ಈ ದೇವಸ್ಥಾನವು ತಮಿಳುನಾಡಿನ ತಂಜಾವೂರ್ ನಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿರುವ ತಂಜಾವೂರು ಮತ್ತು ತಿರುವರೂರಿನ ಮಾರ್ಗವಾಗಿ ಚಲಿಸಿದಾಗ ಕೊಯಿಲ್ ವೆನ್ನಿ ಎಂಬ ಹಳ್ಳಿಯು ಸಿಗುತ್ತದೆ. ಈ ಗ್ರಾಮದಲ್ಲಿ ಒಂದು ಶಿವನ ದೇವಸ್ಥಾನ ಇದೆ. ಇದು ಮಧುಮೇಹ ಖಾಯಿಲೆಯನ್ನು ಕಡಿಮೆ ಮಾಡುವುದು ಅಥವಾ ಗುಣಪಡಿಸುವುದು ಎಂದು ಹೇಳಲಾಗುತ್ತದೆ.
ಸಾವಿರ ವರ್ಷಗಳಿಗೂ ಪುರಾತನ ದೇವಾಲಯ ಇದಾಗಿದೆ. ಇಲ್ಲಿ ದೇವಿಯನ್ನು ಸರ್ವಾಂಗ ಸುಂದರಿ ಎಂಬ ಹೆಸರಿನಿಂದ ಆರಾಧಿಸಲಾಗುತ್ತದೆ. ಹಾಗು ಶಿವನನ್ನು ವೆನ್ನಿ ಕರುಂಬೇಶ್ವರರ್ ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ ಕರುಂಬು ಎಂದರೆ ಕಬ್ಬು ಎಂದರ್ಥ. ಇಲ್ಲಿನ ಶಿವನಿಗೆ ಕಬ್ಬಿನ ಹಾಲಿನ ಅಭಿಷೇಕ ಮತ್ತು ಅಲಂಕಾರಕ್ಕೆ ಕಬ್ಬಿನ ಜಲ್ಲೆಯನ್ನು ಭಕ್ತರು ಸಮರ್ಪಿಸುತ್ತಾರೆ.
ಇಲ್ಲಿ ಭಕ್ತರು ಮಧುಮೇಹದ ಪರಿಣಾಮವನ್ನು ಕಡಿಮೆಗೊಳಿಸಲು ರವೆ ಮತ್ತು ಸಕ್ಕರೆ ಮಿಶ್ರಣದ ಕೇಸರಿಬಾತ್ ಅನ್ನು ಶಿವನಿಗೆ ಅರ್ಪಿಸಿ ಪ್ರಾರ್ಥಿಸಲಾಗುತ್ತದೆ. ನಂತರ ಈ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿ ದೇವಸ್ಥಾನದ ಸುತ್ತಲೂ ಇರುವ ಇರುವೆಗಳಿಗೆ ನೀಡಲಾಗುತ್ತದೆ. ಹೀಗೆ ಪರಿಹಾರ ಕಂಡ ಭಕ್ತರ ದಂಡೇ ಇದೆ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ ಒಂದೇ ದಿನದಲ್ಲಿ ಪರಿಹಾರ ಶತಸಿದ್ಧ, ಉಚಿತ ಭವಿಷ್ಯ ಉಚಿತ ಪರಿಹಾರ. ಶ್ರೀ ಚಕ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಕಾರ್ತಿಕ್ ಭಟ್ ಅವರಿಂದ ಇಂದೇ ಸಂಪರ್ಕಿಸಿ ಪಂಡಿತ್ ಕಾರ್ತಿಕ್ ಭಟ್: 9008144054.
ಈ ದೇಗುಲಕ್ಕೆ ತಿರುವೆನ್ನಿಯೂರ್ ಎಂಬು ಪ್ರಾಚೀನ ಹೆಸರಾಗಿತ್ತು. ತಮಿಳಿನ ನಯನಾರ್ ಸಂತರು ಪಟ್ಟಿ ಮಾಡಿರುವ 275 ಶೈವ ದೇವಾಲಯಗಳ ಪಾದಾಳ್ ಪೆಟ್ರ ಸ್ಥಳಂ ನಲ್ಲಿ ಬರುವ ಒಂದು ದೇವಾಲಯ ಇದಾಗಿದೆ. ಖ್ಯಾತ ಸಂತರುಗಳಾ ತಿರುಜ್ಞಾನಿ ಸಂಬಂದರ್ ಮತ್ತು ತಿರುನಾವಕ್ಕರಸರ್ ಈ ದೇಗುಲಕ್ಕೆ ಭೇಟಿ ನೀಡಿ ಕರುಂಬೇಶ್ವರನಿಗೆ ಸೇವೆಸಲ್ಲಿಸಿದ್ದರು. ಮತ್ತು ಈ ದೇವರ ಮೇಲೆ ಭಕ್ತಿಯ ಹಾಡುಗಳನ್ನು ಕೂಡ ಹಾಡಿದ್ದಾರೆ.
ಈ ದೇವಸ್ಥಾನವು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ. ಮತ್ತು ಸಂಜೆ 5:30 ರಿಂದ 7:30 ವರೆಗೆ ತೆರೆದಿರುತ್ತದೆ.