ದುಡಿಯಲು ಮನಸ್ಸಿದ್ದರೆ ಹೇಗೆ ಬೇಕಾದರೂ ದುಡುಯುತ್ತಾನೆ ಸಾದಿಸುವವನಿಗೆ ಛಲವೊಂದಿದ್ದರೆ ಹೇಗೆ ಬೇಕಾದರೂ ಸಾಧಿಸುತ್ತಾನೆ ಅನ್ನೋದಕ್ಕೆ ಈತನೇ ಸಾಕ್ಷಿ ಅಷ್ಟಕ್ಕೂ ಈತ ಓದಿದ್ದು 8 ನೇ ತರಗತಿ ಆದ್ರೂ ಕೋಟಿ ಕೋಟಿ ಸಂಪಾದನೆ ಮಾಡುತ್ತಿರೋದು ಹೇಗೆ ಅಂತೀರಾ.
ಪಂಜಾಬ್ ನ ಲೂಧಿಯಾನದ ನಿವಾಸಿಯಾದ ತ್ರಿಷ್ನಿತ್ ಅರೋರಾಗೆ. ಚಿಕ್ಕಂದಿನಿಂದಲೂ ಕಂಪ್ಯೂಟರ್ ಎಂದರೆ ಅತಿ ಹೆಚ್ಚು ಇಷ್ಟ. ಯಾವಾಗಲು ಕಂಪ್ಯೂಟರ್ ನಲ್ಲೇ ಕೆಲಸಮಾಡುತ್ತಿದ್ದ. ಪ್ರತಿ ದಿನವೂ ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಹೊಸ ಕೋರ್ಸ್ ಗಳನ್ನು ಕಲಿಯುತ್ತಾ ನೈಪುಣ್ಯತೆಯನ್ನು ಗಳಿಸಿಕೊಂಡ. ಆದರೆ, ಅವನು 8 ನೇ ತರಗತಿಯಲ್ಲಿ ಓದುತ್ತಿರುವಾಗ ಎರಡು ವಿಷಯಗಳಲ್ಲಿ ಫೈಲಾದ . ಇದರಿಂದ ವಿದ್ಯಾಭ್ಯಾಸ ಮುಂದುವರೆಸಲು ಈತನಿಂದ ಸಾಧ್ಯವಿಲ್ಲವೆಂದು ತಮಾಷೆ ಮಾಡಿದರು.
ಆದ್ರೆ ಈತನು ಇದ್ಯಾವುದನ್ನು ಲೆಕ್ಕಿಸದೆ, ಕಂಪ್ಯೂಟರ್ ಕೋರ್ಸ್ ಗಳನ್ನು ಕಲಿಯಲಾರಂಭಿಸಿದ. ಈ ನಿಟ್ಟಿನಲ್ಲಿ ನೈಪುಣ್ಯತೆಯುಳ್ಳ ಹ್ಯಾಕರ್ ಆಗಿ ಹೆಸರುವಾಸಿಯಾದ. ಇದರಿಂದಾಗಿ ಅನೇಕ ಕಂಪೆನಿಗಳಿಂದ ಆಫರ್ ಗಳು ಬಂದವು. ಆದರೂ ಅವುಗಳನ್ನು ಸ್ವೀಕರಿಸಲಿಲ್ಲ. ಸ್ವಂತವಾಗಿ ಟಿ.ಏ.ಸಿ ಸೆಕ್ಯೂರಿಟಿ ಎಂಬ ಒಂದು ಸಾಫ್ಟ್ ವೇರ್ ಸೈಬರ್ ಸೆಕ್ಯೂರಿಟಿ ಕಂಪೆನಿಯನ್ನು ತೆರೆದ. ಆಗ ಆತನಿಗೆ ಕೇವಲ 22 ವರ್ಷ.
ಹ್ಯಾಕರ್ ಎಂದರೆ ಎಲ್ಲಿಯೋ ದೂರದಲ್ಲಿದ್ದರೂ ,ಯಾವುದಾದರೂ ಕಂಪ್ಯೂಟರ್ ಇಲ್ಲವೇ ಡಿವೈಸ್ ಅನ್ನು ತನ ಜಾಣತನದಿಂದ ತನ ವಶಕ್ಕೆ ತೆಗೆದುಕೊಳ್ಳುವ ನೈಪುಣ್ಯತೆ ಪಡೆದವ.ಇದನ್ನು ಪಡೆಯಬೇಕಾದರೆ ಹಲವಾರು ಸಾಫ್ಟ್ ವೇರ್ ಕೋರ್ಸ್ ಗಳನ್ನು ಕಲಿತಿರಬೇಕು. ಅದೇ ರೀತಿ ಅಭ್ಯಾಸವನ್ನೂ ಮಾಡಬೇಕು. ಹಾಗಾದರೆ ಮಾತ್ರ ಹ್ಯಾಕಿಂಗ್ ಕೋರ್ಸ್ ನಲ್ಲಿ ನಿಪುಣರಾಗುತ್ತಾರೆ.
ತ್ರಿಷ್ನೀತ್ ಅರೋರಾ ದಿನೇ ದಿನೇ ಬೆಳೆಯಲಾರಂಭಿಸಿದ. ಈಗ ಆತನ ಕಂಪೆನಿಗೆ 50 ಕ್ಕಿಂತಲು ಹೆಚ್ಚು ಗಿರಾಕಿಗಳಿದ್ದಾರೆ. ಆ ಕಂಪೆನಿಗಳೆಲ್ಲವು ಪ್ರಪಂಚದಲ್ಲೇ ಟಾಫ್ 500 ಒಳಗಿನ ಕಂಪೆನಿಗಳೇ. ರಿಲಯೆನ್ಸ್, ಅಮೂಲ್, ಅವಾನ್ ಸೈಕಲ್ ಮುಂತಾದ ಖಾಸಗಿ ಕಂಪೆನಿಗಳೊಂದಿಗೆ, ಸಿ.ಬಿ.ಐ. ಪಂಜಾಬ್ ಪೊಲೀಸ್,ಗುಜರಾತ್ ಪೊಲೀಸ್, ಸಾರ್ವ ಜನಿಕ ಉದ್ದಿಮೆಗಳು ಸಹ ಈಗ ತ್ರಿಷ್ನಿತ್ ಅರೋರಾ ಕಂಪೆನಿಗೆ ಕ್ಲೈಂಟ್ ಗಳಾಗಿದ್ದಾರೆ.
ಆಯಾ ಕಂಪೆನಿಗಳಿಗೆ ಸೇರಿದ ಸೆಕ್ಯೂರಿಟಿ ಒದಗಿಸುವುದನ್ನು ಅರೋರಾ ಕಂಪೆನಿ ನಿರ್ವಹಿಸುತ್ತದೆ. ಅವು ಹ್ಯಾಕಿಂಗ್ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅರೋರಾ ಕಂಪೆನಿಯದ್ದು. ಇದರಿಂದಾಗಿ ಈಗ ಆತನ ಜೀವನ ಶೈಲಿಯೇ ಬದಲಾಗಿದೆ.