ಅಷ್ಟೊಂದು ಆಸಕ್ತಿಯನ್ನು ತೋರಿಸುವುದಿಲ್ಲ. ಇದೇ ಒಂದು ದೊಡ್ಡ ತಪ್ಪು ಆಗಿ ಜನರು ವೈದ್ಯರ ಹತ್ತಿರ ಸಾಕಷ್ಟು ಹಣವನ್ನು ವ್ಯರ್ಥ ಮಾಡುತ್ತಾರೆ. ಹಾಗಾದ್ರೆ ಬನ್ನಿ ಮನೆಮದ್ದು ಯಾವುದು ಅಂತ ತಿಳಿಯೋಣ. ಮನೆಯಲ್ಲಿ ಮಾಡಿರುವ ಶುದ್ಧವಾದ ಮೊಸರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕಟದು ಅದನ್ನು ತಿಳಿಯಾಗಿ ಮಾಡಿ ಅದರಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ದಿನದಲ್ಲಿ ಕನಿಷ್ಠ 2-3 ಬಾರಿ ಕುಡಿಯಬೇಕು. ಇದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಮ್ಮನ್ನು ದೂರವಿರಿಸುತ್ತದೆ.
ಇನ್ನೂ ಎರಡನೆಯದಾಗಿ ಬಾಳೆಹಣ್ಣಿನ ಎಲೆದಲ್ಲಿ ಇರುವ ಗಟ್ಟಿ ಪದಾರ್ಥವನ್ನು ತೆಗೆದುಕೊಂಡು ಅದರ ರಸವನ್ನು ತೆಗೆದು ದಿನಕ್ಕೆ ಒಂದು ಬಾರಿ ಕುಡಿಯುತ್ತಾ ಬಂದರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಹತ್ತಿರ ಸುಳಿಯುವುದಿಲ್ಲ. ಇನ್ನೂ ಮೂರನೆಯದು ಹೊಟ್ಟೆಯ ಉಬ್ಬರವನ್ನು ಕಡಿಮೆ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವ ಅಲ್ಲದ ರಸವನ್ನು ಮಾಡಿ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪಾರಾಗಬಹುದು. ಜೊತೆಗೆ ಉರಿ ಮಲ ಮೂತ್ರ ವಿಸರ್ಜನೆ ಇಂದ ದೂರವಿರಬಹುದು. ಇನ್ನೂ ನಾಲ್ಕನೆಯದು ಬಿಸಿ ನೀರಿನಲ್ಲಿ ಒಣದ್ರಾಕ್ಷಿಯನ್ನು ಹಾಕಿ ಕುದಿಸಿ ಮಾರನೆಯ ದಿನ ನೀವು ಒಣದ್ರಾಕ್ಷಿ ರಸವನ್ನು ಚೆನ್ನಾಗಿ ಹಿಂಡಿ ಅದರ ರಸವನ್ನು ಕುಡಿದರೆ ಹೊಟ್ಟೆಯಲ್ಲಿರುವ ಗಾಳಿ ಮಾಯವಾಗುತ್ತದೆ. ಇನ್ನೂ ನಿತ್ಯವೂ ಬೆಳಿಗ್ಗೆ ಮತ್ತು ರಾತ್ರಿ ಅಜವಾಯಿನ್ ಮತ್ತು ಸೋಂಪು ಕಾಳುಗಳ ಪುಡಿಯನ್ನು ಬಿಸಿ ನೀರಿನ ಜೊತೆಗೆ ಕುಡಿದರೆ ಮಲ ಮೂತ್ರ ಸರಿಯಾಗಿ ಆಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾದ್ರೆ ಈ ಚಿಕ್ಕ ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದುಗಳು ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.