ನಮಸ್ತೆ ಪ್ರಿಯ ಓದುಗರೇ, ನೀವೇನಾದರೂ ಈ ಬೇಸಿಗೆ ಕಾಲದಲ್ಲಿ ಬಿಸಿಲಿನ ಹೊಡೆತಕ್ಕೆ ಫ್ರಿಡ್ಜ್ ನಲ್ಲಿ ಇರುವಂತಹ ತಣ್ಣೀರನ್ನು ಕುಡಿಯುತ್ತಾ ಇದ್ದರೆ ನೀವು ಕೆಲವೊಂದಿಷ್ಟು ಮುನ್ನೆಚ್ಚರಿಕೆ ವಹಿಸುವುದು ತುಂಬಾನೇ ಒಳ್ಳೆಯದು. ಯಾಕಂದ್ರೆ ಈ ಫ್ರಿಡ್ಜ್ ನಲ್ಲಿ ಇರುವಂತಹ ತಣ್ಣೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಇದು ಹಾನಿ ಉಂಟು ಮಾಡಬಹುದು ಹಾಗಾಗಿ ನೀವು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಇರುತ್ತದೆ. ಹಾಗಾದ್ರೆ ಈ ಫ್ರಿಡ್ಜ್ ನಲ್ಲಿ ಇರುವಂತಹ ತಣ್ಣೀರನ್ನು ಯಾರು ಕುಡಿಯಬಾರದು ಎನ್ನುವ ಬಗ್ಗೆ ಇಂದಿನ ಲೇಖನದಲ್ಲಿ ಹೆಚ್ಚುವರಿ ತಿಳಿದುಕೊಳ್ಳೋಣ ಸ್ನೇಹಿತರೆ. ಈ ಬೇಸಿಗೆ ಕಾಲ ಬಂತು ಅಂದ್ರೆ ಸಾಕು ತಣ್ಣಗಿರುವ ಪಾನೀಯಗಳನ್ನು ಹಾಗೂ ಆಹಾರವನ್ನು ಸೇವನೆ ಮಾಡಬೇಕು ಎನಿಸುತ್ತದೆ. ಹಾಗಾಗಿ ಸಾಕಷ್ಟು ಜನರು ತಮ್ಮ ಮನೆಗಳಲ್ಲಿ ಇರುವಂತಹ ಫ್ರಿಜ್ ನ ನೀರನ್ನು ಕುಡಿಯುತ್ತಾರೆ ಆದ್ರೆ ಈ ಫ್ರಿಜ್ ನಲ್ಲಿ ಇರುವಂತಹ ತಣ್ಣೀರು ಎಲ್ಲರಿಗೂ ಒಳ್ಳೆಯದಲ್ಲ.
ಹೌದು ! ವಿಶೇಷವಾಗಿ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅಂಥವರು ಈ ಫ್ರಿಡ್ಜ್ ನ ನೀರನ್ನು ಸೇವನೆ ಮಾಡಬಾರದು. ಮತ್ತು ಬಹಳಷ್ಟು ಜನರು ಫ್ರಿಡ್ಜ್ ನಲ್ಲಿ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಶೇಕರಣೆ ಮಾಡುತ್ತಾರೆ. ಕೆಲವೊಂದಿಷ್ಟು ಪ್ಲಾಸ್ಟಿಕ್ ಬಾಟಲ್ ಗಳು ಒಂದು ಟೈಂ ಬಳಸಿ ಆಮೇಲೆ ಇನ್ನೊಂದು ಬಳಕೆಗೆ ಯೋಗ್ಯ ಇರುವುದಿಲ್ಲ. ಅಂತಹ ಬಾಟಲ್ ಗಳನ್ನ ನೀವು ಪುನಃ ಪುನಃ ಬಳಸುತ್ತಾ ಇದ್ದರೆ ನಿಮಗೆ ಹಲವಾರು ರೀತಿಯ ಕಾಯಿಲೆಗಳು ಕೂಡ ಬರಬಹುದು. ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅಂಥವರು ಈ ಕೋಲ್ಡ್ ವಾಟರ್ ಕುಡಿಯುವುದರಿಂದ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು. ಉದಾಹರಣೆಗೆ ಈ ಕೋಲ್ಡ್ ವಾಟರ್ ಅನ್ನು ಕುಡಿಯುವುದರಿಂದ ಅವರಿಗೆ ಗಂಟಲು ನೋವು ಆಗಬಹುದು, ಗಂಟಲಿನ ಸೋಂಕು ತಗುಲಬಹುದು, ಕೆಮ್ಮು, ಜ್ವರ, ತಲೆನೋವು, ಮಲಬದ್ದತೆ ಅಂತಹ ಸಮಸ್ಯೆ ಆಗಬಹುದು.
ರೋಗ ನಿರೋಧಕ ಶಕ್ತಿ ಇನ್ನೂ ಕೂಡ ಕುಂಠಿತ ಆಗುತ್ತದೆ. ಹಾಗಾಗಿ ನಿಮಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎನ್ನಿಸಿದರೆ ನೀವು ಈ ತಣ್ಣೀರನ್ನು ಕುಡಿಯದೆ ಇದ್ದರೆ ಒಳ್ಳೆಯದು. ಇನ್ನೂ ನೀವು ಯಾವ ರೀತಿ ನೀರನ್ನು ಕುಡಿಯಬಹುದು ಎಂದು ನೋಡುವುದಾದರೆ, ಬೇಸಿಗೆ ಕಾಲದಲ್ಲಿ ಯಾರೋ ಕೂಡ ಬಿಸಿ ನೀರನ್ನು ಕುಡಿಯಲು ಸಾಧ್ಯ ಆಗುವುದಿಲ್ಲ. ಬಿಸಿ ನೀರನ್ನು ಕುಡಿಯಲು ಇಷ್ಟ ಸಹ ಪಡುವುದಿಲ್ಲ. ಹಾಗಾಗಿ ನೀವು ನಾರ್ಮಲ್ ಆಗಿರುವ ತಣ್ಣೀರನ್ನು ಕುಡಿಯಬಹುದು ಅಥವಾ ಒಂದು ಮಣ್ಣಿನ ಮಡಿಕೆಯಲ್ಲಿ ನೀರನ್ನು ಹಾಕಿ ನೈಸರ್ಗಿಕವಾಗಿ ತಣ್ಣಗೆ ಆದ ಮೇಲೆ ಕುಡಿಯಬಹುದು. ಬೇಗ ನೀರು ತಣ್ಣಗೆ ಆಗಲು ಆ ಮಡಿಕೆಗೆ ನೀರಲ್ಲಿ ಅದ್ದಿದ ಬಟ್ಟೆಯನ್ನು ಸುತ್ತಲೂ ಹೊದಿಸಿ ಆಗ ನೀರು ಬೇಗ ತಂಪು ಆಗಲು ಶುರು ಆಗುತ್ತದೆ. ಫ್ರಿಡ್ಜ್ ನಲ್ಲಿ ಇರುವಂತಹ ತಣ್ಣಿರಿಗೆ ಹೋಲಿಸಿದರೆ ಈ ಮಡಿಕೆಯಲ್ಲಿನ ನೀರು ನೈಸರ್ಗಿಕವಾಗಿ ತಣ್ಣಗೆ ಹಾಗೂ ರುಚಿಯಾಗಿ ಹಿತವಾಗಿ ಇರುತ್ತದೆ. ಹಾಗಾಗಿ ಆರೋಗ್ಯಕ್ಕೆ ಯಾವ ರೀತಿಯ ಹಾನಿ ಕೂಡ ಉಂಟಾಗುವುದಿಲ್ಲ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.