ರಾಷ್ಟ್ರೀಯ ಹೂವು ಎಂದು ಕರೆಸಿಕೊಳ್ಳುವ ಕಮಲದ ಹೂವಿನ ಬೇರುಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನುವುದು ಹಲವರಿಗೆ ಗೊತ್ತಿಲ್ಲದ ವಿಚಾರ ಇಡೀ ಬೇರು ನೀರಿನಲ್ಲಿ ಮುಳುಗಿರುತ್ತದೆ ಅದರ ಹೂವು ಮಾತ್ರ ಎಲ್ಲರ ಕಣ್ಣು ಸೆಳೆಯುತ್ತದೆ. ಬೇರುಗಳನ್ನು ಸೀಕ್ರೆಟ್ ಲೋಟಸ್ ಎಂದು ಕರೆಯುತ್ತಾರೆ. ಅನಾದಿ ಕಾಲದಿಂದಲೂ ಕಮಲದ ಹೂವಿನ ಬೇರುಗಳನ್ನು ಔಷಧವಾಗಿ ಬಳಸಲಾಗುತ್ತದೆ ಆಯುರ್ವೇದದಲ್ಲಿ ಕೂಡ ಇದಕ್ಕೆ ವಿಶೇಷ ಸ್ಥಾನವಿದೆ. ಹಾಗಾದರೆ ಈ ಕಮಲದ ಹೂವುಗಳು ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳನ್ನು ನೀಡಲಿದೆ ಅಂತ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಕಮಲದ ಹೂವಿನ ಬೇರುಗಳನ್ನು ಮೂಗಿನ ರಕ್ತವನ್ನು ತಡೆಯಲು ಬಳಸಲಾಗುತ್ತದೆ.

ಈ ಬೇರುಗಳನ್ನು ನೀರಿನಲ್ಲಿ ಹಾಕಿ ಕಷಾಯ ಮಾಡಿ ಸೇವಿಸಿದವರ ಮೂಲಕ ಬಳಕೆ ಮಾಡಲಾಗುತ್ತದೆ. ಅಲ್ಲದೇ ಈ ಕಮಲದ ಬೇರುಗಳನ್ನು ಒಣಗಿಸಿ ಪುಡಿ ಮಾಡಿ ನಂತರ ನೀರಿಗೆ ಸೇರಿಸಿ ಕೂಡ ಸೇವನೆ ಮಾಡಬಹುದಾಗಿದೆ. ಇದು ದೇಹವನ್ನು ತಂಪು ಮಾಡುವ ಮೂಲಕ ರಕ್ತದ ಶ್ರಾವನ್ನು ತಡೆಯುತ್ತದೆ. ಇನ್ನು ಕಮಲದ ಹೂವಿನ ಬೇರುಗಳ ಸೇವನೆಯಿಂದ ದೇಹದಲ್ಲಿ ಪಿತ್ತ ನಿವಾರಣೆ ಯಾಗುತ್ತದೆ. ಮೊದಲು ಹೇಳುವಂತೆ ಬೇರುಗಳನ್ನು ತಂದು ಸ್ವಚ್ಛವನ್ನು ಗೊಳಿಸಿ ಕಷಾಯ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು ಅಲ್ಲದೆ ಗ್ಯಾಸ್ಟಿಕ್ ಅಥವಾ ಅಸಿಡಿಟಿ ಇಂದ ಹೊಟ್ಟೆಯಲ್ಲಿ ಉರಿ ಇದ್ದರೆ ಇದರ ಕಷಾಯ ಸೇವನೆಯಿಂದ ಶಮನ ಮಾಡಬಹುದಾಗಿದೆ. ಜೊತೆಗೆ ಮುಖ್ಯವಾಗಿ ಆಹಾರ ಜೀರ್ಣವಾಗಲು ಕೂಡ ಇದು ಸಹಾಯಕವಾಗಿದೆ. ಹೀಗಾಗಿ ಕಮಲದ ಹೂವಿನ ಬಿರುಗಳನ್ನು ಆಯುರ್ವೇದದಲ್ಲಿ ಹೆಚ್ಚು ಬಳಸಲಾಗುತ್ತದೆ. ಇನ್ನು ಕಮಲ ಹೂವಿನ ಬೇರುಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ. ಇದು ಮನಸ್ಸನ್ನು ಹತೋಟಿಯಲ್ಲಿ ಇಡಲು ಸಿಟ್ಟನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಹೀಗಾಗಿ ಅತಿಯಾದ ಒತ್ತಡವನ್ನು ನಿವಾರಿಸಿ ಆರೋಗಯುಕ್ತ ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

Leave a Reply

Your email address will not be published. Required fields are marked *