WhatsApp Group Join Now

ಹೌದು ಕೆಲವೊಂದು ರೋಗಗಳು ಹೇಗೆ ಬರುತ್ತವೆ ಅನ್ನೋದೇ ಗೊತ್ತಾಗಲ್ಲ ಅಂತಹ ರೋಗಗಳಲ್ಲಿ ಈ ಹೈಪೋ ಥೈರಾಯಿಡ್ ಸಹ ಒಂದಾಗಿದೆ ಈ ಹೈಪೋ ಥೈರಾಯಿಡ್ ರೋಗದಿಂದ ಏನ್ ಆಗುತ್ತೆ ಮತ್ತು ಯಾವ ಆಹಾರ ತಿಂದ್ರೆ ಬರುತ್ತೆ ಅನ್ನೋದು ಇಲ್ಲಿದೆ ನೋಡಿ.

ಅಯೋಡೀನ್ ಕೊರತೆಯಿಂದ ಥೈರಾಯಿಡ್ ಗ್ರಂಥಿಗಳ ಕಾರ್ಯಕ್ಷಮತೆ ಕಡಿಮೆಯಾಗುವುದರಿಂದ ಸಡನ್ ಆಗಿ ದಪ್ಪ ಆಗೋದು, ವಿಪರೀತ ಸುಸ್ತು, ಕೂದಲು ಉದರುವಿಕೆ, ಮಲಬದ್ಧತೆ, ಮರೆಗುಳಿತನ, ವಿಪರೀತ ನಿದ್ದೆ, ವಾಯ್ಸ್ ಬದಲಾಗುವಿಕೆ, ಚರ್ಮ ಒಡೆಯುವಿಕೆ ಇತರೆ ಲಕ್ಷಣಗಳು ಕಂಡು ಬರುತ್ತದೆ.

ಅಯೋಡೀನ್ ನ ಊಟದಲ್ಲಿ ತೇಗೋಳೋದು ಎಷ್ಟು ಮುಖ್ಯನೋ ಅದು ಹೊಟ್ಟೆಯಿಂದ ರಕ್ತಗತವಾಗೋದು ಸಹ ಅಷ್ಟೇ ಮುಖ್ಯ. ಆದ್ರೆ ಕೆಲವೊಂದು ಸಲ ನಾವು ತೊಗೊಳೋ ಎಷ್ಟೋ ಆಹಾರ ಪದಾರ್ಥಗಳು ಈ ಅಯೋಡೀನ್ ಅನ್ನು ಹೀರಿಕೊಳ್ಳಲು ಬಿಡುವುದಿಲ್ಲ. ಇದರ ಪರಿಣಾಮವಾಗಿ ಅಯೋಡೀನ್ ಅಂಶಗಳು ಥೈರಾಯಿಡ್ ಗ್ರಂಥಿಗಳಿಗೆ ಸರಿಯಾಗಿ ಲಭಿಸದೆ ಅವುಗಳ ಚಟುವಟಿಕೆ ಕಡಿಮೆ ಮಾಡಿ T3 ಮತ್ತು T4 ಹಾರ್ಮೋನ್ ಗಳ ಉತ್ಪಾದನೆಯು ಕಡಿಮೆಯಾಗುತ್ತದೆ.

ಹಾಗಿದ್ರೆ ಅವು ಯಾವ ಫುಡ್ ಹೈಪೋ ಥೈರಾಯಿಡ್ ಬರುತ್ತೆ ಅನ್ನೋದು ಇಲ್ಲಿದೆ ನೋಡಿ: ಥಯೋಸಯನೈಟ್ಸ್ ಅಂಶಗಳುಳ್ಳ ಹಣ್ಣು ತರಕಾರಿಗಳು ಥೈರಾಯಿಡ್ ಗ್ರಂಥಿಗಳಿಗೆ ಅಯೋಡೀನ್ ಲಭಿಸದಂತೇ ಮಾಡುತ್ತವೆ. ಎಲೆಕೋಸು, ಹೂಕೋಸು,ಮೂಲಂಗಿ, ಗೆಣಸು,ಕೋಸಿನ ಎಲೆಗಳು,ಸಾಸುವೆ ಎಲೆ,ಬ್ರೊಕೋಲಿ ,ಕನೋಲಾ, ಅಗಸೆ ಗಳಲ್ಲಿ ಥಯೋಸಯನೈಟ್ಸ್ ಅಂಶಗಳು ಹೇರಳವಾಗಿದ್ದು ಅಯೋಡೀನ್ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ. ಬೇಯಿಸಿದಾಗ ಈ ಅಂಶವು ಗಣನೀಯವಾಗಿ ಇಳಿಯುವುದರಿಂದ ಬೇಯಿಸಿದ ತರಕಾರಿಗಳ ಸೇವನೆ ಅಷ್ಟು ಹಾನಿಕಾರಕವಲ್ಲ. ಸೋಯಾ ಬೀನ್ಸ್, ಸೋಯಾ ಮಿಲ್ಕ್ , ಟೋಫು ಗಳು ಥೈರಾಯಿಡ್ ಗ್ರಂಥಿಯ ಕೆಲಸವನ್ನು ಕಡಿಮೆ ಮಾಡುವುದರಿಂದ ಈ ಖಾಯಿಲೆಯನ್ನು ತಂದೊತ್ತುವೆ.

ಗೋಧಿ, ಮೆಕ್ಕೆಜೋಳ,ಬಾರ್ಲಿ ಅಕ್ಕಿಯಲ್ಲಿರುವ ಗ್ಲುಟೆನ್ ಅಂಶಗಳು ದೇಹದಲ್ಲಿ ಆಟೋ ಇಮ್ಮ್ಯೂನಿಟಿಯನ್ನು ಹೆಚ್ಚಿಸಿ ಥೈರಾಯಿಡ್ ಗ್ರಂಥಿಗಳ ಕಾರ್ಯದಕ್ಷತೆಯನ್ನು ಕುಗ್ಗಿಸಿ ಕ್ರಮೇಣ ಹೈಪೋ ಥೈರಾಯಿಡ್ ಸಮಸ್ಯೆಗೆ ನಾಂದಿ ಹಾಡುತ್ತದೆ.

WhatsApp Group Join Now

Leave a Reply

Your email address will not be published. Required fields are marked *