ಇವತ್ತಿನ ದಿನಗಳಲ್ಲಿ ಮನೆಯಲ್ಲೇ ಕೂತು ಮಾಡುವಂತಹ ಹಲವುರು ಉದ್ಯಮಗಳು ಇವೆ ಹಪ್ಪಳ ಮಾಡುವುದು ಅಡಿಕೆ ಪಟ್ಟೆ ಮಾಡುವುದು ಮತ್ತು ಅದರಲ್ಲೂ ಹೆಣ್ಣು ಮಕ್ಕಳು ಮನೆಯಲ್ಲೇ ಇದ್ದುಕೊಂಡು ಮಾಡುವಂತ ಹಲವು ಉದ್ಯಮಗಳು ಇವೆ ಅದರಲ್ಲಿ ಕರ್ಪುರ ಬಿಸೆನೆಸ್ ಸಹ ಒಂದಾಗಿದೆ ಈ ಬಿಸೆನೆಸ್ ಮಾಡುವುದಕ್ಕೆ ಏನೆಲ್ಲಾ ಬೇಕು ಮತ್ತು ಈ ಬಿಸೆನೆಸ್ ಮಾಡಲು ಯಾವೆಲ್ಲ ಸಾಮಗ್ರಿಗಳು ಬೇಕು ಮತ್ತು ಇದಕ್ಕೆ ಎಷ್ಟು ಹಣ ಬೇಕು ಹಾಗೆ ಯಾವ ರೀತಿಯಾಗಿ ಮಾಡಬಹುದು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಿಮಗೆ ಗೊತ್ತಿರುವ ಹಾಗೆ ನಮ್ಮ ಸಂಸ್ಕೃತಿಯಲ್ಲಿ ಹಾಗು ನಮ್ಮ ಪೂಜೆಗಳಲ್ಲಿ ಕರ್ಪುರಕ್ಕೆ ಹೆಚ್ಚು ಮಹತ್ವ ಇದೆ ಹಾಗೆ ಯಾವುದೇ ದೇವರ ಪೂಜೆ ಮಾಡುವ ಹಾಗು ಪ್ರತಿ ದಿನ ಮನೆಯಲ್ಲಿ ಈ ಕರ್ಪುರ ಬಳಕೆ ಮಾಡುವುದು ಎಲ್ಲರಿಗು ಗೊತ್ತಿರುವ ವಿಚಾರ, ಹಾಗೆ ಕೆಲವೊಂದು ಔಷದಿಯಲ್ಲಿ ಸಹ ಕರ್ಪುರ ಬಳಕೆ ಮಾಡುತ್ತಾರೆ ಮತ್ತು ಆಯುರ್ವೇದಲ್ಲಿ ಸಹ ಕರ್ಪುರ ಬಳಕೆ ಮಾಡಲಾಗುತ್ತದೆ ಹಾಗಾಗಿ ಈ ಕರ್ಪುರ ಪ್ರತಿದಿನ ಮಾರುಕಟ್ಟೆಗೆ ಬರುವಂತ ಒಂದು ವಸ್ತುವಾಗಿದೆ ಮತ್ತು ಇದರ ಬೇಡಿಕೆ ಯಾವಾಗಲು ಇರುತ್ತದೆ ಹಾಗಾಗಿ ನೀವು ಈ ಉದ್ಯಮವನ್ನು ತುಂಬಾ ಸುಲಭವಾಗಿ ಮಾಡಬುದು ಹೇಗೆಲ್ಲ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ.
ನೀವು ಈ ಉದ್ಯಮ ಮಾಡಲು ಮೊದಲು ಬೇಕಾಗಿರುವುದು ಒಂದು ಮಿಷನ್ ಮತ್ತು ಇದಕ್ಕೆ ಬೇಕಾಗಿರುವ ಕಚ್ಚಾ ವಸ್ತುಗಳು ಈ ಕಚ್ಚಾ ವಸ್ತುಗಳು ನಿಮಗೆ ಮಾರ್ಕೆಟ್ ನಲ್ಲಿ ಸಿಗುತ್ತವೆ ಮೊದಲಿಗೆ ಕರ್ಪುರದ ಪೌಡರ್ ಬೇಕಾಗುತ್ತದೆ ಹಾಗು ಕರ್ಪುರದ ಗುಳಿಗೆಗಳನ್ನು ತಯಾರಿಸುವ ಮಿಷನ್ ಇದರ ಬೆಲೆ ಸಾಮಾನ್ಯವಾಗಿ 50 ಸಾವಿರಕ್ಕೆ ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ನಿಮಗೆ ಸಿಗುತ್ತದೆ. ಈ ಮಿಷನ್ ನಲ್ಲಿ ನೀವು ನಿಮಗೆ ಯಾವ ಆಕಾರದಲ್ಲಿ ಅಥವಾ ಗಾತ್ರದಲ್ಲಿ ಬೇಕು ಆ ಆಕಾರದಲ್ಲಿ ನೀವು ಮಾಡಿಕೊಳ್ಳಬಹುದು ಹಾಗೆ ಅವುಗಳನ್ನು ಪ್ಯಾಕಿಂಗ್ ಮಾಡಲು ಕವರ್ ಗಳು ಬೇಕಾಗುತ್ತವೆ. ಇನ್ನು ಈ ಕರ್ಪುರ ಹೇಗೆ ತಯಾರಿಸೋದು ಇಲ್ಲಿದೆ ನೋಡಿ.
ಕರ್ಪೂರವನ್ನು ತಯಾರಿಸುವ ಮಷೀನ್ ಅದು ಆಟೋಮೆಟಿಕ್ ಆಗಿ ಕೆಲಸ ನಿರ್ವಹಿಸುತ್ತದೆ. ಇನ್ನು ಮಷಿನ್ ಒಂದು ಭಾಗದಲ್ಲಿ ನೀವು ಕರ್ಪುರ ತಯಾರಿಸಲು ತಂದಿರುವ ಪೌಡರನ್ನು ಹಾಕಿದರೆ ಅದು ಕರ್ಪುರ ತಯಾರು ಮಾಡಿ ನಿಮಗೆ ಬೇಕಾದ ಗಾತ್ರಕ್ಕೆ ಮತ್ತು ಆಕಾರಕ್ಕೆ ನೀಡುತ್ತದೆ ಇನ್ನು ಮಷಿನ್ ಬಗ್ಗೆ ಹೆಚ್ಚಾಗಿ ತಿಳಿದಿಕೊಳ್ಳಬೇಕು ಅಂದರೆ ನೀವು ಮಷಿನ್ ತೆಗದುಕೊಳ್ಳುವಾಗ ಅದರ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗಿರುತ್ತದೆ. ಇನ್ನು ನಿಮಗೆ ಬೇಕಾಗಿರುವ ಕರ್ಪುರದ ಪುಡಿ ಒಂದು ಕೆಜಿಗೆ 300 ರೂಪಾಯಿಗಳಾಗಿರುತ್ತದೆ ಇನ್ನು ನೀವು ಒಂದು 50 ಸಾವಿರ ಹಣ ಹಾಕಬಹುದು ಆದರೆ ಇದರ ಲಾಭ ಅಧಿಕವಾಗಿರುತ್ತದೆ, ಇನ್ನು ನೀವೇ ಮಾರಾಟ ಮಾಡಬುದು ಮತ್ತು ಹತ್ತಿರ ಅಂಗಡಿಗಳಿಗೆ ಹಾಗು ದೇವಸ್ಥಾದ ಅಂಗಡಿಗಳಿಗೆ ಹಾಗು ನೀವು ಸಹ ಒಂದು ಅಂಗಡಿ ಮಾಡಿ ಮಾರಬಹದು ಅಥವಾ ಯಾವುದಾದರು ಒಂದು ಹೊಲೆಸೆಲ್ ಅಂಗಡಿ ಬುಕ್ ಮಾಡಿಕೊಂಡರೆ ಅವರೇ ಬಂದು ನಿಮ್ಮ ಕರ್ಪುರವನ್ನು ಖರೀದಿ ಮಾಡುತ್ತದೆ, ಇನ್ನು ಇದರಲ್ಲಿ ಉಡಿಕೆ ಕಡಿಮೆ ಆದರೆ ಆದಾಯ ಹೆಚ್ಚು.